ಬೆಂಗಳೂರು : ಹವ್ಯಕ ಬ್ಯಾಟ್‌ಮಿಂಟನ್ ಅಸೋಸಿಯೇಷನ್ ವತಿಯಿಂದ ನಡೆದ 9ನೇ ಹವ್ಯಕ ಬ್ಯಾಡ್ಮಿಂಟನ್ ಟೂರ್ನಮೆಂಟ್ ಎರಡು ದಿನಗಳ ಕಾಲ ನಡೆಯಿತು.
ಶನಿವಾರ ಮತ್ತು ಭಾನುವಾರ ನಗರದ ಅಂಜನಾಪುರದಲ್ಲಿರುವ ಸಿಲಿಕಾನ್ ಸಿಟಿ ಸ್ಪೋರ್ಟ್ಸ್ ಅಕಾಡಮಿಯಲ್ಲಿ ನಡೆದ ಟೂರ್ನಿಯಲ್ಲಿ 16 ವರ್ಷ ವಯಸ್ಸಿಗಿಂತ ಕಡಿಮೆ ವಯೋಮಾನದವರು, ಪುರುಷರು, ಮಹಿಳೆಯರು, 35 ವರ್ಷ ಮೇಲ್ಪಟ್ಟವರು, 50 ವರ್ಷ ಮೇಲ್ಪಟ್ಟವರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಸ್ಪೈಸ್ ಬೀಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಹೆಗಡೆ, ಸೈನ್ ಡೆಸ್ಕ್ ಸಿಇಓ ಕೃಪೇಶ್ ಭಟ್, ಆಸ್ಟರ್ ಆರ್.ವಿ. ಆಸ್ಪತ್ರೆಯ ಸರ್ಜನ್ ಡಾ. ಜೆ.ವಿ. ಶ್ರೀನಿವಾಸ್ ಹಾಗೂ ಹೃದ್ರೋಗ ತಜ್ಞ ಡಾ. ದಿವಾಕರ್ ಭಟ್ ಭಾಗವಹಿಸಿ ಸ್ಪರ್ಧಿಗಳಿಗೆ ಶುಭ ಕೋರಿದರು.
ಎರಡು ದಿನಗಳ ಟೂರ್ನಿಯಲ್ಲಿ ವಿಜೇತರಾದವರಿಗೆ ಭಾನುವಾರು ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಅರವಿಂದ ಭಟ್ ಹಾಗೂ ಚಾರ್ಟರ್ಟ್ ಅಕೌಂಟೆಂಟ್ ಪ್ರಕಾಶ್ ಹೆಗಡೆ ಬಹುಮಾನ ವಿತರಿಸಿದರು. ಹಬ್ಯಾ ಸ್ಥಾಪಕರಾದ ಸಿ.ಎ.ಜಗದೀಶ್ ಹೊಸಬಾಳೆ ಹಾಗೂ ಸಿಎಮ್ಎ ಕಮಲಾಕರ ಕೆ.ಎಸ್ ಮತ್ತಿತರರು ಉಪಸ್ಥಿತರಿದ್ದರು.