ಕ್ರೀಡೆ

2027ರ ವಿಶ್ವಕಪ್ ತಂಡದಲ್ಲಿ ರೋಹಿತ್, ವಿರಾಟ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಶುಭಮಾನ್​ ಗಿಲ್​ | World Cup

World Cup: ಮುಂಬರುವ 2027ರ ಒಂಡೇ ವಿಶ್ವಕಪ್​ಗೆ ಭಾರತದ ಸ್ಟಾರ್​ ಆಟಗಾರರಾದ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿಯವರ ಅನುಭವವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಭಾರತ ತಂಡದ ನೂತನ ಒಂಡೇ ಕಾಪ್ಟನ್​ ಸುಭಮಾನ್​ ಗಿಲ್ ಸ್ಪಷ್ಟಪಡಿಸಿದ್ದಾರೆ.

ರೋಹಿತ್ ಮತ್ತು ವಿರಾಟ್ ಕೊಹ್ಲಿಯವರ ಏಕದಿನ ಭವಿಷ್ಯದ ಬಗ್ಗೆ ಗಿಲ್​ರನ್ನು ಕೇಳಿದಾಗ, ಖಂಡಿತವಾಗಿ ಇವರಿಬ್ಬರು ತಂಡದಲ್ಲಿರುತ್ತಾರೆ. ರೋಹಿತ್ ಮತ್ತು ಕೊಹ್ಲಿಯ ಅನುಭವಗಳು ತಂಡಕ್ಕೆ ವರದಾನವಾಗುತ್ತದೆ. ಅಲ್ಲದೆ, ಭಾರತಕ್ಕಾಗಿ ಇಷ್ಟೊಂದು ಪಂದ್ಯಗಳನ್ನು ಗೆದ್ದ ಆಟಗಾರರು ಬಹಳ ಕಡಿಮೆ ಇದ್ದಾರೆ. ಜಗತ್ತಿನಲ್ಲಿ ಇಷ್ಟೊಂದು ಕೌಶಲ್ಯ, ಗುಣಮಟ್ಟ ಮತ್ತು ಅನುಭವ ಹೊಂದಿರುವ ಆಟಗಾರರು ಬಹಳ ವಿರಳ ಎಂದು ಗಿಲ್​ ಹೇಳಿದ್ದಾರೆ.

ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೋಂನಲ್ಲಿ ಸೃಷ್ಟಿಸಿರುವ ಶಾಂತ ಮತ್ತು ಸೌಹಾರ್ದಯುತ ವಾತಾವರಣವನ್ನು ಮುಂದುವರಿಸಲು ಪ್ರಯತ್ನಿಸುವುದಾಗಿ ಗಿಲ್ ಹೇಳಿದರು. ಅಲ್ಲದೆ, ಈ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸದಿಂದ ಒಂಡೇ ಮಾದರಿಯ ತಂಡದ ನಾಯಕತ್ವ ವಹಿಸಿಕೊಳ್ಳುವಾಗ, ತಮ್ಮ ಹಿಂದಿನ ರೋಹಿತ್ ಶರ್ಮಾ ಅವರಂತೆಯೇ ಡ್ರೆಸ್ಸಿಂಗ್ ಕೋಣೆಯಲ್ಲಿ ಶಾಂತ ಮತ್ತು ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಮತ್ತು ಆಟಗಾರರೊಂದಿಗೆ ಸ್ನೇಹಪರವಾಗಿರಲು ಪ್ರಯತ್ನಿಸುವುದಾಗಿ ಗಿಲ್​ ಭರವಸೆ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾಗೆ ಈಗ 38 ವರ್ಷ, ವಿರಾಟ್ ಕೊಹ್ಲಿಗೆ 36 ವರ್ಷ. ಇಬ್ಬರೂ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದರಿಂದ ಭಾರತ ಪರ ಆಡುವ ಸಾಧ್ಯತೆ ಕಡಿಮೆಯಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಇಬ್ಬರು ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ಇರಳಿದೆ. (ಏಜೆನ್ಸೀಸ್)