ಹುಲುನುಬುಯಿರ್: ಈಗಾಗಲೆ ಸೆಮಿೈನಲ್ ಸ್ಥಾನ ಭದ್ರಪಡಿಸಿಕೊಂಡಿರುವ ಅಜೇಯ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಕಾದಾಟ ನಡೆಸಲಿದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹರ್ಮಾನ್‌ಪ್ರೀತ್ ಸಿಂಗ್ ಪಡೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಏಕಪಕ್ಷೀಯವಾಗಿ ಗೆಲುವು ಒಲಿಸಿಕೊಂಡಿರುವ ಭಾರತ ಅಗ್ರಸ್ಥಾನದಲ್ಲಿದ್ದು, ಪಾಕಿಸ್ತಾನ ನಂತರದ ಸ್ಥಾನದಲ್ಲಿದೆ. ಟೂರ್ನಿಯ ಪ್ರಶಸ್ತಿ ೇವರಿಟ್ ಎನಿಸಿರುವ ಹಾಲಿ ಚಾಂಪಿಯನ್ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಯಶಸ್ಸಿನ ಲಯ ಕಾಯ್ದುಕೊಂಡಿದೆ.
ಉಭಯ ತಂಡಗಳ ಇತ್ತೀಚಿನ ಸೆಣಸಾಟದ ಪ್ರಕಾರ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಕಳೆದ ವರ್ಷ ನಡೆದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 10-2 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿದರೆ, ಚೆನ್ನೈನಲ್ಲಿ ನಡೆದ ಇದೇ ಟೂರ್ನಿಯಲ್ಲಿ 4-0 ಅಂತರದಿಂದ ಮಣಿಸಿತ್ತು. ಜತೆಗೆ 2022ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಯುವ ಭಾರತ ತಂಡವು ಪಾಕಿಸ್ತಾನವನ್ನು 1-1 ಡ್ರಾ ಸಾಧಿಸಿದರೆ, 2021ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವನ್ನು 3-4 ರಿಂದ ಮಣಿಸಿ ಭಾರತ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು.
ವಿಶ್ವದ ಅತ್ಯುತ್ತಮ ಡ್ರ್ಯಾಗ್ ಫ್ಲಿಕರ್‌ಗಳಲ್ಲಿ ಒಬ್ಬರೆನಿಸಿರುವ ಹರ್ಮಾನ್‌ಪ್ರೀತ್ ಸಿಂಗ್ ಪ್ಯಾರಿಸ್‌ನಿಂದ ಉತ್ತಮ ಫಾರ್ಮ್ ಮುಂದುವರಿಸಿದ್ದ, ಯುವ ಆಟಗಾರರ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ನನ್ನ ಜೂನಿಯರ್ ತಂಡದ ದಿನಗಳಿಂದಲೂ ಪಾಕಿಸ್ತಾನ ತಂಡದ ಕೆಲವು ಆಟಗಾರರೊಂದಿಗೆ ಆಡುತ್ತಿದ್ದೇನೆ. ನಾವು ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ಆದರೆ ಮೈದಾನದಲ್ಲಿ ಪರಸ್ಪರ ಎದುರಾದಾಗ ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳತ್ತೇವೆ ಎಂದು ಹರ್ಮಾನ್‌ಪ್ರೀತ್ ತಿಳಿಸಿದರು. ಪಾಕಿಸ್ತಾನದಂಥ ತಂಡದ ವಿರುದ್ಧ ಆಡುವಾಗ ಹಿಂದಿನ ಲಿತಾಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಆರಂಭ: ಮಧ್ಯಾಹ್ನ 1.15
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್