2019ರಲ್ಲಿ ಶ್ರೀದೇವಿ ಬೈರಪ್ಪ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರನಾದ ಯುವರಾಜ್ ಕುಮಾರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಡಿವೋರ್ಸ್ಗಾಗಿ ಸಲ್ಲಿಸಿದ್ದ ಅರ್ಜಿಯು ಇನ್ನು ಕೋರ್ಟ್ ಹಂತದಲ್ಲಿದೆ. ಈಗ ಇನ್ಸ್ಟಾಗ್ರಾಮ್ನಲ್ಲಿ ಮಹಿಳೆಯರಿಗೆ ಸಮಯ ಮೀರುವ ಮುನ್ನ ಹಕ್ಕಿನ ವಿರುದ್ಧ ಹೋರಾಡಿ ಎನ್ನುವ ಸಂದೇಶವನ್ನು ಕೊಟ್ಟಿರುವುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿದೆ.
ಶ್ರೀದೇವಿ ಪೋಸ್ಟ್ನಲ್ಲಿ ಏನಿದೆ?
ಇನ್ಸ್ಟಾಗ್ರಾಮ್ನಲ್ಲಿ ಯುವ ರಾಜ್ ಕುಮಾರ್ನೊಂದಿಗಿನ ಫೋಟೊಗಳನ್ನು ಹಂಚಿಕೊಂಡಿರುವ ಅವರು, ಹೀಗೆ ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ.
ನಾನು ಶಿಕ್ಷಣದ ಮೂಲಕವೋ ಅಥವಾ ಸಾಮಾಜಿಕ ವ್ಯವಸ್ಥೆ ಮೂಲಕವೋ ಹಕ್ಕುಗಳ ಬಗ್ಗೆ ಅರಿತುಕೊಂಡಿಲ್ಲ. ಬದಲಾಗಿ, ಕಠಿಣ ಸ್ಥಿತಿಯಲ್ಲಿದ್ದಾಗ ಹೋರಾಡಿ ತಮ್ಮ ಹಕ್ಕು ಗಿಟ್ಟಿಸಿಕೊಂಡ ಮಹಿಳಾ ಪ್ರತಿಭಟನಾಕಾರರನ್ನು ನೋಡಿ ಘನತೆಯಿಂದ ಬದುಕುವುದನ್ನು ಕಲಿತಿದ್ದೇನೆ ಎಂದು ಶ್ರೀದೇವಿ ಬೈರಪ್ಪ ಅವರು ಬರೆದುಕೊಂಡಿದ್ದಾರೆ.
ಮದುವೆಯಾಗಿ ಬದುಕೋದನ್ನಲ್ಲ ಹೋರಾಡೋದು ಕಲಿಸಿ
ಮಹಿಳೆಯರು ಮದುವೆ ಮಾಡಿಕೊಂಡು ತವರನ್ನು ಬಿಟ್ಟು ಗಂಡನ ಮನೆಗೆ ತೆರಳಿ, ಅಲ್ಲಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳೋದು, ಸಂಸಾರ, ಅಡುಗೆ, ಒಂದಾಣಿಕೆ ಮಾಡಿಕೊಳ್ಳೋದು ಹೇಗೆ ಅನ್ನೋದನ್ನು ಮಾತ್ರ ಹೇಳಿಕೊಡಲಾಗುತ್ತದೆ. ಆದರೆ, ನಮ್ಮ ಹಕ್ಕುಗಳು ಏನು. ಕಠಿಣ ಪರಿಸ್ಥಿತಿಯಲ್ಲಿ ಅದನ್ನು ಬಳಕೆ ಮಾಡಿಕೊಳ್ಳೋದು ಹೇಗೆ ಅನ್ನೋದನ್ನು ಹೇಳಿಕೊಡುವುದರಲ್ಲಿ ಹಿಂದೆ ಉಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಎರಡು ಸಲಹೆ ಫಾಲೋ ಮಾಡಿ
ನೋವುನ್ನುಂಡುಕೊಂಡು ಸೋಲೊಪ್ಪಿಕೊಳ್ಳಲು ಬಯಸದ ಮಹಿಳೆಯರಿಗೆ ನನ್ನೀ ಎರಡು ಸಂದೇಶ
ಮದುವೆಯಾದ ನಂತರ ಸುಖ ದಾಂಪತ್ಯದಲ್ಲಿರುವಾಗಲೇ ಅವರು ನಿಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರೆಸುತ್ತಾರೆ. ಆಗ, ಸಿಟ್ಟಾಗಬೇಡಿ ತಾಳ್ಮೆಯಿಂದಿರಿ, ನಿಮ್ಮ ಮೇಲೆ ನೀವು ನಂಬಿಕೆಯಿಟ್ಟುಕೊಂಡಿರಿ. ಅದನ್ನು ಸಾಬೀತು ಪಡಿಸಬೇಕಾದವರು ಅವರು ನೀವಲ್ಲ. ಮಹಿಳೆಯರ ಮೇಲೆ ಅವರು ಹೂಡುವ ದೊಡ್ಡ ಅಸ್ತ್ರ ಎಂದರೆ ಅದು ಅವಮಾನ. ನೆನಪಿಡಿ ಎಲ್ಲದಕ್ಕೂ ಕೋರ್ಟ್ ಸಾಕ್ಷಿ ಕೇಳತ್ತೆ ಸ್ಕ್ರಿಪ್ಟ್ನಲ್ಲ ಎಂದಿದ್ದಾರೆ.
ಯಾವುದು ಕಾನೂನು ಬದ್ಧ?
ಕಾನೂನು ಬದ್ಧ ಹಕ್ಕಿಲ್ಲ ಎನ್ನುತ್ತಾ, ನಿಮ್ಮ ಬಳಿ ಇರುವ ಖಾಸಗಿ ಪಟಗಳನ್ನು ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕಲು ನಿಮಗೆ ಬೆದರಿಕೆ ಹಾಕಲಾಗುತ್ತದೆ, ಆದರೆ, ಕಾನೂನು ಪ್ರಕಾರ ಬಾಹಿರ ಯಾವುದು ಗೊತ್ತೆ. ಮದುವೆಯಾದಗಿದ್ದರೂ ಸಹ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು, ಬೇರೊಬ್ಬರ ಜೊತೆ ಸ್ವತಂತ್ರ್ಯವಾಗಿ ಸುತ್ತಾಡುವುದು.
ದೇಹದ ಒಳಗೆ ಅಥವಾ ಹೊರಗಡೆಯಾದ ಪ್ರತಿ ಗಾಯವೂ ಕಣ್ಣಿಗೆ ಕಾಣೋದಿಲ್ಲ. ಆದರೆ, ಪ್ರತಿಯೊಬ್ಬರ ಮೌನಕ್ಕೂ ಅದರದ್ದೇ ಆದ ಬೆಲೆಯಿದೆ. ಪ್ರತಿ ಬಾರಿಯು ಮಹಿಳೆಯರಿಗೆ ಅವನಾನಿಸಿ, ಹಿಂಸಿಸಿ ಅದನ್ನು ಟೇಕ್ ಇಟ್ ಫಾರ್ ಗ್ರಾಂಟೆಡ್ ಆಗಿ ಹಗುರವಾಗಿ ಪರಿಗಣಿಸುವುದನ್ನು ನಾವು ನೋಡುತ್ತಾ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಾಕಿನ್ನು ಅಂತಹ ಸಮಾಜ. ಇದು ನಮ್ಮ ಪೀಳಿಗೆಗೆ ಕೊನೆಗೊಳ್ಳಬೇಕು. ಇನ್ಮುಂದೆ ಯುವತಿಯರು ವಾಸಿಸಲು ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).