ರಾಷ್ಟ್ರೀಯ ಸ್ಕೂಲ್ ಗೇಮ್ಸ್ 19 ವಯೋಮಿತಿ ಚೆಸ್: ಸಿಬಿಎಸ್ಇ, ಮಹಾರಾಷ್ಟ್ರಕ್ಕೆ ಪ್ರಶಸ್ತಿ
ಬೆಂಗಳೂರು: ಸಿಬಿಎಸ್ಇ ಮತ್ತು ಮಹಾರಾಷ್ಟ್ರ ತಂಡಗಳು ಬೆಂಗಳೂರಿನ ಗ್ರೀನ್ವುಡ್ ಹೈಸ್ಕೂಲ್ನಲ್ಲಿ ನಡೆದ 69ನೇ ರಾಷ್ಟ್ರೀಯ ಸ್ಕೂಲ್ ಗೇಮ್ಸ್ 19 ವಯೋಮಿತಿ ಚೆಸ್ ಚಾಂಪಿಯನ್ಷಿಪ್ನಲ್ಲಿ (69th National School Games Under-19 Boys - Girls Chess Championship) ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಭಾರತೀಯ ಸ್ಕೂಲ್ ಗೇಮ್ಸ್ ಒಕ್ಕೂಟದ ಮಾನ್ಯತೆಯೊಂದಿಗೆ ಸಿಐಎಸ್ಸಿಇ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ವಿವಿಧ ರಾಜ್ಯ ಮತ್ತು ಶಿಕ್ಷಣ ಮಂಡಳಿಗಳಿಂದ 64 ತಂಡಗಳಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧಿಸಿದರು. ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ರನ್ನರ್ಅಪ್ ಮತ್ತು ತಮಿಳುನಾಡು 2ನೇ ರನ್ನರ್ಅಪ್ ಸ್ಥಾನ ಗಳಿಸಿತು.
ಬಾಲಕಿಯರ ವಿಭಾಗದಲ್ಲಿ ಸಿಬಿಎಸ್ಇ ಮೊದಲ ರನ್ನರ್ಅಪ್ ಮತ್ತು ಸಿಐಎಸ್ಸಿಇ 2ನೇ ರನ್ನರ್ಅಪ್ ಸ್ಥಾನ ಪಡೆಯಿತು. ಕರ್ನಾಟಕದ ಮೊದಲ ಗ್ರಾಂಡ್ ಮಾಸ್ಟರ್ ತೇಜ್ಕುಮಾರ್ ಪ್ರಶಸ್ತಿ ವಿತರಿಸಿದರು.