ಕಾನ್ಪುರ: ಭಾರತ- ಬಾಂಗ್ಲಾದೇಶ ಟೆಸ್ಟ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಬಾಂಗ್ಲಾದೇಶದ ಅಭಿಮಾನಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡದ ಸೂಪರ್ ್ಯಾನ್ ಎಂದು ಕರೆದುಕೊಳ್ಳುವ ರಾಬಿ ಕ್ರೀಡಾಂಗಣದ ಸಿ ಸ್ಟಾೃಂಡ್‌ನಲ್ಲಿ ಹುಲಿ ವೇಷ ಧರಿಸಿ ತಂಡವನ್ನು ಬೆಂಬಲಿಸುತ್ತಿದ್ದರು. ಇದಕ್ಕಿದ್ದಂತೆ ಸ್ಟಾೃಂಡ್‌ನಲ್ಲಿ ನೋವಿನಿಂದ ಬಳಲುತ್ತಿದ್ದ ರಾಬಿ ಮೂರ್ಛೆ ಹೋದರು. ತಕ್ಷಣವೇ ಸ್ಥಳೀಯ ಪೊಲೀಸರು ಆತನನ್ನು ಸ್ಟಾೃಂಡ್‌ನಿಂದ ಹೊರಕರೆತಂದು ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಮೊದಲಿಗೆ ಬಾಂಗ್ಲಾ ತಂಡದ ಅಭಿಮಾನಿ ರಾಬಿ ಮೇಲೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಹಲ್ಲೆ ನಡೆಸಿದರು ಎಂದು ವರದಿಯಾಗಿತ್ತು.
ಆದರೆ ಈ ವರದಿಗಳು ಆಧಾರರಹಿತವಾಗಿವೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ‘ಪಂದ್ಯದ ವೇಳೆ ನಾನು ಅಸ್ವಸ್ಥಗೊಂಡಿದ್ದು, ಪೊಲೀಸರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದರು. ಸದ್ಯ ನಾನು ಚೇತರಿಸಿಕೊಂಡಿದ್ದು, ನನ್ನ ಹೆಸರು ರಾಬಿ ಮತ್ತು ನಾನು ಬಾಂಗ್ಲಾದೇಶದಿಂದ ಬಂದಿದ್ದೇನೆ’ ಎಂದು ಅವರು ಕಿರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದು 2015ರ ಬಳಿಕ ತವರಿನ ಟೆಸ್ಟ್ ಸರಣಿಯಲ್ಲಿ ಟಾಸ್ ಗೆದ್ದು ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಮೊದಲ ದೃಷ್ಟಾಂತ ಎನಿಸಿತು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಆರಂಭಿಕ ಹಂತದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲಕರ ಆಗುವಂತಿದ್ದ ಪಿಚ್‌ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿತು. ಪಂದ್ಯಕ್ಕೆ ಮಂದಬೆಳಕು, ಮಳೆ ಅಡಚಣೆ ತಂದಿದ್ದರಿಂದ ನಿಗದಿತ ಸಮಯಕ್ಕೆ ಮುನ್ನವೇ ಮಧ್ಯಾಹ್ನ 3 ಗಂಟೆಗೆ ದಿನದ ಆಟವನ್ನು ಮೊಟಕುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು. ದಿನದಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್ ಕಲೆಹಾಕಿದೆ. ಮಾಮಿನುಲ್ ಹಕ್ ಜತೆ ಅನುಭವಿ ಮುಶ್ಫಿಕರ್ ರಹೀಂ (6*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.