ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ 72 ಸಾವಿರ ಜನಸಂಖ್ಯೆಯ ಪುಟ್ಟ ದೇಶಕ್ಕೆ ಚಿನ್ನದ ಸಂಭ್ರಮ!

ಪ್ಯಾರಿಸ್: 140 ಕೋಟಿ ಜನಸಂಖ್ಯೆಯ ಭಾರತ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇನ್ನೂ ಚಿನ್ನದ ಪದಕದ ಹುಡುಕಾಟದಲ್ಲಿರುವ ನಡುವೆ, ಕೇವಲ 72 ಸಾವಿರ ಜನಸಂಖ್ಯೆಯ ಕೆರಿಬಿಯನ್​ ದ್ವೀಪರಾಷ್ಟ್ರ ಡೊಮಿನಿಕಾ ಮಹಿಳೆಯರ ಟ್ರಿಪಲ್​ಜಂಪ್​ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದೆ.

ಡೊಮಿನಿಕಾದ ಥಿಯಾ ಲಾಫೊಂಡ್​ 15.02 ಮೀ. ದೂರ ಹಾರಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಜಮೈಕಾದ ಶನೀಕಾ ರಿಕೆಟ್ಸ್​ (14.87 ಮೀ) ಬೆಳ್ಳಿ ಮತ್ತು ಅಮೆರಿಕದ ಜಾಸ್ಮಿನ್​ ಮೂರ್​ (14.67 ಮೀ.) ಕಂಚಿನ ಪದಕ ಗೆದ್ದುಕೊಂಡರು.

30 ವರ್ಷದ ಲಾಫೋಂಡ್​, ಡೊಮಿನಿಕಾಗೆ ಒಲಿಂಪಿಕ್ಸ್​ನಲ್ಲಿ ಮೊಟ್ಟಮೊದಲ ಪದಕ ಗೆದ್ದುಕೊಟ್ಟರು. ಡೊಮಿನಿಕಾದಿಂದ ಕೇವಲ 4 ಕ್ರೀಡಾಪಟುಗಳು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದಾರೆ.