ಕ್ರೀಡೆ

ಡಿಸೆಂಬರ್ 14ರಂದು 17ನೇ ಆವೃತ್ತಿಯ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನೋಂದಣಿಗೆ ಮಾಹಿತಿ ಇಲ್ಲಿದೆ!

ಬೆಂಗಳೂರು: ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಆಯೋಜಿಸುವ 17ನೇ ಆವೃತ್ತಿಯ ಫೋನ್‌ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ (ಬಿಎಂಎಂ) ಡಿಸೆಂಬರ್ 14, 2024ರಂದು ಉದ್ಘಾಟನೆಗೊಳ್ಳಲಿದೆ. ಜಗತ್ತಿನ ಮೊದಲ ಮಿಡ್‌ನೈಟ್ ಮ್ಯಾರಥಾನ್ ಆಗಿರುವ ಬಿಎಂಎAನಲ್ಲಿ 11,000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ.

ಈ ವರ್ಷದ ಬಿಎಂಎಂ ಥೀಮ್ `ಸುರಕ್ಷಿತ ನಗರಕ್ಕಾಗಿ ಓಟ.' ಡಿಸೆಂಬರ್ 14ರ ಶನಿವಾರ ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿರುವ ಕೆಟಿಪಿಒದಲ್ಲಿ ಸಾವಿರಾರು ಓಟಗಾರರು, ಅಥ್ಲೀಟ್‌ಗಳು, ಕಾರ್ಪೊರೇಟ್‌ಗಳು ಹಾಗೂ ಎನ್‌ಜಿಒಗಳ ಸದಸ್ಯರು ಒಂದೆಡೆ ಸೇರಿ ಮಿಡ್‌ನೈಟ್ ಮ್ಯಾರಥಾನ್‌ಗೆ ರಂಗು ತರಲಿದ್ದಾರೆ.

ಈ ಬಾರಿಯ ಬಿಎಂಎಂನಲ್ಲಿ ಇನ್ನೊಂದು ವಿಶೇಷವಿದೆ. ದಿವ್ಯಾಂಗರ ಸ್ಫೂರ್ತಿಯನ್ನು ಹೆಚ್ಚಿಸಲು ಮತ್ತು ಭಾರತದ ಅದ್ಭುತ ಪ್ಯಾರಾ ಅಥ್ಲೀಟ್‌ಗಳನ್ನು ಗೌರವಿಸಲು ಬಿಎಂಎಂ-2024ಗೆ ಪ್ಯಾರಾ ಒಲಿಂಪಿಯನ್ ರಕ್ಷಿತಾ ರಾಜು ಅವರನ್ನು ಹೆಮ್ಮೆಯ ರಾಯಭಾರಿಯನ್ನಾಗಿ ಘೋಷಿಸಲಾಗುತ್ತಿದೆ. ರಕ್ಷಿತಾ ರಾಜು ಅವರು ಹಾಂಗ್ಜೌ 2022 ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 1500 ಮೀಟರ್ ಟಿ11 ಸ್ಪರ್ಧೆಯಲ್ಲಿ ಚಿನ್ನದ ಪದಕ, ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್ ಪ್ಯಾರಿಸ್ 2023ರಲ್ಲಿ 5ನೇ ಸ್ಥಾನ ಹಾಗೂರಾಷ್ಟಿçÃಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇವರ ಪಾಲ್ಗೊಳ್ಳುವಿಕೆಯು ಪ್ಯಾರಾ ಅಥ್ಲೀಟ್‌ಗಳು ಮತ್ತು ದಿವ್ಯಾಂಗರಿಗೆ ಹೊಸ ಸ್ಫೂರ್ತಿ ನೀಡಲಿದೆ.

ಈ ಸಲದ ಮಿಡ್‌ನೈಟ್ ಮ್ಯಾರಾಥಾನ್‌ನಿಂದ ಸಂಗ್ರಹವಾಗುವ ನಿಧಿಯನ್ನು ಪ್ಯಾರಾ ಅಥ್ಲೀಟ್‌ಗಳ ಶ್ರೇಯೋಭಿವೃದ್ಧಿಗೆ ಹಾಗೂ ಈಗಾಗಲೇ ಆರ್‌ಬಿಐಟಿಸಿಯಿಂದ ಕೈಗೊಳ್ಳಲಾಗಿರುವ ಶೈಕ್ಷಣಿಕ, ಆರೋಗ್ಯ ಮತ್ತು ಪರಿಸರ ಸಂಬAಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತದೆ' ಎಂದು ರೋಟರಿ ಬಿಐಟಿಸಿ 2024-25 ಅಧ್ಯಕ್ಷ ಜಗದೀಶ್ ಗೋಕವರಪು ತಿಳಿಸಿದ್ದಾರೆ.

ಹೊಸ ಓಟ ಸೇರ್ಪಡೆ: ದಿಶಾ ಹ್ಯಾಬಿಟ್ಯಾಟ್ 31.6ಕೆ ರನ್ : ಬಿಎಂಎಂ ರೇಸ್ ನಿರ್ದೇಶಕ ಗುಲ್ ಮೊಹಮ್ಮದ್ ಅಕ್ಬರ್ ಮಾತನಾಡಿ, `ಈ ಬಾರಿಯ ಬಿಎಂಎಂ ನಲ್ಲಿ ಹೊಸತಾಗಿ 31.6ಕೆ ಓಟ ಸೇರ್ಪಡೆ ಮಾಡಲಾಗಿದೆ. ಹಾಫ್ ಮ್ಯಾರಥಾನ್‌ನಿಂದ ಫುಲ್ ಮ್ಯಾರಥಾನ್‌ಗೆ ಬಡ್ತಿ ಹೊಂದಲು ಬಯಸುವವರಿಗೆ ಇದು ಉತ್ತೇಜನ ನೀಡಲಿದೆ' ಎಂದು ತಿಳಿಸಿದರು.

ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಓಟ, 5ಕೆ ಫನ್ ರನ್, ಬಿಕೆ5ಕೆ ರನ್ ಹಾಗೂ ಹೊಸ 31.6ಕೆ ಓಟ ಸೇರಿದಂತೆ ಎಲ್ಲಾ ರೀತಿಯ ರೇಸ್‌ಗಳಿಗೆ ಈಗಿನಿಂದಲೇ ನೋಂದಣಿ ಆರಂಭಗೊಂಡಿದೆ. ಆಸಕ್ತರು ಆನ್‌ಲೈನ್‌ನಲ್ಲಿ www.midnightmarathon.in ಮೂಲಕ ಡಿಸೆಂಬರ್ 8, 2024ರೊಳಗೆ ನೋಂದಾಯಿಸಿಕೊಳ್ಳಬಹುದು.

ಮಿಡ್‌ನೈಟ್ ಮ್ಯಾರಥಾನ್ ರೇಸ್‌ಗಳಿಗೆ ಸಂಬAಧಿಸಿದ ಹೆಚ್ಚಿನ ಮಾಹಿತಿಗೆ www.midnightmarathon.in ನೋಡಬಹುದು ಅಥವಾ info@midnightmarathon.in ಗೆ ಇ-ಮೇಲ್ ಮಾಡಬಹುದು.

ಬಿಎಂಎಂ 2024 ಈವೆಂಟ್‌ಗಳು ಹಾಗೂ ಸಮಯ: ಡಿಸೆಂಬರ್ 14, 20204

  1. ಫಾಸ್ಟೆನಲ್ಬಿಕೆ5ಕೆ ರನ್ (ಟೈಮ್ಡ್) ಸಂಜೆ 6:30
  2. ವೈಸೆನ್5ಕೆ ಫನ್ ರನ್ (ನಾನ್-ಟೈಮ್ಡ್) ಸಂಜೆ 6:40
  3. ರೋಟರಿಕಪ್ ಚಾಲೆಂಜ್ ರಾತ್ರಿ 8:10
  4. ಫ್ರೈಮ್ವಿಪಿ #FittestStartupChallenge ರಾತ್ರಿ 8:15
  5. ಅಕಾಮಾಯಿ10ಕೆ ರನ್ ರಾತ್ರಿ 8:30
  6. ಫೋನ್‌ಪೇಫುಲ್ ಮ್ಯಾರಥಾನ್ ರಾತ್ರಿ 11:00
  7. ದಿಶಾಹ್ಯಾಬಿಟ್ಯಾಟ್ 31.6ಕೆ ರನ್ ರಾತ್ರಿ 11:10
  8. ಅಗ್ರಿಪ್ಲಾಸ್ಟ್ಹಾಫ್ ಮ್ಯಾರಥಾನ್ ರಾತ್ರಿ 11:25
  • ಬೆಂಗಳೂರಿನವೈಟ್‌ಫೀಲ್ಡ್ನಲ್ಲಿರುವ ಕೆಟಿಪಿಒದಲ್ಲಿ ಬಿಎಂಎಂ 2024 ಡಿ.14ರಂದು ಆಯೋಜನೆ
  • ಹಾಂಗ್ಜೌಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನ ಗೆದ್ದ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ರಾಯಭಾರಿ
  • ಈಬಾರಿ 31.6ಕೆ ಹೊಸ ರೇಸ್ ಸೇರ್ಪಡೆ | ಬಿಎಂಎಂ 2024 ಥೀಮ್ `ಸುರಕ್ಷಿತ ನಗರಕ್ಕಾಗಿ ಓಟ'
  • ನೋಂದಣಿಗೆಡಿ.8 ಕೊನೆಯ ದಿನ. www.midnightmarathon.in ನಲ್ಲಿ ನೋಂದಾಯಿಸಿ