ಇಂಟರ್ನ್ಯಾಷನಲ್ ಸ್ಕೂಲ್ ಗೇಮ್ಸ್: ವಾಲಿಬಾಲ್ನಲ್ಲಿ ಭಾರತಕ್ಕೆ ಪ್ರಶಸ್ತಿ
ಬೆಂಗಳೂರು: ಆತಿಥೇಯ ಭಾರತ ತಂಡ ಬೆಂಗಳೂರಿನ ವಿನಾಯಕ ಪಬ್ಲಿಕ್ ಸ್ಕೂಲ್ನಲ್ಲಿ ಇತ್ತೀಚೆಗೆ ನಡೆದ 10ನೇ ಇಂಟರ್ನ್ಯಾಷನಲ್ ಸ್ಕೂಲ್ ಲೆವೆಲ್ ಗೇಮ್ಸ್ನಲ್ಲಿ (10th International School Level Games 2026) ಕ್ರಮವಾಗಿ 14 ವಯೋಮಿತಿ ಬಾಲಕಿಯರ ಮತ್ತು 16 ವಯೋಮಿತಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
14 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಭಾರತ ತಂಡ 25-12, 25-16 ಅಂತರದಿಂದ ನೇಪಾಳ ವಿರುದ್ಧ ಗೆಲುವು ಸಾಧಿಸಿತು. ವಿದ್ಯಾಸೌಧ ಪಬ್ಲಿಕ್ ಸ್ಕೂಲ್ನ ಕೃಪಾ ಪಿಆರ್ ಕುಮಾರ್ ಟೂರ್ನಿಯ ಭರವಸೆಯ ಆಟಗಾರ್ತಿ ಪ್ರಶಸ್ತಿ ಪಡೆದರು. ವಿದ್ಯಾಸೌಧ ಪಬ್ಲಿಕ್ ಸ್ಕೂಲ್ನ ಸಾಯಿ ಕೀರ್ತನಿ ಅತ್ಯುತ್ತಮ ಆಟಗಾರ್ತಿ ಮತ್ತು ಅದಿತಿ ಅತ್ಯುತ್ತಮ ಸೆಟ್ಟರ್ ಪ್ರಶಸ್ತಿಗೆ ಭಾಜನರಾದರು.
16 ವಯೋಮಿತಿಯ ಬಾಲಕರ ವಿಭಾಗದಲ್ಲಿ ಭಾರತ ತಂಡ 25-20, 16-25, 15-12 ಅಂತರದಿಂದ ನೇಪಾಳ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವೇರಿತು. ಯಶಸ್ ವಿದ್ಯಾ ಕೇಂದ್ರದ ರೇವಂತ್ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. ವಿದ್ಯಾ ಸೌಧ ಪಬ್ಲಿಕ್ ಸ್ಕೂಲ್ನ ನಿಖಿಲ್ ಭಾರ್ಗವ ಅತ್ಯುತ್ತಮ ಸೆಟ್ಟರ್ ಮತ್ತು ಜಿಂದಾಲ್ ಸ್ಕೂಲ್ನ ಮಂಜುನಾಥ್ ಭರವಸೆಯ ಆಟಗಾರ ಪ್ರಶಸ್ತಿಗೆ ಪಾತ್ರರಾದರು.