ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಆಯೋಜಿಸಿದ್ದ 7 ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ 2025 ರಲ್ಲಿ 20,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು, ಇದು ಭಾರತದ ಅತಿ ದೊಡ್ಡ ವಿದ್ಯಾರ್ಥಿ ನೇತೃತ್ವದ ಮ್ಯಾರಥಾನ್‌ಗಳಲ್ಲಿ ಒಂದಾಗಿದೆ.
ವರ್ಷದ ಕಾರ್ಯಕ್ರಮಕ್ಕೆ ಒಂದು ಹೊಸ ಸೇರ್ಪಡೆಯೆಂದರೆ "ಮಣಿಪಾಲ್ ಗ್ಲೋಬಲ್ ವರ್ಚುವಲ್ 5K ರನ್", ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ವಿಶಿಷ್ಟ ಉಪಕ್ರಮವು ಪ್ರಪಂಚದಾದ್ಯಂತದ ಓಟಗಾರರು ದೂರದಿಂದಲೇ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು,
ಇದರಿಂದಾಗಿ ಮ್ಯಾರಥಾನ್ ಅನ್ನು ಹೆಚ್ಚು ಒಳಗೊಳ್ಳುವ ಮತ್ತು ಜಾಗತಿಕ ಪ್ರೇಕ್ಷಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿತು. ಪ್ರಪಂಚದಾದ್ಯಂತದ 7000+ ಓಟಗಾರರು ಇದರಲ್ಲಿ ಭಾಗವಹಿಸಿದರು.
ಅಮೆರಿಕ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಟರ್ಕಿ, ಇಥಿಯೋಪಿಯಾ, ಕೀನ್ಯಾ, ನಮೀಬಿಯಾ, ಜಪಾನ್, ಉಗಾಂಡಾ, ಮಲಾವಿ, ಕಾಂಗೋ, ಘಾನಾ, ಸುಡಾನ್, ಅಬುಧಾಬಿ ಯುಎಇ ಮತ್ತು ಆಸ್ಟ್ರೇಲಿಯಾ ದೇಶಗಳಿಂದ 100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಹೆಚ್ಚಿನ ಉತ್ಸಾಹ ಮತ್ತು ಹರ್ಷೋದ್ಗಾರದಿಂದ ಭಾಗವಹಿಸಿದ್ದರು.
ಮಣಿಪಾಲ್ ಮ್ಯಾರಥಾನ್‌ನ ಪ್ರಮುಖ ಅಂಶವೆಂದರೆ ಸಮರ್ಥನಂ ಟ್ರಸ್ಟ್ ಮತ್ತು ಗಂಗಾ ಫೌಂಡೇಶನ್‌ನ ಸಹಯೋಗದೊಂದಿಗೆ ಭಾರತದಾದ್ಯಂತ 300 ಕ್ಕೂ ಹೆಚ್ಚು ದೃಷ್ಟಿ ವಿಕಲಚೇತನರು ಮತ್ತು 200 ಕ್ಕೂ ಹೆಚ್ಚು ದೈಹಿಕವಾಗಿ ಅಶಕ್ತ ವ್ಯಕ್ತಿಗಳು ಭಾಗವಹಿಸಿದ್ದರು.. ಇದು ಮಾಹೆಯ ಸದುದ್ದೇಶವಾದ ಎಲ್ಲರನ್ನು ಒಳಗೊಳ್ಳುವಿಕೆಯನ್ನು ಚೈತನ್ಯವನ್ನು ಎತ್ತಿ ತೋರಿಸಿತು.
ವಿವಿಧ ವಿಭಾಗಗಳಲ್ಲಿ ವಿಜೇತರು:
ಪೂರ್ಣ ಮ್ಯಾರಥಾನ್ (42 ಕಿಮೀ)
ಪುರುಷರ ವಿಭಾಗ
1ನೇಬಹುಮಾನ: ಸಚಿನ್ ಪೂಜಾರಿ
2ನೇ ಬಹುಮಾನ: ನಂಜುಂಡಪ್ಪ ಎಂ
3ನೇ ಬಹುಮಾನ: ಚೆರುಯೋಟ್ ಡ್ಯಾನಿಯಲ್
ಪೂರ್ಣ ಮ್ಯಾರಥಾನ್ (42 ಕಿಮೀ)
ಮಹಿಳೆಯರ ವಿಭಾಗ
1ನೇ ಬಹುಮಾನ: ಲೆಶಾರ್ಜ್ ಸೇನೈಟ್ ಕೆಫೆಲೆಗನ್
2ನೇ ಬಹುಮಾನ: ಆಸಾ ಟಿಪಿ
3ನೇ ಬಹುಮಾನ: ಶಕುಂತಲಾ ದೇವಿ
ಅರ್ಧ ಮ್ಯಾರಥಾನ್ (21 ಕಿಮೀ)
ಪುರುಷರು
1ನೇ ಬಹುಮಾನ: ಅಂಕುಶ್ ಹಕ್ಕೆ
2ನೇ ಬಹುಮಾನ: ಕಿಪ್ಟೂ ಅಬ್ರಹಾಂ
3ನೇ ಬಹುಮಾನ: ಶಿವಮ್ ಯಾದವ್
ಅರ್ಧ ಮ್ಯಾರಥಾನ್ (21 ಕಿಮೀ)
ಮಹಿಳೆಯರು
1ನೇ ಬಹುಮಾನ: ಕೆಎಮ್ ಲಕ್ಷ್ಮಿ
2ನೇ ಬಹುಮಾನ: ನಂದಿನಿ ಜಿ
3ನೇ ಬಹುಮಾನ: ಮೋಲ್ಲೇಶ್ವರಿ
ಸಮಯದ ಓಟಗಳು (10 ಕಿಮೀ)
ಪುರುಷರು
1ನೇ ಬಹುಮಾನ: ಲವ್ ಚೌಧರಿ
2ನೇ ಬಹುಮಾನ: ಎಆರ್ ರೋಹಿತ್