ಕ್ರೀಡೆ

ಆಂಗ್ಲರ ಬೆಂಡೆತ್ತಿದ್ದ Team India ಬ್ಯಾಟರ್ಸ್​​; ಪ್ರವಾಸಿ ತಂಡಕ್ಕೆ 357 ರನ್​ಗಳ ಗುರಿ ನೀಡಿದ ಆತಿಥೇಯರು

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಆತಿಥೇಯರು 356 ರನ್​ಗಳ ಸವಾಲಿನ ಮೊತ್ತ ಪೇರಿಸಿದ್ದು, ಪ್ರವಾಸಿ ತಂಡಕ್ಕೆ 357 ರನ್​ಗಳ ಗುರಿ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ (Team India) ಶುಭಮನ್ ಗಿಲ್ (112 ರನ್, 102 ಎಸೆತ, 14 ಬೌಂಡರಿ, 3 ಸಿಕ್ಸರ್​), ವಿರಾಟ್ ಕೊಹ್ಲಿ (52 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್)​ ಹಾಗೂ ಶ್ರೇಯಸ್ ಅಯ್ಯರ್​ (78 ರನ್, 64 ಎಸೆತ, 8 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ 50 ಒವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 356 ರನ್​ ಗಳಿಸಿತು.

ಇಂಗ್ಲೆಂಡ್ ಪರ ಸಾಕಿಬ್​ ಮಹಮೂದ್​ (10-0-68-1), ಆದಿಲ್ ರಶೀದ್ (10-0-64-4), ಮಾರ್ಕ್​ ವುಡ್​ (9-1-45-2), ಗಸ್​ ಆ್ಯಟ್​​ಕಿನ್​ಸನ್​ (8-0-74-1), ಲಿಯಾಮ್ ಲಿವಿಂಗ್​ಸ್ಟನ್​ (8-0-57-0), ಜೋ ರೂಟ್​ (5-0-47-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್​​ 11 ಹೀಗಿದೆ 

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್ ಗಿಲ್‌, ಯಶಸ್ವಿ ಜೈಸ್ವಾಲ್, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್‌ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್‌ ಸಿಂಗ್‌
ಇಂಗ್ಲೆಂಡ್: ಜಾಸ್‌ ಬಟ್ಲರ್ (ನಾಯಕ), ಬೆನ್‌ ಡಕೆಟ್, ಫಿಲ್‌ ಸಾಲ್ಟ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಲಿಯಾಮ್ ಲಿವಿಂಗ್‌ಸ್ಟೊನ್, ಗಸ್‌ ಅಟ್ಕಿನ್‌ಸನ್‌‌, ಮಾರ್ಕ್‌ ವುಡ್‌, ಆದಿಲ್‌ ರಶೀದ್, ಸಕೀಬ್‌ ಮಹ್ಮೂದ್, ಟಾಮ್‌ ಬಾಂಟನ್‌

https://www.vijayavani.net/why-are-team-india-and-england-cricketers-wearing-green-arm-bands-in-3rd-odi-at-ahmedabad

https://www.vijayavani.net/ram-gopal-varma-makes-a-big-comment-on-yash-starrer-kgf-2-calls-it-unbearable