ನವದೆಹಲಿ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕೆಲ ಕ್ರಿಕೆಟಿಗರು ಕೋಟಿ ಕೋಟಿ ಮೌಲ್ಯಕ್ಕೆ ಮಾರಾಟವಾಗುವ ಮೂಲಕ ಗಮನಸೆಳೆದಿದ್ದಾರೆ. ಆದರೆ ಈ ಮೊತ್ತದಲ್ಲಿ ಎಲ್ಲವೂ ಕ್ರಿಕೆಟಿಗರ ಜೇಬು ಸೇರುವುದಿಲ್ಲ. ಕೇಂದ್ರ ಸರ್ಕಾರ ಇದರಲ್ಲಿ ತೆರಿಗೆ ಕಡಿತ ಮಾಡಲಿದೆ.
ಹರಾಜಿನಲ್ಲಿ ಸರ್ವಾಧಿಕ 27 ಕೋಟಿ ರೂಪಾಯಿಗೆ ಮಾರಾಟವಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಈ ಪೈಕಿ 18.9 ಕೋಟಿ ರೂ.ಯನ್ನು ತನ್ನದಾಗಿಸಿಕೊಳ್ಳಲಿದ್ದಾರೆ. ಉಳಿದಂತೆ 8.1 ಕೋಟಿ ರೂ. ಮೊತ್ತವನ್ನು ಅವರು ಆದಾಯ ತೆರಿಗೆಯಾಗಿ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ಹರಾಜಿನಲ್ಲಿ ಲಖನೌ ತಂಡ ಪಂತ್ಗೆ 20.75 ಕೋಟಿ ರೂ. ಬಿಡ್ ಮಾಡಿದಾಗ ಡೆಲ್ಲಿ ತಂಡ ಆರ್ಟಿಎಂ ಮಾಡಿ ತನ್ನಲ್ಲೇ ಉಳಿಸಿಕೊಳ್ಳಲು ಮುಂದಾಗಿತ್ತು. ಆಗ ಲಖನೌ ತಂಡ ಒಮ್ಮೆಲೆ ಮೊತ್ತವನ್ನು 27 ಕೋಟಿ ರೂ.ಗೆ ಏರಿಸಿ ಪಂತ್ ಅವರನ್ನು ತನ್ನದಾಗಿಸಿಕೊಂಡಿತ್ತು.