ಕ್ರೀಡೆ

ಈ ಇಬ್ಬರು ಸ್ಟಾರ್ ಆಟಗಾರರಿಗೆ 15 ಕೋಟಿ ರೂ. ಫಿಕ್ಸ್​? ಹೀಗಿದೆ ವರದಿ | IPL Auction 2025

ನವದೆಹಲಿ: ಇತ್ತೀಚೆಗಷ್ಟೇ 2025ರ ಐಪಿಎಲ್​ 18ನೇ (IPL Auction 2025) ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ಈಗಾಗಲೇ ರಿಟೆನ್ಶನ್​ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಯಾವ ನಾಲ್ಕು ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಆಲೋಚಿಸಿ, ನಿರ್ಧಾರ ತೆಗೆದುಕೊಂಡಿರುವ ಫ್ರಾಂಚೈಸಿಗಳು, ಈ ಬಗ್ಗೆ ರಿಟೆನ್ಶನ್​ ಪ್ರಕ್ರಿಯೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಸದ್ಯ ನ.24-25ರಂದು ನಡೆಯಲಿರುವ ಐಪಿಎಲ್​ ಹರಾಜಿನತ್ತ ಎದುರುನೋಡುತ್ತಿರುವ ಟೀಮ್​ಗಳು, ರಿಟೈನ್ ಆಗದೆ ಆಕ್ಷನ್​ಗೆ ಬಂದಿರುವ ಆಟಗಾರರನ್ನು ಖರೀದಿ ಮಾಡಲು ಎದುರುನೋಡುತ್ತಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಫಾಫ್ ಡು ಪ್ಲೆಸಿಸ್​, ಪಂಜಾಬ್ ಕಿಂಗ್ಸ್​​ನಿಂದ ಶಿಖರ್​ ಧವನ್​, ಲಖನೌ ಸೂಪರ್ ಜೈಂಟ್ಸ್​ ಕ್ಯಾಪ್ಟನ್ ಆಗಿದ್ದ ಕೆ.ಎಲ್. ರಾಹುಲ್​, ಡೆಲ್ಲಿ ಕ್ಯಾಪಿಟಲ್ಸ್​ನ ರಿಷಭ್ ಪಂತ್​ ಮತ್ತು ಕೋಲ್ಕತ ನೈಟ್ ರೈಡರ್ಸ್​ ತಂಡದಿಂದ ನಾಯಕ ಶ್ರೇಯಸ್ ಅಯ್ಯರ್​ ತಮ್ಮ ಫ್ರಾಂಚೈಸಿಗಳಿಂದ ರಿಟೈನ್​ ಆಗದ ಸ್ಟಾರ್ ಆಟಗಾರರು. ಇವರೊಂದಿಗೆ ಮತ್ತೊಂದಿಷ್ಟು ಆಟಗಾರರು ಸದ್ಯ ಹರಾಜಿಗೆ ಲಗ್ಗೆಯಿಟ್ಟಿದ್ದು, ಫ್ರಾಂಚೈಸಿಗಳ ಖರೀದಿಗೆ ಸಜ್ಜಾಗಿದ್ದಾರೆ.

ಹೆಸರಾಂತ ತಂಡಗಳ ಪರ ಆಡಲಿ

ಒಂದೆಡೆ ಕೆಕೆಆರ್​ ತಂಡದಿಂದ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್​ ಹೊರಬಿದ್ದರೆ, ಮತ್ತೊಂದೆಡೆ ಸ್ಟಾರ್​ ಬೌಲರ್​ ಮಿಚೆಲ್​ ಸ್ಟಾರ್ಕ್​ ಸಹ ರಿಟೈನ್ ಆಗದೆ ಇದೀಗ ಆಕ್ಷನ್​ಗೆ ಬಂದಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದೇ ಆದರೂ ಇತರೆ ಹೆಸರಾಂತ ತಂಡಗಳ ಪರ ಆಡಲಿ ಎಂದು ಬಯಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಶ್ರೇಯಸ್​ ಮತ್ತು ಮಿಚೆಲ್​ಗೆ ತಲಾ 15 ಕೋಟಿ ರೂ. ಹರಾಜಿನಲ್ಲಿ ಕರೆಯಲಾಗುವುದು ಎಂದು ಹೇಳಲಾಗಿದೆ.

15 ಕೋಟಿ ರೂ.

ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ಸಾಮರ್ಥ್ಯ ಮತ್ತು ಮಿಚೆಲ್​ ಸ್ಟಾರ್ಕ್​ ಬೌಲಿಂಗ್ ದಾಳಿಯನ್ನು ಅರಿತಿರುವ ಫ್ರಾಂಚೈಸಿಗಳ ಪೈಕಿ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಂಚೂಣಿಯಲ್ಲಿವೆ. ಅಸಲಿಗೆ ಈ ಇಬ್ಬರು ಆಟಗಾರರನ್ನು ಯಾವ ತಂಡ ಹರಾಜಿನಲ್ಲಿ 15 ಕೋಟಿ ರೂ.ಗೆ ಖರೀದಿಸಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).