ಬಾಕ್ಸಿಂಗ್​  ಸಂಗ್ರಹ ಚಿತ್ರ
ಕ್ರೀಡೆ

ಬೆಂಗಳೂರಿನಲ್ಲಿ 10ನೇ ಎಲೈಟ್​ ಬಾಕ್ಸಿಂಗ್​ ಚಾಂಪಿಯನ್​ಷಿಪ್​

ನಗರದ ವಿದ್ಯಾನಗರ ಕ್ರೀಡಾ ಸಂಕೀರ್ಣದ ಜಯಪ್ರಕಾಶ್​ ನಾರಾಯಣ್​ ರಾಷ್ಟ್ರೀಯ ಯುವ ತರಬೇತಿ ಕೇಂದ್ರದ ಬಾಕ್ಸಿಂಗ್​ ಹಾಲ್​ನಲ್ಲಿ ನವೆಂಬರ್​ 10 ರಿಂದ 13 ರವರೆಗೆ 10ನೇ ಆವೃತ್ತಿಯ ಎಲೈಟ್​ ಪುರುಷ ಮತ್ತು ಮಹಿಳಾ ಕರ್ನಾಟಕ ರಾಜ್ಯ ಬಾಕ್ಸಿಂಗ್​ ಚಾಂಪಿಯನ್​ಷಿಪ್​ ನಿಗದಿಯಾಗಿದೆ. ಕರ್ನಾಟಕ ಅಮೆಚೂರ್​ ಬಾಕ್ಸಿಂಗ್​ ಅಸೋಸಿಯೇಷನ್​, ಭಾರತೀಯ ಬಾಕ್ಸಿಂಗ್​ ಫೆಡರೇಷನ್​ ಹಾಗೂ ರಾಜ್ಯ ಯುವ ಸಬಲೀಕಣ&ಕ್ರೀಡಾ ಇಲಾಖೆ ಸಹಯೋಗದಲ್ಲಿ ಟೂರ್ನಿ ನಡೆಯಲಿದೆ.

ಬೆಂಗಳೂರು: ನಗರದ ವಿದ್ಯಾನಗರ ಕ್ರೀಡಾ ಸಂಕೀರ್ಣದ ಜಯಪ್ರಕಾಶ್​ ನಾರಾಯಣ್​ ರಾಷ್ಟ್ರೀಯ ಯುವ ತರಬೇತಿ ಕೇಂದ್ರದ ಬಾಕ್ಸಿಂಗ್​ ಹಾಲ್​ನಲ್ಲಿ ನವೆಂಬರ್​ 10 ರಿಂದ 13 ರವರೆಗೆ 10ನೇ ಆವೃತ್ತಿಯ ಎಲೈಟ್​ ಪುರುಷ ಮತ್ತು ಮಹಿಳಾ ಕರ್ನಾಟಕ ರಾಜ್ಯ ಬಾಕ್ಸಿಂಗ್​ ಚಾಂಪಿಯನ್​ಷಿಪ್​ ನಿಗದಿಯಾಗಿದೆ. ಕರ್ನಾಟಕ ಅಮೆಚೂರ್​ ಬಾಕ್ಸಿಂಗ್​ ಅಸೋಸಿಯೇಷನ್​, ಭಾರತೀಯ ಬಾಕ್ಸಿಂಗ್​ ಫೆಡರೇಷನ್​ ಹಾಗೂ ರಾಜ್ಯ ಯುವ ಸಬಲೀಕಣ&ಕ್ರೀಡಾ ಇಲಾಖೆ ಸಹಯೋಗದಲ್ಲಿ ಟೂರ್ನಿ ನಡೆಯಲಿದೆ.

1986 ಜನವರಿ 1 ರಿಂದ 2008 ಡಿಸೆಂಬರ್​ 31 ರೊಳಗೆ ಜನಿಸಿದ ಬಾಕ್ಸಿಂಗ್​ ಪಟುಗಳು ಟೂರ್ನಿಯಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಪುರುಷರಿಗೆ 47&50 ಕೆ.ಜಿ.ಯಿಂದ +90 ಕೆ.ಜಿ.ವರೆಗೆ ಮತ್ತು ಮಹಿಳೆಯರಿಗೆ 45&48 ಕೆ.ಜಿ.ಯಿಂದ +80 ಕೆ.ಜಿ.ವರೆಗೆ ತಲಾ 10 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 3 ನಿಮಿಷದ 3 ಸುತ್ತು, 10 ಪಾಯಿಂಟ್ಸ್​ ಕಡ್ಡಾಯ ಸ್ಕೋರಿಂಗ್​ ನಿಯಮ ಅನ್ವಯವಾಗಲಿದೆ ಎಂದು ಕರ್ನಾಟಕ ಅಮೆಚೂರ್​ ಬಾಕ್ಸಿಂಗ್​ ಅಸೋಸಿಯೇಷನ್​ ತಿಳಿಸಿದೆ.