ಕ್ರೀಡೆ

ಬೆಂಗಳೂರು ಇಂಟರ್​ನ್ಯಾಷನಲ್​ ಗ್ರಾಂಡ್​ ಮಾಸ್ಟರ್ಸ್​ ಓಪನ್​ ಚೆಸ್​ ಟೂರ್ನಿಯಲ್ಲಿ ಸೆಲ್ವಮುರುಗನ್​ ಚಾಂಪಿಯನ್​

ಬೆಂಗಳೂರು: ಸೆಲ್ವಮುರುಗನ್​ ಬಿ. ಮೊದಲ ಆವೃತ್ತಿಯ ಬೆಂಗಳೂರು ಇಂಟರ್​ನ್ಯಾಷನಲ್​ ಗ್ರಾಂಡ್​ಮಾಸ್ಟರ್ಸ್​ ಓಪನ್​ ಚೆಸ್​ ಟೂರ್ನಿಯ ಬಿ ಕೆಟಗರಿಯಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ತಮಿಳುನಾಡಿನ 23 ವರ್ಷದ ಸೆಲ್ವಮುರುಗನ್​ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 10ನೇ ಹಾಗೂ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಯಶ್​ ಅಭಿಜಿತ್​ ಪಾಟೀಲ್​ ಎದುರು ಡ್ರಾ ಸಾಧಿಸುವ ಮೂಲಕ ಪ್ರಶಸ್ತಿ ಒಲಿಸಿಕೊಂಡರು. ಪುದುಚೇರಿಯ 12 ವರ್ಷದ ಮಾದೇಶ್​ ಕುಮಾರ್​ ಕೂಡ 9 ಅಂಕಗಳ ಸಮಬಲ ಸಾಧಿಸಿದರೂ, ಟೈ&ಬ್ರೇಕ್​ ಸ್ಕೋರ್​ನಲ್ಲಿ ಮೇಲುಗೈ ಸಾಧಿಸಿದ ಸೆಲ್ವಮುರುಗನ್​ ಟ್ರೋಫಿ ಜತೆಗೆ 1.25 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.

ಮಾದೇಶ್​ ಕುಮಾರ್​ ರನ್ನರ್​ಅಪ್​ ಟ್ರೋಫಿ ಜತೆಗೆ 1 ಲಕ್ಷ ರೂ. ಬಹುಮಾನ ಪಡೆದರು. ತಮಿಳುನಾಡಿನ ಮತ್ತೋರ್ವ ಆಟಗಾರ ಜೈದಂಬರೀಶ್​ ಎನ್​ಆರ್​ (8.5 ಅಂಕ) 3ನೇ ಸ್ಥಾನದೊಂದಿಗೆ 80 ಸಾವಿರ ರೂ. ಗಳಿಸಿದರು.

ಟೂರ್ನಿಯ ಎ ಕೆಟಗರಿಯಲ್ಲಿ ಇನ್ನಷ್ಟು ರೋಚಕ ಪೈಪೋಟಿ ನಿರೀಸಲಾಗಿದೆ. ಎ ಕೆಟಗರಿಯ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 26ರಂದು ನಡೆಯಲಿದೆ.