ಬೆಂಗಳೂರು: ಯಾವ ಆಟಗಾರರು ಶಾಶ್ವತವಲ್ಲ. ಆದರೆ ತಂಡದಿಂದ ಯಾರನ್ನು ಯಾವಾಗ ಹೊರಗಿಡಬೇಕು ಮತ್ತು ಸೇರ್ಪಡೆಗೊಳಿಸಬೇಕು ಎಂಬುದು ನಿರ್ಣಾಯಕವಾಗಿರುತ್ತದೆ. ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ಮೆಚ್ಚುಗೆ ಮತ್ತು ಟೀಕೆ ಎರಡನ್ನೂ ಎದುರಿಸಲು ಸಜ್ಜಾಗಿರಬೇಕಾಗುತ್ತದೆ ಮತ್ತು ಅದರ ಲಾಭ&ನಷ್ಟಗಳು ತಿಳಿಯಲು ಫಲಿತಾಂಶ ಬರುವವರೆಗೆ ಕಾಯಬೇಕಾಗುತ್ತದೆ. ಭಾರತೀಯ ಕ್ರಿಕೆಟ್ ತಂಡ ಅನೇಕ ಬದಲಾವಣೆಗಳನ್ನು ಕಂಡಿರುವ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ತೆಗೆದುಕೊಂಡ ಕೆಲ ನಿರ್ಧಾರಗಳೂ ಇದೇ ರೀತಿ ಮಿಶ್ರ ಪ್ರತಿಕ್ರಿಯೆ ಮತ್ತು ಮಿಶ್ರ ಲಿತಾಂಶಗಳನ್ನೂ ಕಂಡಿವೆ. ಭಾರತೀಯ ಕ್ರಿಕೆಟ್ನಲ್ಲಿ ಹಿಂದೆ "ಆಯ್ಕೆಗಾರರನ್ನು ಜೋಕರ್'ಗಳೆಂದು ಟೀಕಿಸಿದ ನಿದರ್ಶನಗಳೂ ಇವೆ. ಆದರೆ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಭಾರತೀಯ ಕ್ರಿಕೆಟ್ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗರ್ಕರ್ ಕೆಲ ದಿಟ್ಟ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. 2026ರ ಟಿ20 ವಿಶ್ವಕಪ್, 2027ರ ಏಕದಿನ ವಿಶ್ವಕಪ್, ಡಬ್ಲ್ಯುಟಿಸಿ ಫೈನಲ್ (ಅರ್ಹತೆ ಪಡೆದರೆ) ಈ ನಿರ್ಧಾರಗಳ ಫಲಿತಾಂಶವನ್ನು ತಿಳಿಸಲಿವೆ. 2023ರ ಜುಲೈನಲ್ಲಿ ಆಯ್ಕೆ ಸಮಿತಿ ಚುಕ್ಕಾಣಿ ಹಿಡಿದ ಅಗರ್ಕರ್, ಕೋಚ್ಗಳಾದ ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್ ಸಹಮತದೊಂದಿಗೆ ತೆಗೆದುಕೊಂಡ ಕೆಲ ನಿರ್ಧಾರಗಳ ಸಂಪ್ತ ಮೆಲುಕು ಇಲ್ಲಿದೆ...
ಪೂಜಾರ, ರಹಾನೆಗೆ ಕೊಕ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ (ಡಬ್ಲ್ಯುಟಿಸಿ) ಮೊದಲೆರಡೂ ಆವೃತ್ತಿಗಳಲ್ಲಿ ಭಾರತ ೈನಲ್ಗೇರಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಮೂರನೇ ಆವೃತ್ತಿಯ ಆರಂಭದಲ್ಲಿ ಅನುಭವಿ ಬ್ಯಾಟರ್ಗಳಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಕೈಬಿಡುವ ದಿಟ್ಟ ನಿರ್ಧಾರವನ್ನು ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡಿತು. ಆದರೆ ಯುವಕರಿಗೆ ಆದ್ಯತೆ ನೀಡುವ ಈ ನಿರ್ಧಾರ ಪೂರ್ಣಪ್ರಮಾಣದಲ್ಲಿ ಯಶ ಕಾಣಲಿಲ್ಲ. ಡಬ್ಲ್ಯುಟಿಸಿ 3ನೇ ಆವೃತ್ತಿಯಲ್ಲಿ ಭಾರತ ೈನಲ್ಗೇರಲು ವಿಲವಾಗಿದ್ದು ಇದಕ್ಕೆ ಪುಷ್ಟಿ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಅನುಭವಿಸಿದ ವೈಟ್ವಾಷ್ ಕೂಡ ಇದರ ಸೈಡ್ ಎೆಕ್ಟ್ ಎನ್ನಬಹುದು.
ಸ್ಥಿತ್ಯಂತರದ ನಿರ್ವಹಣೆ
ಭಾರತೀಯ ಕ್ರಿಕೆಟ್ನಲ್ಲಿ "ಹೊಸ ನೀರು ಬಂದು, ಹಳೆಯ ನೀರು ಕೊಚ್ಚಿಕೊಂಡು ಹೋಗುವ' ಸಮಯದಲ್ಲೇ ಅಗರ್ಕರ್ ಆಯ್ಕೆ ಸಮಿತಿಯ ಚುಕ್ಕಾಣಿ ಹಿಡಿದಿದ್ದರು. ಅದನ್ನು ಇದುವರೆಗೆ ತಕ್ಕಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದ ಶ್ರೇಯ ಅಗರ್ಕರ್ ಅವರದು. ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರವೀಂದ್ರ ಜಡೇಜಾ ವಿದಾಯ ಹೇಳಿದಾಗ, ಟೆಸ್ಟ್ ಕ್ರಿಕೆಟ್ನಿಂದ ಆರ್. ಅಶ್ವಿನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅಲ್ಪ ಅಂತರದಲ್ಲಿ ನಿರ್ಗಮಿಸಿದಾಗ ಭಾರತ ತಂಡಕ್ಕೆ ಹೆಚ್ಚಿನ ಹೊಡೆತ ಬೀಳದಂತೆ, ಪಕ್ವ ಯುವ ಆಟಗಾರರನ್ನೇ ಆರಿಸುವಲ್ಲಿ ಅಗರ್ಕರ್ ಯಶ ಕಂಡಿದ್ದಾರೆ.
ಕಾರ್ಯದೊತ್ತಡ ಸಮನ್ವಯ
ಪ್ರಮುಖ ಆಟಗಾರರ ಕಾರ್ಯದೊತ್ತಡದ ಸಮನ್ವಯ ಸಾಧಿಸುವಲ್ಲಿ ಅಗರ್ಕರ್ ಯೋಜನೆಗಳು ಲಿಸಿವೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾರನ್ನು ಮಹತ್ವದ ಟೂರ್ನಿಗಳಿಗೆ ಫಿಟ್ ಆಗಿಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಟಿ20 ವಿಶ್ವಕಪ್, ಚಾಂಪಿಯನ್ ಟ್ರೋಫಿ ವೇಳೆ ಹಾರ್ದಿಕ್ ಪೂರ್ಣ ಫಿಟ್ ಆಗಿದ್ದು ಗೆಲುವಿಗೆ ನೆರವಾಯಿತು. 2023ರ ತವರಿನ ಏಕದಿನ ವಿಶ್ವಕಪ್ ವೇಳೆ ಹಾರ್ದಿಕ್ ಗಾಯದ ಸಮಸ್ಯೆಯಿಂದಾಗಿ ಅರ್ಧದಲ್ಲೇ ಹೊರಬಿದ್ದಿದ್ದರು. ಇದು ತಂಡಕ್ಕೂ ಫೈನಲ್ ವೇಳೆ ಹಿನ್ನಡೆ ತಂದಿತ್ತು. ನಂತರ ಹಾರ್ದಿಕ್ಗೆ ಟಿ20 ನಾಯಕತ್ವ ನೀಡದೆ ಫಿಟ್ನೆಸ್ನತ್ತ ಗಮನ ನೀಡಲು ಸೂಚಿಸಲಾಗಿತ್ತು. ಇನ್ನು ಬುಮ್ರಾಗೂ ಟೆಸ್ಟ್ ತಂಡದ ಪೂರ್ಣಕಾಲಿಕ ನಾಯಕತ್ವ ವಹಿಸದೆ ಫಿಟ್ನೆಸ್ಗೆ ಆದ್ಯತೆ ನೀಡಲಾಯಿತು. ಇಂಗ್ಲೆಂಡ್ನಲ್ಲಿ ಬುಮ್ರಾ 3 ಟೆಸ್ಟ್ ಮಾತ್ರ ಆಡುತ್ತಾರೆ ಎಂದು ಅಗರ್ಕರ್ ಸರಣಿಗೆ ಮೊದಲೇ ಘೋಷಿಸಿದ್ದರು. ಆಸೀಸ್ ಪ್ರವಾಸದಲ್ಲಿ ಎಲ್ಲ 5 ಟೆಸ್ಟ್ ಆಡಿ ಬುಮ್ರಾ, ಚಾಂಪಿಯನ್ಸ್ ಟ್ರೋಫಿ ತಪ್ಪಿಸಿಕೊಂಡಿದ್ದರಿಂದ ಪಾಠ ಕಲಿಯಲಾಯಿತು.
ಸೂರ್ಯ, ಗಿಲ್ಗೆ ನಾಯಕತ್ವ
ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ವಿದಾಯ ಹೇಳಿದಾಗ ಹಾರ್ದಿಕ್ ಪಾಂಡ್ಯ ಹೊಸ ನಾಯಕರಾಗುತ್ತಾರೆ ಎಂಬುದೇ ಎಲ್ಲರ ನಿರೀೆ ಆಗಿತ್ತು. ಆದರೆ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ರನ್ನು ಉತ್ತರಾಧಿಕಾರಿಯಾಗಿ ಆರಿಸಿ ಅಚ್ಚರಿ ನೀಡಿತು. ರೋಹಿತ್ ಶರ್ಮ ಟೆಸ್ಟ್ಗೆ ವಿದಾಯ ಹೇಳಿದಾಗಲೂ ಮುಂದಿನ ನಾಯಕನ ಬಗ್ಗೆ ಗೊಂದಲಗಳಿದ್ದವು. ಆದರೆ, ವಿದೇಶದಲ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿರದ ನಡುವೆಯೂ ಶುಭಮಾನ್ ಗಿಲ್ಗೆ ಪಟ್ಟಾಭಿಷೇಕ ಮಾಡಿ ಅಗರ್ಕರ್ ಬಳಗ ಮತ್ತೊಂದು ಅಚ್ಚರಿ ನೀಡಿತು. ಇಂಗ್ಲೆಂಡ್ ಪ್ರವಾಸದಲ್ಲಿ ಯುವ ತಂಡ ಯಶ ಕಂಡ ಬಳಿಕ ಇನ್ನಷ್ಟು ಧೈರ್ಯ ಮಾಡಿರುವ ಅಗರ್ಕರ್ ಬಳಗ, ಏಕದಿನ ತಂಡದ ನಾಯಕತ್ವವನ್ನೂ ಅವರಿಗೆ ವಹಿಸಿದೆ. ರೋಹಿತ್ ಶರ್ಮಗೆ 2027ರ ಏಕದಿನ ವಿಶ್ವಕಪ್ವರೆಗೆ ನಾಯಕರಾಗಿ ಮುಂದುವರಿಯುವ ಆಸೆ ಇದ್ದರೂ, ಆಗ ಅವರಿಗೆ 41 ವರ್ಷ ಆಗುವುದರಿಂದ ಅಗರ್ಕರ್ ಬಳಗ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಗಿಲ್ಗೆ ಈಗಲೇ ಏಕದಿನ ತಂಡದ ನಾಯಕತ್ವ ವಹಿಸಿದ್ದು ಅವಸರದಂತೆ ಕಂಡರೂ, ಈ ನಿರ್ಧಾರದ ಲಾಭ&ನಷ್ಟ ತಿಳಿಯಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.
ಮಹತ್ವದ ಟೂರ್ನಿಗೆ ವಿನ್ನಿಂಗ್ ಟೀಮ್
2023ರ ತವರಿನ ಏಕದಿನ ವಿಶ್ವಕಪ್ಗೆ ಭಾರತ ತಂಡದ ಆಯ್ಕೆ ಅಗರ್ಕರ್ ಬಳಗದ ಮೊದಲ ಪ್ರಮುಖ ನಿರ್ಧಾರ. ಸತತ 10 ಗೆಲುವಿನೊಂದಿಗೆ ಈ ತಂಡ ಬಹುತೇಕ ಯಶ ಸಾಧಿಸಿದರೂ, ಚಾಂಪಿಯನ್ ಪಟ್ಟ ಮಾತ್ರ ಒಲಿದಿರಲಿಲ್ಲ. ನಂತರ ಅಮೆರಿಕ&ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆದ ಟಿ20 ವಿಶ್ವಕಪ್ಗೆ ನಾಲ್ವರು ಸ್ಪಿನ್ನರ್ಗಳನ್ನು ಆರಿಸಿದ್ದು ಅಚ್ಚರಿ ತಂದಿತ್ತು. ಆದರೆ ಕೆರಿಬಿಯನ್ನ ಬದಲಾದ ಪಿಚ್ ಸ್ವಭಾವವನ್ನು ಅರಿತು ತೆಗೆದುಕೊಂಡ ಈ ಲೆಕ್ಕಾಚಾರದ ನಿರ್ಧಾರ ಯಶ ತಂದುಕೊಟ್ಟಿತ್ತು. ಹಾಲಿ ವರ್ಷ ಚಾಂಪಿಯನ್ಸ್ ಟ್ರೋಫಿಗೂ ಮೂವರು ಆಲ್ರೌಂಡರ್ಗಳ ಸಹಿತ ಐವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿ ಯಶಸ್ಸು ಸಾಧಿಸಲಾಯಿತು. ಅದರಲ್ಲೂ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಕೊನೇಕ್ಷಣದಲ್ಲಿ ಯಶಸ್ವಿ ಜೈಸ್ವಾಲ್ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದ್ದು ನಿರ್ಣಾಯಕವಾಯಿತು.