ಕೆಸ್ಟ್ಚರ್ಚ್: ವೇಗಿಗಳಾದ ಮುಕೇಶ್ ಕುಮಾರ್ (87ಕ್ಕೆ 5) ಮತ್ತು ಮೊಹಮದ್ ಸಿರಾಜ್ (118ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಭಾರತ ಎ ತಂಡ ಆತಿಥೇಯ ನ್ಯೂಜಿಲೆಂಡ್ ಎ ವಿರುದ್ಧದ 2ನೇ ಚತುರ್ದಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ. ಬಳಿಕ 2ನೇ ಇನಿಂಗ್ಸ್ನಲ್ಲಿ ಧ್ರುವ ಜುರೆಲ್ ಬಳಗ ಎಚ್ಚರಿಕೆಯ ಆರಂಭ ಕಂಡಿದ್ದು, ಕೊನೇ ದಿನ ಡ್ರಾ ಸಾಧಿಸುವ ನಿರೀಕ್ಷೆ ಮೂಡಿಸಿದೆ.
ಹ್ಯಾಗ್ಲೆ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 3 ವಿಕೆಟ್ಗೆ 218 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ಎ ತಂಡ, 132.5 ಓವರ್ಗಳಲ್ಲಿ 424 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 78 ರನ್ ಮುನ್ನಡೆ ಸಾಧಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (20*) ಮತ್ತು ಸಾಯಿ ಸುದರ್ಶನ್ (11*) ಭಾರತಕ್ಕೆ ಎಚ್ಚರಿಕೆಯ ಆರಂಭ ಒದಗಿಸಿದ್ದು, ದಿನದಂತ್ಯಕ್ಕೆ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿದೆ. ಭಾರತ ಎ ತಂಡ ಸದ್ಯ 46 ರನ್ ಹಿನ್ನಡೆಯಲ್ಲಿದೆ.
ಭಾರತ ಎ: 346 ಮತ್ತು 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 32 (ಜೈಸ್ವಾಲ್ 20*, ಸುದರ್ಶನ್ 11*). ನ್ಯೂಜಿಲೆಂಡ್ ಎ: 424 (ಬಾಯ್ಲ್ 110, ಫಾಕ್ಸ್ಕ್ರಾಫ್ಟ್ 93, ಹೇ 31, ಕ್ರಿಸ್ಟಿಯನ್ ಕ್ಲಾರ್ಕ್ 41, ಶೀಟ್ 40, ಲೆನಾಕ್ಸ್ 32*, ಮೆಕ್ಕೇ 33, ಮುಕೇಶ್ 87ಕ್ಕೆ 5, ಸಿರಾಜ್ 118ಕ್ಕೆ 4).