ಗುಜರಾತ್​ ಜೈಂಟ್ಸ್ ತಂಡದ ನಾಯಕಿ​ ಆಶ್ಲೀ ಗಾರ್ಡ್ನರ್ ಮತ್ತು ಅವರ ಸಂಗಾತಿ ಮೋನಿಕಾ ರೈಟ್​ 
WPL

ಗುಜರಾತ್​ ಜೈಂಟ್ಸ್ ತಂಡದ ನಾಯಕಿ​ ಓರ್ವ ಸಲಿಂಗಕಾಮಿ: ಆಶ್ಲೀ ಗಾರ್ಡ್ನರ್ ಸಂಗಾತಿ ಯಾರು ಗೊತ್ತಾ? Ashleigh Gardner

ಪ್ರಮುಖ ಮುಖ್ಯಾಂಶಗಳು

  • ಡಬ್ಲ್ಯುಪಿಎಲ್​ನಲ್ಲಿ ಈ ಬಾರಿ ಗುಜರಾತ್​ ತಂಡವನ್ನು ವಿದೇಶಿ ಆಟಗಾರ್ತಿ ಆಶ್ಲೀ ಗಾರ್ಡ್ನರ್ ಮುನ್ನಡೆಸುತ್ತಿದ್ದಾರೆ
  • ಗಾರ್ಡ್ನರ್​ ಓರ್ವ ಸಲಿಂಗಕಾಮಿ ಎಂಬ ಸಂಗತಿ ಬಹುತೇಕ ಮಂದಿಗೆ ತಿಳಿದಿಲ್ಲ
  • ಗಾರ್ಡ್ನರ್​ ತಮ್ಮ ದೀರ್ಘಕಾಲದ ಗರ್ಲ್​ಫ್ರೆಂಡ್​ ಮೊನಿಕಾ ರೈಟ್ ಅವರನ್ನು ಮದುವೆ ಆಗಿದ್ದಾರೆ
Ashleigh Gardner : ಪ್ರಸ್ತುತ ಭಾರತದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ ( WPL ) ನಡೆಯುತ್ತಿದೆ. ಜನವರಿ 9ರಂದು ಆರಂಭವಾದ ಈ ಮೆಗಾ ಟೂರ್ನಿ ಫೆ.5ಕ್ಕೆ ಮುಕ್ತಾಯಗೊಳ್ಳಲಿದೆ. ಸದ್ಯ ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಒಂದೂ ಪಂದ್ಯವನ್ನು ಸೋಲದೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಅಗ್ರಸ್ಥಾನದಲ್ಲಿದೆ. ಈವರೆಗೂ ಆಡಿದ 5 ಪಂದ್ಯಗಳಲ್ಲಿ ಆರ್​ಸಿಬಿ ಐದನ್ನೂ ಗೆದ್ದಿದೆ. ಎರಡನೇ ಸ್ಥಾನದಲ್ಲಿ ಗುಜರಾತ್​ ಜೈಂಟ್ಸ್ ತಂಡವಿದೆ. ಈವರೆಗೂ 6 ಪಂದ್ಯಗಳನ್ನು ಆಡಿರುವ ಗುಜರಾತ್​ ಮೂರರಲ್ಲಿ ಸೋತು, ಮೂರರಲ್ಲಿ ಗೆಲುವು ಸಾಧಿಸಿದೆ. ಈ ಬಾರಿ ಗುಜರಾತ್​ ತಂಡವನ್ನು ವಿದೇಶಿ ಆಟಗಾರ್ತಿ ಆಶ್ಲೀ ಗಾರ್ಡ್ನರ್ ಮುನ್ನಡೆಸುತ್ತಿದ್ದಾರೆ. ಗಾರ್ಡ್ನರ್​ ಓರ್ವ ಸಲಿಂಗಕಾಮಿ ಎಂಬ ಸಂಗತಿ ಬಹುತೇಕ ಮಂದಿಗೆ ತಿಳಿದಿಲ್ಲ.
ಹೌದು, ಆಶ್ಲೀ ಗಾರ್ಡ್ನರ್ (Ashleigh Gardner) ಅವರು ಓರ್ವ ಸಲಿಂಗಕಾಮಿ. ಸದ್ಯ ಡಬ್ಲ್ಯುಪಿಎಲ್​ನಲ್ಲಿ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿರುವ ಗಾರ್ಡ್ನರ್​, ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ಅವರು ತಮ್ಮ ದೀರ್ಘಕಾಲದ ಗರ್ಲ್​ಫ್ರೆಂಡ್​ ಮೊನಿಕಾ ರೈಟ್ (Monica Wright) ಮದುವೆ ಆಗಿದ್ದಾರೆ. ಇವರಿಬ್ಬರ ವಿವಾಹ 2025ರ ಏಪ್ರಿಲ್‌ನಲ್ಲಿ ನಡೆಯಿತು. 2024ರ ಏಪ್ರಿಲ್‌ನಲ್ಲಿ ಇಬ್ಬರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇಬ್ಬರು 2021ರಿಂದ ಸಂಬಂಧದಲ್ಲಿದ್ದರು.
ಗಾರ್ಡ್ನರ್​ ಮತ್ತು ಮೋನಿಕಾ ನಡುವಿನ ಸಂಬಂಧ ಜಾಗತಿಕವಾಗಿ ಭಾರಿ ಸುದ್ದಿಯಾಯಿತು. ಅಂದಹಾಗೆ, ಗಾರ್ಡ್ನರ್​ ಅವರು ತಮ್ಮ ವೈಯಕ್ತಿಕ ಜೀವನದ ವಿಚಾರದಲ್ಲಿ ಮುಕ್ತವಾಗಿದ್ದಾರೆ. ತಾನೊಬ್ಬ ಸಲಿಂಗಕಾಮಿ ಸಮುದಾಯದ (LGBTQ+) ಸದಸ್ಯೆ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಸಲಿಂಗಕಾಮಿ ಸಮುದಾಯದ ಬಗ್ಗೆ ತಮ್ಮ ಧ್ವನಿ ಎತ್ತಿದ್ದಾರೆ ಮತ್ತು ಅವರ ಹಕ್ಕುಗಳ ಪ್ರತಿಪಾದಕರಾಗಿದ್ದಾರೆ.
ಇದಿಷ್ಟೇ ಅಲ್ಲದೆ, ಗಾರ್ಡ್ನರ್ ಅವರು ಸಲಿಂಗಕಾಮಿ ಎಂದು ಹೇಳಿಕೊಳ್ಳುವುದರಲ್ಲಿ ಹಿಂಜರಿಯುವುದಿಲ್ಲ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಂಗಾತಿ ಮೋನಿಕಾ ಜತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಬ್ಬರು ಒಟ್ಟಿಗೆ ಸಮಯ ಕಳೆದಾಗ ಸೆರೆಹಿಡಿದಂತಹ ಸುಂದರ ಕ್ಷಣದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇನ್ನು ವೈಯಕ್ತಿಕ ಜೀವನದ ಜೊತೆಗೆ, ಆಶ್ಲೀ ಗಾರ್ಡ್ನರ್ ಅವರು ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ವಿಶ್ವದ ಶ್ರೇಷ್ಠ ಆಲ್-ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ಅವರು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.
ಡಬ್ಲ್ಯುಪಿಎಲ್​ ವಿಚಾರಕ್ಕೆ ಬರುವುದಾದರೆ, ಹರಾಜಿನಲ್ಲಿ 3.50 ಕೋಟಿ ರೂ.ಗೆ ಆಶ್ಲೀ ಗಾರ್ಡ್ನರ್ ಗುಜರಾತ್​ ಜೈಂಟ್ಸ್​ ತಂಡವನ್ನು ಸೇರಿದರು. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ತಂಡದ ಇತರ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದಾಗ, ಗಾರ್ಡ್ನರ್ ಏಕಾಂಗಿ ಹೋರಾಟ ನಡೆಸಿ 43 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು. ಬೌಲಿಂಗ್‌ನಲ್ಲಿಯೂ ಮಿಂಚುತ್ತಿರುವ ಇವರು, ಸ್ಮೃತಿ ಮಂಧಾನ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ಆಲ್‌ರೌಂಡ್ ಪ್ರದರ್ಶನ ಮುಂದುವರಿಸಿದ್ದಾರೆ. ಒಟ್ಟಾರೆಯಾಗಿ, ಈ ಆವೃತ್ತಿಯಲ್ಲಿ ಐದು ಪಂದ್ಯಗಳಿಂದ ಸುಮಾರು 191 ರನ್ ಕಲೆಹಾಕಿರುವ ಅವರು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿದ್ದಾರೆ, (ಏಜೆನ್ಸೀಸ್​).