ನವದೆಹಲಿ: ನವೆಂಬರ್ 19ರಿಂದ 29ರವರೆಗೆ ಕತಾರ್ನ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ಎ ತಂಡವನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ತಿಲಕ್ ವರ್ಮ ನಾಯಕ ಮತ್ತು ಆರ್ಸಿಬಿಗೆ ಸತತ 2 ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರಜತ್ ಪಾಟೀದಾರ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಅಭಿಷೇಕ್ ಶರ್ಮ, ವೈಭವ್ ಸೂರ್ಯವಂಶಿ ಸಹಿತ ಭಾರತದ ಟಿ20 ತಾರೆಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಯಾವುದೇ ಆಟಗಾರ ತಂಡದಲ್ಲಿಲ್ಲ. ಭಾರತ ತಂಡ ನ.20ರಂದು ನೇಪಾಳ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ನ.22ಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ವಿರುದ್ಧ ಸೆಣಸಲಿದೆ. ನ.24ಕ್ಕೆ ಯುಎಇ ತಂಡವನ್ನು ಎದುರಿಸಲಿದೆ. ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಅಫ್ಘಾನಿಸ್ತಾನ ಎ ಮತ್ತು ಹಾಂಕಾಂಗ್ ಟೂರ್ನಿಯಲ್ಲಿ ಆಡಲಿರುವ ಇತರ 4 ತಂಡಗಳಾಗಿದ್ದು, ಎ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಭಾರತ ಎ ತಂಡ: ಅಭಿಷೇಕ್ ಶರ್ಮ, ವೈಭವ್ ಸೂರ್ಯವಂಶಿ, ಪ್ರಭ್ಸಿಮ್ರನ್ ಸಿಂಗ್ (ವಿ.ಕೀ), ತಿಲಕ್ ವರ್ಮ (ನಾಯಕ), ರಜತ್ ಪಾಟೀದಾರ್ (ಉಪನಾಯಕ), ರಿಂಕು ಸಿಂಗ್, ಕುಮಾರ್ ಕುಶಾಗ್ರ (ವಿ.ಕೀ), ಸೂರ್ಯಾಂಶ್ ಶೆಡ್ಗೆ, ಶಾಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಷದ್ ಖಾನ್.