ಬೆಂಗಳೂರು: ಸೆಮೀಸ್ ಅವಕಾಶವನ್ನು ವೃದ್ಧಿಸಿಕೊಳ್ಳಲು ಜಯದ ಜತೆಗೆ ಇತರ ಪಂದ್ಯಗಳ ಲಿತಾಂಶದ ಮೇಲೆ ಅವಲಂಬಿತವಾಗಿರುವ ನ್ಯೂಜಿಲೆಂಡ್‌ಗೆ ವರುಣನ ಕೃಪೆಯೂ ಬೇಕಿದೆ. ಬೆಂಗಳೂರಿನಲ್ಲಿ ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದು, ಕಿವೀಸ್-ಲಂಕಾ ಪಂದ್ಯಕ್ಕೂ ಅಡ್ಡಿ ಪಡಿಸುವ ಸಾಧ್ಯತೆಗಳಿವೆ. ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ ಲಿತಾಂಶ ನಿರ್ಧಾರವಾಗಲಿದೆ. ಒಂದು ವೇಳೆ ಉಭಯ ತಂಡಗಳು ಕನಿಷ್ಠ 20 ಓವರ್ ಆಟವಾಡದೆ ಪಂದ್ಯ ರದ್ದುಗೊಂಡರೆ, ಕಿವೀಸ್ 1 ಅಂಕಕ್ಕೆ ತೃಪ್ತಿ ಪಡಬೇಕಾಗುತ್ತದೆ. ಇದು ಕಿವೀಸ್ ಸೆಮೀಸ್ ಹಾದಿ ದುರ್ಗಮಗೊಳಿಸುತ್ತದೆ. ಆಗ ಕಿವೀಸ್, ಪಾಕಿಸ್ತಾನ ಹಾಗೂ ಅ್ಘಾನಿಸ್ತಾನ ತಂಡಗಳೆರಡೂ ಕೊನೇ ಲೀಗ್ ಪಂದ್ಯಗಳಲ್ಲಿ ಸೋಲಲಿ ಎಂದು ಪ್ರಾರ್ಥಿಸಬೇಕಾಗುತ್ತದೆ.
ಏಕದಿನ ಮುಖಾಮುಖಿ-101
ನ್ಯೂಜಿಲೆಂಡ್-51
ಶ್ರೀಲಂಕಾ-41
ರದ್ದು- 8
ಟೈ-1
ವಿಶ್ವಕಪ್ ಮುಖಾಮುಖಿ-11
ನ್ಯೂಜಿಲೆಂಡ್-5
ಶ್ರೀಲಂಕಾ-6
ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*523: ರಚಿನ್ ರವೀಂದ್ರ 25 ವರ್ಷ ಪೂರೈಸುವ ಮುನ್ನ ವಿಶ್ವಕಪ್‌ನಲ್ಲಿ ಸರ್ವಾಧಿಕ 523 ರನ್ ಗಳಿಸಿದ ಸಚಿನ್ ತೆಂಡುಲ್ಕರ್ ಸಾಧನೆ ಸರಿಗಟ್ಟಿದ್ದು, ಲಂಕಾ ವಿರುದ್ಧ 1 ರನ್ ಗಳಿಸಿದರೂ ಆ ದಾಖಲೆ ಮುರಿಯಲಿದ್ದಾರೆ.
*8: ಶ್ರೀಲಂಕಾ ತಂಡ ಕಳೆದ 8 ವರ್ಷಗಳಿಂದ ಕಿವೀಸ್ ವಿರುದ್ಧ ಒಂದೂ ಏಕದಿನ ಪಂದ್ಯ ಗೆದ್ದಿಲ್ಲ! 2015ರ ಡಿಸೆಂಬರ್‌ನಲ್ಲಿ ಕೊನೆಯದಾಗಿ ಗೆದ್ದಿರುವ ಲಂಕಾ, ನಂತರದ 9 ಏಕದಿನಗಳಲ್ಲಿ 7ರಲ್ಲಿ ಸೋತಿದ್ದು, 2 ಪಂದ್ಯ ರದ್ದುಗೊಂಡಿವೆ.