ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕ ಹಾಗೂ ಅತ್ಯುತ್ತಮ ವಿಕೆಟ್ ಕೀಪರ್ಬ್ಯಾಟ್ಸ್ಮನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿಗೆ ಮಂಗಳವಾರ 39ನೇ ಜನ್ಮದಿನದ ಸಂಭ್ರಮ. ಐಪಿಎಲ್ 13ನೇ ಆವೃತ್ತಿ ಮುಂದೂಡಿಕೆಯಿಂದಾಗಿ ಅವರ ಆಟವನ್ನು ಮತ್ತೆ ನೋಡುವ ಅವಕಾಶವನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ. ಟಿ20 ವಿಶ್ವಕಪ್ ಅನಿಶ್ಚಿತತೆಯಿಂದಾಗಿ ಧೋನಿ ಅಂತಾರಾಷ್ಟಿŠೕಯ ಕ್ರಿಕೆಟ್ ಜೀವನವೂ ಅತಂತ್ರವಾಗಿದೆ. ಜುಲೈ 9ಕ್ಕೆ ಧೋನಿ ಟೀಮ್ ಇಂಡಿಯಾ ಪರ ಆಡದೆ 1 ವರ್ಷ ಪೂರ್ಣಗೊಳ್ಳಲಿದೆ. 2019ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮೀಸ್ನಲ್ಲಿ ಧೋನಿ ಕೊನೆಯದಾಗಿ ಸ್ಪರ್ಧಾತ್ಮಕ ಪಂದ್ಯವಾಡಿದ್ದರು. ಕರೊನಾ ಹಾವಳಿಯ ನಡುವೆ ರಾಂಚಿಯ ಮನೆಯಲ್ಲಿ ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಜತೆಗೆ ಲಾಕ್ ಆಗಿದ್ದಾರೆ. ಅವರ ವೃತ್ತಿಜೀವನದ 39 ಪ್ರಮುಖ ಸಾಧನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
- ಐಸಿಸಿಯ ಎಲ್ಲ ಟ್ರೋಫಿಗಳನ್ನು (ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ಷಿಪ್ ಗದೆ) ಜಯಿಸಿದ ವಿಶ್ವದ ಏಕೈಕ ನಾಯಕ.
- ಏಕದಿನ ಮತ್ತು ಟಿ20 ವಿಶ್ವಕಪ್ ಜಯಿಸಿದ ಏಕೈಕ ನಾಯಕ.
- ಟಿ20 ವಿಶ್ವಕಪ್ ಜಯಿಸಿದ ಮೊದಲ ನಾಯಕ.
- ಏಕದಿನ ವಿಶ್ವಕಪ್ ಜಯಿಸಿದ 2ನೇ ಭಾರತೀಯ ನಾಯಕ.
- ಚಾಂಪಿಯನ್ಸ್ ಟ್ರೋಫಿ ಜಯಿಸಿದ 2ನೇ ಭಾರತೀಯ ನಾಯಕ.
- ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ (10,773) ಸಿಡಿಸಿದ ಭಾರತೀಯ ವಿಕೆಟ್ ಕೀಪರ್ಬ್ಯಾಟ್ಸ್ಮನ್.
- ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು (2008, 2009) ಸತತ 2 ಬಾರಿ ಜಯಿಸಿದ ಮೊದಲ ಆಟಗಾರ.
- ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ರತ್ನಕ್ಕೆ ಭಾಜನರಾದ 2ನೇ ಕ್ರಿಕೆಟಿಗ.
- ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ ಪಡೆದ 2ನೇ ಕ್ರಿಕೆಟಿಗ.
- ಅಂತಾರಾಷ್ಟಿŠೕಯ ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಟಂಪಿಂಗ್ (195) ಮಾಡಿರುವ ವಿಕೆಟ್ ಕೀಪರ್.
- ಅಂತಾರಾಷ್ಟಿŠೕಯ ಕ್ರಿಕೆಟ್ನಲ್ಲಿ ನಾಯಕನಾಗಿ ಅತ್ಯಧಿಕ ಸಿಕ್ಸರ್ (204).
- ಅತ್ಯಧಿಕ ಏಕದಿನ (110) ಪಂದ್ಯ ಜಯಿಸಿದ ಭಾರತೀಯ ನಾಯಕ.
- ಅತ್ಯಧಿಕ ಟಿ20 (41) ಪಂದ್ಯ ಜಯಿಸಿದ ನಾಯಕ.
- ಅತ್ಯಧಿಕ (332) ಅಂತಾರಾಷ್ಟಿŠೕಯ ಪಂದ್ಯಗಳಲ್ಲಿ ನಾಯಕತ್ವ.
- 100ಕ್ಕೂ ಅಧಿಕ ಏಕದಿನ ಪಂದ್ಯ ಜಯಿಸಿದ ಮೊದಲ ಆಸ್ಟೆŠೕಲಿಯೇತರ ನಾಯಕ.
- ಏಕದಿನ ಕ್ರಿಕೆಟ್ನಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ.
- ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ರನ್ (183*) ಸಿಡಿಸಿದ ವಿಕೆಟ್ ಕೀಪರ್.
- ನಾಯಕನಾಗಿ ಅತ್ಯಧಿಕ ಟಿ20 (72) ಅಂತಾರಾಷ್ಟಿŠೕಯ ಪಂದ್ಯ.
- ಭಾರತವನ್ನು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರಿಸಿದ ಮೊದಲ ನಾಯಕ.
- ಟೆಸ್ಟ್ ಕ್ರಿಕೆಟ್ನಲ್ಲಿ ಅತಿವೇಗದ ಶತಕ (93 ಎಸೆತ) ಸಿಡಿಸಿದ ಭಾರತೀಯ ವಿಕೆಟ್ ಕೀಪರ್.
- ಟೆಸ್ಟ್ ಇನಿಂಗ್ಸ್ನಲ್ಲಿ ಅತ್ಯಧಿಕ (224) ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್.
- ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಲಿ (294) ಪಡೆದ ಭಾರತೀಯ ವಿಕೆಟ್ ಕೀಪರ್.
- ಆಸ್ಟೆŠೕಲಿಯಾದಲ್ಲಿ ಕ್ಲೀನ್ಸ್ವೀಪ್ (2016ರ ಟಿ20 ಸರಣಿ) ಸಾಧಿಸಿದ ಮೊದಲ ನಾಯಕ.
- ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅತಿವೇಗವಾಗಿ ನಂ. 1 ಪಟ್ಟಕ್ಕೆ (42 ಇನಿಂಗ್ಸ್) ಏರಿದ ಬ್ಯಾಟ್ಸ್ಮನ್.
- ಸಿಕ್ಸರ್ ಮೂಲಕವೇ ಅತ್ಯಧಿಕ ಏಕದಿನ ಪಂದ್ಯ (9) ಗೆದ್ದುಕೊಟ್ಟ ಆಟಗಾರ.
- ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ (84) ಔಟಾಗದೆ ಉಳಿದ ಆಟಗಾರ.
- ಏಕದಿನದಲ್ಲಿ ಅತ್ಯಧಿಕ ಬಲಿ (434) ಪಡೆದ ಭಾರತೀಯ ವಿಕೆಟ್ ಕೀಪರ್.
- 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಏಕದಿನದಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್.
- ಟೆಸ್ಟ್ ಕ್ರಿಕೆಟ್ನಲ್ಲಿ 50 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ನಾಯಕ.
- ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ಬಲಿ (9) ಪಡೆದ ಭಾರತೀಯ ವಿಕೆಟ್ ಕೀಪರ್.
- ಅತ್ಯಧಿಕ ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಕೆಟ್ ಕೀಪರ್ (200).
- ಏಕದಿನ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದಾಗ ಸರ್ವಾಧಿಕ ರನ್ (4 ಸಾವಿರಕ್ಕೂ ಅಧಿಕ) ಗಳಿಕೆ.
- ಏಕದಿನದಲ್ಲಿ 7 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದಾಗ 2 ಶತಕ ಸಿಡಿಸಿದ ಏಕೈಕ ಆಟಗಾರ.
- ಅಂತಾರಾಷ್ಟಿŠೕಯ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಆಗಿ ಆಡಿದರೂ ಅತ್ಯಧಿಕ ಎಸೆತ (132) ಬೌಲಿಂಗ್ ಮಾಡಿದ ದಾಖಲೆ.
- ಟಿ20 ಕ್ರಿಕೆಟ್ನಲ್ಲಿ ಶೂನ್ಯ ಗಳಿಸದೆ ಅತ್ಯಧಿಕ ಇನಿಂಗ್ಸ್ (82) ಆಟ.
- ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸುವುದಕ್ಕೆ ಮುನ್ನ ಅತ್ಯಧಿಕ ರನ್ (1,153) ಗಳಿಕೆ.
- ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಕ್ಯಾಚ್ (57), ಸ್ಟಂಪಿಂಗ್ (34) ಬಲಿ ಪಡೆದ ವಿಕೆಟ್ ಕೀಪರ್.
- ಟಿ20 ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಕ್ಯಾಚ್ (5)
- ಏಕದಿನ ಕ್ರಿಕೆಟ್ ಯಶಸ್ವಿ ಚೇಸಿಂಗ್ ವೇಳೆ ಅತ್ಯಧಿಕ ಬಾರಿ ಅಜೇಯ ಹಾಗೂ ಗರಿಷ್ಠ ಸರಾಸರಿ