ಕ್ರೀಡೆ

ಕಾಮನ್ವೆಲ್ತ್​: ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 2 ಸ್ವರ್ಣ ಪದಕ: ​ಗೆಲುವಿನ ನಗೆ ಬೀರಿದ ಅಮಿತ್​-ನೀತು

ಬರ್ಮಿಂಗ್‌ಹ್ಯಾಮ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾನುವಾರ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಭಾರತ ಮಿಂಚಿದ್ದು, ಎರಡು ಸ್ವರ್ಣ ಪದಕ ಒಲಿದಿದೆ.

ಪುರುಷರ ಫ್ಲೈವೇಟ್ (48-51 ಕೆಜಿ) ವಿಭಾಗದಲ್ಲಿ ಭಾರತದ ಬಾಕ್ಸರ್ ಅಮಿತ್ ಪಂಘಲ್ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತದ ಬಾಕ್ಸರ್ ನೀತು ಗಂಗಾಸ್ ಗೆಲುವಿನ ಹಾರಕ್ಕೆ ಕೊರಳೊಡ್ಡಿದರು.

ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಮೆಕ್‌ಡೊನಾಲ್ಡ್ ಕೀರನ್ ಅವರನ್ನು 5-0 ಅಂತರದಿಂದ ಸೋಲಿಸಿದ ಅಮಿತ್ ಪಂಘಲ್ ಚಿನ್ನದ ಪದಕ ಗೆದ್ದಿದ್ದಾರೆ. ಮೆಕ್‌ಡೊನಾಲ್ಡ್ ಕೀರನ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಮಹಿಳೆಯರ ಕನಿಷ್ಠ ತೂಕ ವಿಭಾಗದ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಡೆಮಿ-ಜೇಡ್ ರೆಸ್ಟನ್ ಅವರನ್ನು ಸೋಲಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು.