ಕ್ರೀಡೆ

ವರ್ಲ್ಡ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ: ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡದ ಸಾಧನೆ

ಬೆಂಗಳೂರು: ಭಾರತದ ಮಹಿಳೆಯರ ಅಂಧರ ಕ್ರಿಕೆಟ್ ತಂಡ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಂಧರ ಸ್ಪೋರ್ಟ್ಸ್ ೆಡರೇಷನ್‌ನ (ಐಬಿಎಸ್‌ಎ) ಚೊಚ್ಚಲ ಆವೃತ್ತಿಯ ವರ್ಲ್ಡ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಮಳೆಬಾಧಿತ ೈನಲ್ ಪಂದ್ಯದಲ್ಲಿ ಕನ್ನಡತಿ ವರ್ಷಾ ಸಾರಥ್ಯದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 114 ರನ್ ಕಲೆಹಾಕಿತು. ಬಳಿಕ ಸುರಿದ ಮಳೆಯಿಂದಾಗಿ ಭಾರತಕ್ಕೆ 9 ಓವರ್‌ಗಳಲ್ಲಿ 42 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಪ್ರತಿಯಾಗಿ ಭಾರತ ತಂಡ 3.3 ಓವರ್‌ಗಳಲ್ಲಿ 1 ವಿಕೆಟ್‌ಗೆ 43 ರನ್‌ಗಳಿಸಿ ಕೂಟದ ಮೊದಲ ಚಾಂಪಿಯನ್ ಎನಿಸಿತು. ಭಾರತದ ಮಹಿಳಾ ತಂಡ ಕೂಟದಲ್ಲಿ ಅಜೇಯವಾಗಿ ಚಿನ್ನದ ಗೆದ್ದ ಸಾಧನೆ ಮಾಡಿತು. ಈ ಮುನ್ನ ಲೀಗ್ ಹಂತದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು.

ಮೊದಲು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಭಾರತೀಯರ ಬಿಗಿ ದಾಳಿ ಎದುರು ಪವರ್‌ಪ್ಲೇನಲ್ಲಿ 29 ರನ್ ಮಾತ್ರ ಗಳಿಸಿತು. ಬಳಿಕ ಸಿ ಲೆವಿಸ್ ಮತ್ತು ಸಿ ವೆಬೆಕ್ 54 ರನ್ ಜತೆಯಾಟವಾಡಿ ಆಸೀಸ್ ಮೊತ್ತ ಏರಿಸಿದರು.

ಪುರುಷರ ವಿಭಾಗದ ೈನಲ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿದ್ದು. ಟೂರ್ನಿಯಲ್ಲಿ ಎರಡನೇ ಬಾರಿಗೆ ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಪಾಕ್ ಎದುರು 18 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಸೋಲಿಗೆ ಸೇಡು ತೀರಿಸುವತ್ತ ಭಾರತ ತಂಡ ಈಗ ದೃಷ್ಟಿ ನೆಟ್ಟಿದೆ.