ಕ್ರೀಡೆ

12 ವರ್ಷಗಳ ಬಳಿಕ ಭಾರತಕ್ಕೆ ತವರಿನಲ್ಲಿ ಸರಣಿ ಸೋಲು: 3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆದ್ದ ಪಾಕ್

ರಾವಲ್ಪಿಂಡಿ: ಸ್ಪಿನ್ನರ್‌ಗಳಾದ ನೋಮನ್ ಅಲಿ (42ಕ್ಕೆ 6) ಮತ್ತು ಸಾಜಿದ್ ಖಾನ್ (69ಕ್ಕೆ 4) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಎದುರು 9 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ.

ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-1ರಿಂದ ವಶಪಡಿಸಿಕೊಂಡ ಪಾಕಿಸ್ತಾನ ತಂಡ, ತವರಿನಲ್ಲಿ 3 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. 38 ವರ್ಷದ ಎಡಗೈ ಸ್ಪಿನ್ನರ್ ನೋಮನ್ (9) ಮತ್ತು 31 ವರ್ಷದ ಆ್ ಸ್ಪಿನ್ನರ್ ಸಾಜಿದ್ (10) ಪಂದ್ಯದಲ್ಲಿ ಒಟ್ಟು 19 ವಿಕೆಟ್‌ಗಳನ್ನು ಬಾಚಿಕೊಂಡರು. ಸರಣಿಯ ಕೊನೇ 2 ಟೆಸ್ಟ್‌ಗಳಲ್ಲಿ ಇವರಿಬ್ಬರು ಒಟ್ಟು 39 ವಿಕೆಟ್‌ಗಳನ್ನು ತಮ್ಮಲ್ಲೇ ಹಂಚಿಕೊಂಡರು.

ಶನಿವಾರ 3 ವಿಕೆಟ್‌ಗೆ 24 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್, 112 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 36 ರನ್ ಗುರಿ ಪಡೆದ ಪಾಕ್, 3.1 ಓವರ್‌ಗಳಲ್ಲೇ 1 ವಿಕೆಟ್‌ಗೆ 37 ರನ್ ಗಳಿಸಿ ಜಯಿಸಿತು. ಪಂದ್ಯದಲ್ಲಿ ಇನ್ನೂ ಎರಡೂವರೆ ದಿನಗಳ ಆಟ ಬಾಕಿ ಇರುವಂತೆಯೇ ಪಾಕ್ ಗೆಲುವು ಒಲಿಸಿಕೊಂಡಿತು.

ಇಂಗ್ಲೆಂಡ್: 267 ಮತ್ತು 37.2 ಓವರ್‌ಗಳಲ್ಲಿ 112 (ರೂಟ್ 33, ಬ್ರೂಕ್ 26, ಸ್ಟೋಕ್ಸ್ 3, ಜೇಮಿ ಸ್ಮಿತ್ 3, ನೋಮನ್ 42ಕ್ಕೆ 6, ಸಾಜಿದ್ ಖಾನ್ 69ಕ್ಕೆ 4), ಪಾಕಿಸ್ತಾನ: 344 ಮತ್ತು 3.1 ಓವರ್‌ಗಳಲ್ಲಿ 1 ವಿಕೆಟ್‌ಗೆ 37 (ಶಫಿಕ್ 5*, ಮಸೂದ್ 23*, ಲೀಚ್ 27ಕ್ಕೆ 1). ಪಂದ್ಯಶ್ರೇಷ್ಠ: ಸೌದ್ ಶಕೀಲ್, ಸರಣಿಶ್ರೇಷ್ಠ: ಸಾಜಿದ್ ಖಾನ್.