ಚೆನ್ನೈ: ಸತತ ಎರಡು ಸೋಲಿನಿಂದ ಲಯ ತಪ್ಪಿರುವ ಪಾಕಿಸ್ತಾನ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 5ನೇ ಲೀಗ್ ಪಂದ್ಯದಲ್ಲಿ ಸೋಮವಾರ ಅ್ಘಾನಿಸ್ತಾನ ತಂಡವನ್ನು ಎದುರಿಸಲಿದ್ದು, ಚೆಪಾಕ್ ಅಂಗಣದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಡೆಯಲಿರುವ ಪಂದ್ಯ ಕುತೂಹಲ ಕೆರಳಿಸಿದೆ.
ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಉತ್ತಮ ಆರಂಭ ಪಡೆದಿದ್ದ ಬಾಬರ್ ಅಜಮ್ ಬಳಗ ನಂತರ ಆಡಿದ 2 ಪಂದ್ಯಗಳಲ್ಲಿ ಮುಗ್ಗರಿಸಿ ಕಳಪೆ ರನ್‌ರೇಟ್ (-0.456) ಹೊಂದಿದೆ. ಪ್ರಮುಖವಾಗಿ ಬ್ಯಾಟರ್‌ಗಳ ವೈಲ್ಯ ತಂಡಕ್ಕೆ ಹಿನ್ನಡೆ ತಂದಿದೆ. ಬೆಂಗಳೂರಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆಡಂ ಜಂಪಾ ಸ್ಪಿನ್ ದಾಳಿಯ ಎದುರು ಪರದಾಡಿದ್ದ ಪಾಕ್‌ಗೆ ಚೆಪಾಕ್‌ನಲ್ಲೂ ಆ್ಘನ್ ಸ್ಪಿನ್ನರ್‌ಗಳು ಸವಾಲಾಗಲಿದ್ದಾರೆ. ಬಾಬರ್ ಬ್ಯಾಟಿಂಗ್ ವೈಲ್ಯ ತಂಡವನ್ನು ಕಾಡಿದೆ. ಮೊಹಮದ್ ರಿಜ್ವಾನ್ ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ. ಗಾಯದ ಸಮಸ್ಯೆಯ ಬಳಿಕ ವೇಗಿ ಹ್ಯಾರಿಸ್ ರ್ೌ ಲಯ ತಪ್ಪಿದ್ದಾರೆ. ಉಪನಾಯಕ ಹಾಗೂ ಸ್ಪಿನ್ನರ್ ಶಾದಾಬ್ ಖಾನ್ ಾರ್ಮ್ ಕೊರತೆಯ ನಡುವೆ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರರ ಕೊರತೆಯಿದೆ. ಬೌಲಿಂಗ್ ವಿಭಾಗವೂ ಹೆಚ್ಚು ಭರವಸೆ ಮೂಡಿಸಿಲ್ಲ. ಬಾಬರ್ ಪಡೆ ಗೆಲುವಿನ ಹಳಿಗೆ ಮರಳಲು ಸಂಘಟಿತ ಪ್ರದರ್ಶನ ಅಗತ್ಯ ಎನಿಸಿದೆ.
ಇನ್ನು ಆಡಿರುವ 4 ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಗೆಲುವು ಸಾಧಿಸಿರುವ ಅ್ಘಾನಿಸ್ತಾನ, ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಶಾಕ್ ನೀಡಿರುವ ವಿಶ್ವಾಸ ಹೊಂದಿದೆ. ಆದರೂ ಅಂಕಪಟ್ಟಿಯಲ್ಲಿ ಸದ್ಯ ಕೊನೇ ಸ್ಥಾನದಲ್ಲಿ ಉಳಿದಿದೆ. ರಹಮನುಲ್ಲಾ ಗುರ್ಬಜ್ ಮಾತ್ರ ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದ್ದಾರೆ. ಕಳೆದ ಪಂದ್ಯದಲ್ಲಿ ಕಿವೀಸ್ ಎದುರು ಕಂಡ ಸೋಲನ್ನು ಮರೆತು ಪುಟಿದೇಳುವ ನಿರೀಕ್ಷೆಯಲ್ಲಿದೆ.
ಪಾಕ್‌ಗೆ ಸ್ಪಿನ್ ತ್ರಿವಳಿಗಳ ಭೀತಿ
ಚೆಪಾಕ್‌ನ ಚಿದಂಬರಂ ಕ್ರೀಡಾಂಗಣದ ಸ್ಪಿನ್-ಸ್ನೇಹಿ ಪಿಚ್‌ನ ಲಾಭ ಪಡೆಯಲು ಆ್ಘನ್ ಎದುರು ನೋಡುತ್ತಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಂಗ್ಲರನ್ನು ಕಟ್ಟಿಹಾಕಿದ್ದ ಮುಜೀಬ್ ಉರ್ ರೆಹಮಾನ್, ಮೊಹಮದ್ ನಬಿ ಹಾಗೂ ರಶೀದ್ ಖಾನ್ ಪಾಕ್ ಬ್ಯಾಟರ್‌ಗಳ ಎದುರು ಅದೇ ಪ್ರದರ್ಶನ ಪುನರಾವರ್ತಿಸುವ ತವಕದಲ್ಲಿದ್ದಾರೆ. ಆಸೀಸ್ ವಿರುದ್ಧ ಪಾಕ್ ಮಧ್ಯಮ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಆಡಂ ಜಂಪಾಗೆ ವಿಕೆಟ್‌ಗೆ ಒಪ್ಪಿಸಿದ್ದು, ಪಾಕ್‌ನ ವೈಲ್ಯ ತೋರಿಸಿದೆ. ಇದೇ ಭೀತಿಯಿಂದ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ), ಟೂರ್ನಿಯ ವೇಳಾಪಟ್ಟಿ ಬಿಡುಗಡೆಯ ಸಮಯದಲ್ಲಿ ಈ ಪಂದ್ಯವನ್ನು ಬೇರೆ ತಾಣಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮೊರೆ ಹೋಗಿತ್ತು ಎಂಬುದು ಗಮನಾರ್ಹ.
ಏಕದಿನ ಮುಖಾಮುಖಿ-7
ಪಾಕಿಸ್ತಾನ-7
ಅ್ಘಾನಿಸ್ತಾನ-0
ವಿಶ್ವಕಪ್ ಮುಖಾಮುಖಿ- 1
ಪಾಕಿಸ್ತಾನ-1
ಅ್ಘಾನಿಸ್ತಾನ-0
ಆರಂಭ- ಮಧ್ಯಾಹ್ನ 2
ನೇರಪ್ರಸಾರ- ಸ್ಟಾರ್ ಸ್ಪೋರ್ಟ್ಸ್.