ಶೂಟಿಂಗ್ ಸ್ಪರ್ಧೆಯ ಬಾಲಕರ-ಬಾಲಕಿಯರ ವಿಭಾಗದಲ್ಲಿ ಪದಕಕ್ಕೆ ಕೊರಳೊಡ್ಡಿದ ಕ್ರೀಡಾಪಟುಗಳು. ಏಜೆನ್ಸಿ
ಕ್ರೀಡೆ

5ನೇ ಆವೃತ್ತಿ ಮಿನಿ ಕರ್ನಾಟಕ ಕ್ರೀಡಾಕೂಟ: ವೇಯ್ಟ್ ಲಿಫ್ಟಿಂಗ್‌ನಲ್ಲಿ ದ.ಕನ್ನಡ, ಶಿವಮೊಗ್ಗ ಪ್ರಾಬಲ್ಯ

ಮಿನಿ ಕರ್ನಾಟಕ ಕ್ರೀಡಾಕೂಟ ಐದನೇ ಆವೃತ್ತಿಯ ಸ್ಪರ್ಧೆಯ ಮೊದಲ ದಿನ ಬೆಂಗಳೂರು ನಗರ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರು. ಭಾನುವಾರ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಶೂಟಿಂಗ್ ರೇಂಜ್‌ನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್‌ರೈಲ್ ಪಿಸ್ತೂಲ್‌ನ ಬಾಲಕರ-ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ನಗರ ತಂಡದ ಶ್ರವಣ್ ಎಂ.ಎಸ್ ಹಾಗೂ ದೇವಾಂಶಿ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಬೆಂಗಳೂರು: ಮಿನಿ ಕರ್ನಾಟಕ ಕ್ರೀಡಾಕೂಟ ಐದನೇ ಆವೃತ್ತಿಯ ಸ್ಪರ್ಧೆಯ ಮೊದಲ ದಿನ ಬೆಂಗಳೂರು ನಗರ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರು. ಭಾನುವಾರ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಶೂಟಿಂಗ್ ರೇಂಜ್‌ನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯ 10 ಮೀಟರ್ ಏರ್‌ರೈಲ್ ಪಿಸ್ತೂಲ್‌ನ ಬಾಲಕರ-ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ನಗರ ತಂಡದ ಶ್ರವಣ್ ಎಂ.ಎಸ್ ಹಾಗೂ ದೇವಾಂಶಿ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಬಾಲಕರ ವಿಭಾಗದಲ್ಲಿ ಶ್ರವಣ್ 385 ಅಂಕಗಳಿಸಿ ಚಿನ್ನ ಗೆದ್ದರೆ, ಹುಬ್ಬಳ್ಳಿಯ ಕುಶ್ ಪರಮೇಶೆಟ್ಟಿ (376)ಬೆಳ್ಳಿ ಪದಕ ಹಾಗೂ ಬೆಂಗಳೂರು ನಗರದವರೇ ಆದ ಉಮಾ ಕಾರ್ತಿಕ್ (369) ಕಂಚು ಗೆದ್ದರು. ಬಾಲಕಿಯರ ವಿಭಾಗದಲ್ಲಿ ದೇವಾಂಶಿ (365) ಚಿನ್ನ ಗೆದ್ದರೆ, ಜೀವಿಕಾ ನಾಯ್ಕ (364) ಬೆಳ್ಳಿ ಹಾಗೂ ದಿಶಿ ಪೊನ್ನಪ್ಪ (361) ಕಂಚಿನ ಪದಕ ಗೆದ್ದುಕೊಂಡರು.

ತಂಡದ ವಿಭಾಗದಲ್ಲಿ ಸೌಪರ್ಣಿಕಾ ಪ್ರಸಾದ್, ಜೀವಿಕಾ ನಾಯ್ಕ, ದಿಶಿ ಪೊನ್ನಪ್ಪ ಒಳಗೊಂಡ ಬೆಂಗಳೂರು ನಗರ ಬಾಲಕಿಯರ ತಂಡ 1,063 ಅಂಕದೊಂದಿಗೆ ಸ್ವರ್ಣ ಒಲಿಸಿಕೊಂಡಿತು. ಬಾಲಕರ ವಿಭಾಗದಲ್ಲಿ ಉಮಾ ಕಾರ್ತಿಕ್, ಅಶ್ವಿಕ್ ಕುಮಾರ್, ಆತೀಶ್ ಗೌಡ ತಂಡ 1,077 ಅಂಕದೊಂದಿಗೆ ಚಿನ್ನ ಜಯಿಸಿತು. ಮಿಶ್ರ ವಿಭಾಗದಲ್ಲಿ ಸಾಧಿಕಾ ನಾಡೆಲ್ಲಾ -ಶ್ರವಣ್ ಮಠದ (557) ಚಿನ್ನ, ವೈಷ್ಣವಿ ಎಸ್ ಜಮಾದಾರ್-ಉಮಾ ಕಾರ್ತಿಕ್ (547) ರಜತ ಹಾಗೂ ಜೀವಿಕಾ ನಾಯ್ಕ-ವಿಶ್ವದೀಪ್ ವಿಕ್ರಾಂತ್ (540) ಜೋಡಿ ಕಂಚಿಗೆ ಕೊರಳೊಡ್ಡಿತು. ಕಯಾಕಿಂಗ್ ವಿಭಾಗದ ಡ್ರ್ಯಾಗನ್ ಬೋಟ್ ರೇಸ್‌ನಲ್ಲಿ ಬೆಂಗಳೂರು ನಗರ ತಂಡ ಸ್ವರ್ಣ, ತುಮಕೂರು ಜಿಲ್ಲಾ ತಂಡ ಬೆಳ್ಳಿ, ಬೆಂಗಳೂರು ದಕ್ಷಿಣ ತಂಡ ಮೂರನೇ ಸ್ಥಾನ ಪಡೆಯಿತು. ನವೆಂಬರ್ 21ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 31 ಜಿಲ್ಲೆಯ 4,050 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ವೇಯ್ಟ್ ಲಿಫ್ಟಿಂಗ್‌ನಲ್ಲಿ ದ.ಕನ್ನಡ, ಶಿವಮೊಗ್ಗ ಪ್ರಾಬಲ್ಯ

ಬಾಲಕಿಯರ ವೇಯ್ಟ್​ ಲಿಫ್ಟಿಂಗ್‌ನಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು. ಬಾಲಕಿಯರ 36 ಕೆಜಿ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಅನ್ವಿತಾ ಕೃಷ್ಣರಾಜ್ 38 ಕೆಜಿ ಭಾರ ಎತ್ತುವ ಮೂಲಕ ಸ್ವರ್ಣ ಗೆದ್ದರೆ, ಆನವಿ ಎ ಹರಿತಾಸ್ (36 ಕೆಜಿ) ರಜತ, ಉಡುಪಿಯ ವಿಶಾಲಾ (33 ಕೆಜಿ) ಕಂಚಿಗೆ ಮುತ್ತಿಕ್ಕಿದರು. 40 ಕೆಜಿ ವಿಭಾಗದಲ್ಲಿ

ಸತಾರ ಜೋನ್ನಾ ರಾಜು (66 ಕೆಜಿ), ದಕ್ಷಿಣ ಕನ್ನಡ ಜಿಲ್ಲೆಯ ಮನಸ್ವಿ ಆರ್.ಕೆ (61ಕೆಜಿ) ಹಾಗೂ ಉಡುಪಿಯ ತ್ರಯೀ ಎನ್.ಸುವರ್ಣ (60ಕೆಜಿ) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

ಇತರ ಲಿತಾಂಶ: 49 ಕೆಜಿ: 1.ಸನಿಕಾ (ಶಿವಮೊಗ್ಗ), 2. ಶ್ರೇಷ್ಠಾ ಶೆರೋನ್ (ಬೆಂ.ನಗರ), 3. ಐರಾ ಪೋದ್ದರ್ (ಬೆಂ.ನಗರ); 53 ಕೆಜಿ: 1. ರಿತ್‌ಕೀರ್ತಿ (ಮಂಡ್ಯ), 2.ನಂದಿತಾ (ದ.ಕನ್ನಡ), 3. ಸಾನ್ವಿ (ಉಡುಪಿ); 57 ಕೆಜಿ: 1. ರೇಷ್ಮಾ (ದ.ಕನ್ನಡ), 2. ಆಂಡ್ರಿಯಾ ಜಾಯ್‌ುಲ್ (ಶಿವಮೊಗ್ಗ), 3.ಮನಸ್ವಿನಿಧಿ ಭಟ್ (ಮೈಸೂರು); 61 ಕೆಜಿ:1.ಸಂಜನಾ (ಶಿವಮೊಗ್ಗ), 2.ಯಶಿಕಾ (ದ.ಕನ್ನಡ), 3.ಖುಷಿ ಎನ್.(ದ.ಕನ್ನಡ).

ಇತರ ಲಿತಾಂಶ: ವುಶು: ಬಾಲಕರ ಚಾಂಗ್ಕಾನ್: 1. ಶಾನ್ ಮೈಕಲ್ಸ್ 2. ಕನ್ಹಾ ಅಬೋತಿ (ಬೆಂ.ನಗರ), 3. ಮನ್ವಿತ್ (ದ.ಕನ್ನಡ), ಕಿಶೋರ್ (ಬೆಂ. ಗ್ರಾಮಾಂತರ); ನಾಕ್ವಾನ್: 1. ಓಂ ಗಣೇಶ್ (ಬಾಗಲಕೋಟೆ), 2.ಭವ್ಯೇಶ್ ದೀಪಕ್ ಗಾಣಿಗ (ದ.ಕನ್ನಡ), 3.ಸುಶಾಂತ್ ರಾಘವ್ (ಬೆಂ.ದಕ್ಷಿಣ), ಶ್ರೇಯಸ್ (ಬೆಳಗಾವಿ); ತೈಜಿಕ್ವಾನ್: 1. ಹರ್ಷಲ್ (ದ.ಕನ್ನಡ), 2.ಸಮರ್ಥ್ (ಬಾಗಲಕೋಟೆ), 3.ಸರ್ವಜ್ಞ ಸಜ್ಜನ್ (ವಿಜಯಪುರ), ಅಥರ್ವ (ಬಾಗಲಕೋಟೆ). ಬಾಲಕಿಯರ ವಿಭಾಗ: 1. ನಮ್ರತಾ (ಬೆಂ.ನಗರ), 2.ತನುಜಾ ಮತ್ತೂರು (ವಿಜಯನಗರ), 3.ಶಿಾ (ದ.ಕನ್ನಡ), ಐಶ್ವರ್ಯ ಕಜಗರ್ (ಬಾಗಲಕೋಟೆ); 1. ಮೋನಿಷಾ (ಮೈಸೂರು), ಸಾನ್ವಿ ಪ್ರಭಾಕರ್ (ದ.ಕನ್ನಡ), 3.ಮೀನಾ ಬಾಯಿ (ಬೆಂ.ನಗರ), ಪ್ರೀತಿ ಬಾಯಿ (ಬೆಂ.ದಕ್ಷಿಣ);1. ಗಿಯಾ ಸ್ಯಾಮುಯೆಲ್ (ಬೆಂ.ನಗರ), 2.ಆಧ್ಯಾ ಗೌಡರ್ (ಬಾಗಲಕೋಟೆ), 3.ಅಲಿಮಾ ಮಾ (ದ.ಕನ್ನಡ), ಸ್ವಕೃರ್ತಿ ಕೊನ್ನೂರು (ಬಾಗಲಕೋಟೆ).