Abhishek Sharma: ಟೀಮ್ ಇಂಡಿಯಾದ ಯುವ ಓಪನರ್, ಸ್ಫೋಟಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ ತಮ್ಮ ಸಹೋದರಿ ಮದುವೆಗೆ ಹಾಜರಾಗದೆ ಹೋದ ಸಂಗತಿ ಕೆಲವರ ಗೊಂದಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ ಪರ ಅದ್ಭುತ ಇನ್ನಿಂಗ್ಸ್ ನೀಡಿದ ಅವರು, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರಿಕೆಟ್ ಅಭಿಮಾನಿಗಳ ಅಭಿಮಾನ, ಪ್ರೀತಿ ಸಂಪಾದಿಸಿರುವ ಅಭಿಷೇಕ್, ನಿನ್ನೆ ನಡೆದ ಅವರ ಸಹೋದರಿ ಕೋಮಲ್ ಮದುವೆ ಸಂಭ್ರಮಕ್ಕೆ ಹಾಜರಾಗಲಿಲ್ಲ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯಲ್ಲಿನ ಸಮಸ್ಯೆ ಪರಿಹರಿಸಿ: ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ
ಶುಕ್ರವಾರ (ಅ.3) ಅಮೃತಸರದಲ್ಲಿ ಲುಧಿಯಾನ ಮೂಲದ ಉದ್ಯಮಿ ಲಾವಿಶ್ ಜತೆ ಕೋಮಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವಜೋಡಿಗೆ ಗುರು-ಹಿರಿಯರು ಸೇರಿ ಗಣ್ಯರು ಹರಸಿ, ಆರ್ಶಿವದಿಸಿದರು. ಎಲ್ಲರ ಉಪಸ್ಥಿತಿಯನ್ನು ಕಂಡ ಸಂತಸಪಟ್ಟ ಕೋಮಲ್, ತಮ್ಮ ಅಣ್ಣ ಮದುವೆಯಲ್ಲಿ ಕಾಣಿಸಿಕೊಳ್ಳದೆ ಹೋಗಿದ್ದಕ್ಕೆ ತೀವ್ರ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಕೋಮಲ್ ಪ್ರತಿಕ್ರಿಯಿಸಿದ್ದಾರೆ.
ವಿವಾಹ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇದು ಅದ್ಭುತ ಕ್ಷಣ. ನನ್ನ ಜೀವನದ ಅತ್ಯಂತ ದೊಡ್ಡ ದಿನ. ನಾನೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಅತೀವ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ. ಆದರೆ, ಇದೇ ಸಂದರ್ಭದಲ್ಲಿ ನನ್ನ ಸಹೋದರ ಅಭಿಷೇಕ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅಣ್ಣ ಬರಬೇಕಿತ್ತು" ಎಂದು ಕೋಮಲ್ ಹೇಳಿದ್ದಾರೆ.
ಅ.3ರಂದು ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಎರಡನೇ ಏಕದಿನ ಪಂದ್ಯವನ್ನು ಆಡಲಾಯಿತು. ಕಾನ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ತಂಡದ ಪರ ಆಡಿದರು. ಈ ಕಾರಣದಿಂದಾಗಿ, ಅವರು ತಮ್ಮ ಸಹೋದರಿಯ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಟೀಮ್ ಇಂಡಿಯಾ ಜೆರ್ಸಿಯನ್ನು ಧರಿಸಿ ಪಂದ್ಯಕ್ಕೆ ಹೋಗುವ ಮುನ್ನ ವಿಡಿಯೋ ಕಾಲ್ನಲ್ಲಿ ಮದುವೆ ಸಮಾರಂಭವನ್ನು ವೀಕ್ಷಿಸಿದರು ಎನ್ನಲಾಗಿದೆ,(ಏಜೆನ್ಸೀಸ್).