ಚಾಂಪಿಯನ್​ ಮತ್ತು ರನ್ನರ್​ ಅಪ್​ ಪ್ರಶಸ್ತಿಯೊಂದಿಗೆ ಆಕಾಶ್​ ಮತ್ತು ಆಂಟೋನಿ ಏಜೆನ್ಸಿ
ಕ್ರೀಡೆ

ಟೆನ್​ಪಿನ್​ ಬೌಲಿಂಗ್​: ಸತತ 2ನೇ ಬಾರಿ ಪ್ರಶಸ್ತಿ ಗೆದ್ದ ಆಕಾಶ್​

ಜಯನಗರದ ಕಾಸ್ಮೋಪಾಲಿಟನ್​ ಕ್ಲಬ್​ನ ಅಮೀಬ ಬೌಲಿಂಗ್​ ಸೆಂಟರ್​ನಲ್ಲಿ ಬುಧವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್​ ಪ್ರಶಸ್ತಿ ಸುತ್ತಿನಲ್ಲಿ ಅಮೋಘ ನಿರ್ವಹಣೆ ತೋರಿಸಿದರು.

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅನುಭವಿ ಆಟಗಾರ ಆಕಾಶ್​ ಅಶೋಕ್​ ಕುಮಾರ್​ 2ನೇ ಕರ್ನಾಟಕ ರಾಜ್ಯ ರ್ಯಾಂಕಿಂಗ್​ ಟೆನ್​ಪಿನ್​ ಬೌಲಿಂಗ್​ ಟೂರ್ನಿಯಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಜಯನಗರದ ಕಾಸ್ಮೋಪಾಲಿಟನ್​ ಕ್ಲಬ್​ನ ಅಮೀಬ ಬೌಲಿಂಗ್​ ಸೆಂಟರ್​ನಲ್ಲಿ ಬುಧವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್​ ಪ್ರಶಸ್ತಿ ಸುತ್ತಿನಲ್ಲಿ ಅಮೋಘ ನಿರ್ವಹಣೆ ತೋರಿಸಿದರು. ಅವರು ಫೈನಲ್​ ಪಂದ್ಯದಲ್ಲಿ ತೃತೀಯ ಶ್ರೇಯಾಂಕಿತ ಆಂಟೋನಿ ಆರ್​ ವಿರುದ್ಧ 67 ಪಿನ್​ಗಳಿಂದ ಗೆಲುವು ಸಾಧಿಸಿದರು. ಆಕಾಶ್​ 406-339 ಪಿನ್​ಗಳ ಅಂತರದಿಂದ ಗೆದ್ದು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇದಕ್ಕೆ ಮುನ್ನ ಮೊದಲ ನಾಕೌಟ್​ ಪಂದ್ಯದಲ್ಲಿ ಆಕಾಶ್​ 4ನೇ ಶ್ರೇಯಾಂಕಿತ ಸತೀಶ್​ ಎ.ವಿ. ವಿರುದ್ಧ 105 ಪಿನ್​ಗಳಿಂದ (417-312) ಗೆಲುವು ಸಾಧಿಸಿದರು. ಸತೀಶ್​ ಎ.ವಿ. ತೃತೀಯ ಮತ್ತು ವಿಜಯ್​ ಪಂಜಾಬಿ 4ನೇ ಸ್ಥಾನ ಗಳಿಸಿದರು. ಆಕಾಶ್​ ಟೂರ್ನಿಯಲ್ಲಿ ಗರಿಷ್ಠ ಸರಾಸರಿ ಅಂಕ ಗಳಿಸಿದ ಸಾಧನೆಯನ್ನೂ ಮಾಡಿದರು. ಅಲೆನ್​ ರಿಚರ್ಡ್ಸ್​ ಗರಿಷ್ಠ 2 ಬಾರಿ 225ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಧನೆ ಮಾಡಿದರು.