ಕ್ರೀಡೆ

38ನೇ ರಾಷ್ಟ್ರೀಯ ಕ್ರೀಡಾಕೂಟ: ಮೊದಲ ದಿನ ರಾಜ್ಯಕ್ಕೆ 7 ಪದಕ

ಡೆಹ್ರಾಡೂನ್​: ರಾಷ್ಟ್ರೀಯ ಕ್ರೀಡಾಕೂಟದ 38ನೇ ಆವೃತ್ತಿಯ ಮೊದಲ ದಿನವೇ ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕ ಈಜುಪಟುಗಳು 5 ಚಿನ್ನ ಹಾಗೂ 2 ಬೆಳ್ಳಿ ಸಹಿತ ಒಟ್ಟು 7 ಪದಕಗಳನ್ನು ಬಾಚಿಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಖೋಖೋ, ಕಬಡ್ಡಿ ಸ್ಪರ್ಧೆಗಳಲ್ಲಿ ರಾಜ್ಯ ಶುಭಾರಂಭ ಕಂಡಿದೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ದೇಶದ ಕಿರಿಯ ಅಥ್ಲೀಟ್​ ಧಿನಿಧಿ ದೇಸಿಂಘು ಬುಧವಾರ ನಡೆದ ಈಜು ಸ್ಪರ್ಧೆಯಲ್ಲಿ ಒಟ್ಟು ಮೂರು ಸ್ವರ್ಣ ಪದಕಗಳನ್ನು ಜಯಿಸುವ ಜತೆಗೆ ನೂತನ ರಾಷ್ಟ್ರೀಯ ದಾಖಲೆ ರಚಿಸಿದರು. ಮಹಿಳೆಯರ 200 ಮೀಟರ್​ ಫ್ರಿಸ್ಟೆ$ಲ್​ ವಿಭಾಗದಲ್ಲಿ 2 ನಿಮಿಷ 3.24 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ 14 ವರ್ಷದ ಧಿನಿಧಿ ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣ ಪದಕ ತನ್ನದಾಗಿಸಿಕೊಂಡರು. 2022ರ ಕೂಟದಲ್ಲಿ ರಾಜ್ಯದ ಹಶಿಕಾ ರಾಮಚಂದ್ರ (2ನಿ.7.08ಸೆ) ನಿರ್ಮಿಸಿದ ದಾಖಲೆಯನ್ನು ಮುರಿದರು. ದೆಹಲಿಯ ಭವ್ಯಾ ಸಚ್​ದೇವ್​ (2ನಿ, 6.68ಸೆ) ಹಾಗೂ ಮಹಾರಾಷ್ಟ್ರದ ಅದಿತಿ (2ನಿ,9.74ಸೆ) ಕ್ರಮವಾಗಿ ಬೆಳ್ಳಿ, ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಸ್ಪರ್ಧೆಯಲ್ಲಿದ್ದ ರಾಜ್ಯದ ಮತ್ತೋರ್ವ ಈಜುಪಟು ಮೀನಾ ಮೆನನ್​ (2ನಿ,17.18ಸೆ) ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.

100 ಮೀಟರ್​ ಬಟರ್​ ್ಲೆ$ ವಿಭಾಗದಲ್ಲೂ ಗಮರ್ನಾಹ ನಿರ್ವಹಣೆ ತೋರಿದ ಧಿನಿಧಿ ಹಾಗೂ ರಾಜ್ಯದ ನೈಶಾ ಶೆಟ್ಟಿ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಧಿನಿಧಿ 1 ನಿಮಿಷ 3.62 ಸೆಕೆಂಡ್​ಗಳಲ್ಲಿ ಗುರಿ ತಲುಪಿದರೆ, ನೈಶಾ ಶೆಟ್ಟಿ 1 ನಿಮಿಷ 4.81 ಸೆಕೆಂಡ್​ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಒಡಿಶಾದ ಸೃಷ್ಟಿ ಉಪಾಧ್ಯಾಯ (1ನಿ,5.20ಸೆ) ಮೂರನೇ ಸ್ಥಾನಗಳಿಸಿದರು. ಧಿನಿಧಿ ಹಾಗೂ ನೈಶಾ 4*100 ಮೀಟರ್​ ಫ್ರೀಸ್ಟೆ$ಲ್​ ರಿಲೇಯಲ್ಲಿ ಚಿನ್ನ ಗೆದ್ದ ಕರ್ನಾಟಕ ತಂಡದ ಸದಸ್ಯರು ಆಗಿದ್ದಾರೆ.

ಪುರುಷರ 200 ಮೀಟರ್​ ಫ್ರೀಸ್ಟೆ$ಲ್​ ವಿಭಾಗದಲ್ಲಿ 1 ನಿಮಿಷ 50.57 ಸೆಕೆಂಡ್​ಗಳಲ್ಲಿ ಗುರಿ ತಲುಪಿದ ಶ್ರೀ ಹರಿ ನಟರಾಜ್​ ಚಿನ್ನ ಗೆದ್ದರೆ, ಅನೀಶ್​ ಗೌಡ 1 ನಿಮಿಷ 52.42 ಸೆಕೆಂಡ್​ಗಳಲ್ಲಿ ಕ್ರಮಿಸಿ ರಜತ ಹಾಗೂ ಕೇರಳದ ಸಜನ್​ ಪ್ರಕಾಶ್​ 1 ನಿಮಿಷ 53.73 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ರಿಲೇ ಕ್ಲೀನ್​ಸ್ವೀಪ್​

ಪುರುಷರ ಹಾಗೂ ಮಹಿಳಾ ವಿಭಾಗದ 4*100 ಮೀಟರ್​ ಸ್ಟೆ$ಲ್​ ರಿಲೇ ವಿಭಾಗದ ಸ್ಪರ್ಧೆಯಲ್ಲಿ ಕರ್ನಾಟಕದ ಈಜುಪಟುಗಳು ಕ್ಲೀನ್​ಸ್ವೀಪ್​ ಸಾಧಿಸಿದರು. ಒಲಿಂಪಿಯನ್​ ಶ್ರೀಹರಿ ನಟರಾಜ್​, ಆಕಾಶ್​ ಮಣಿ, ಚಿಂತನ್​ ಎಸ್​ ಶೆಟ್ಟಿ ಹಾಗೂ ಅನೀಶ್​ ಎಸ್​ ಗೌಡ ಒಳಗೊಂಡ ಪುರುಷರ ತಂಡ 3 ನಿಮಿಷ 26.26 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ಮಹಿಳಾ ವಿಭಾಗದಲ್ಲಿ ನಿನಾ ವೆಂಕಟೇಶ್​, ಶಾಲಿನಿ ಆರ್​ ದೀತ್​, ಲತೀಶಾ ಮಂದಣ್ಣ ಹಾಗೂ ಧಿನಿಧಿ ದೇಸಿಂಘು ಒಳಗೊಂಡ ತಂಡ 4 ನಿಮಿಷ 1.58 ಸೆಕೆಂಡ್​ಗಳಲ್ಲಿ ಗುರಿ ತಲುಪಿ ರಾಜ್ಯದ ಪದಕ ಸಂಖ್ಯೆ ಏರಿಸಿದರು. ಮಹಾರಾಷ್ಟ್ರ (4ನಿ,2.17ಸೆ) ಹಾಗೂ ತಮಿಳುನಾಡು (4ನಿ,8.17ಸೆ) ಕ್ರಮವಾಗಿ ರಜತ, ಕಂಚಿನ ಪದಕ ಗೆದ್ದುಕೊಂಡರು. ಪುರುಷರ ರಿಲೇಯಲ್ಲಿ ತಮಿಳುನಾಡು (3ನಿ,29.92ಸೆ), ಗುಜರಾತ್​ (3ನಿ, 32.23ಸೆ) ತಂಡಗಳು ಕ್ರಮವಾಗಿ 2,3ನೇ ಸ್ಥಾನ ಪಡೆದುಕೊಂಡವು.