ಚಿತ್ರ Instagram 
ಸ್ಯಾಂಡಲ್‌ವುಡ್

ಯುಗಾದಿ ಸಡಗರದ ನಡುವೆ ಯಶ್ ಅಭಿಮಾನಿಗಳಿಗೆ ಶಾಕ್.. 'ಟಾಕ್ಸಿಕ್' ಬಿಡುಗಡೆ ಮುಂದೂಡಿಕೆ! Toxic

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಯಶ್​ ಅಭಿನಯದ ಟಾಕ್ಸಿಕ್​ ಮುಂದೂಡಿಕೆ
  • ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಏರುಪೇರು
  • ಚಿತ್ರದ ಕೆಲವು ಸನ್ನಿವೇಶಗಳನ್ನು ಆ ಪ್ರದೇಶದಲ್ಲಿ ಚಿತ್ರೀಕರಿಸುವುದು ಅನಿವಾರ್ಯವಾಗಿತ್ತು
  • ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡ ನಿರ್ಮಾಪಕರು ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದಾರೆ
Toxic: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅನಿಶ್ಚಿತ ಪರಿಸ್ಥಿತಿಗಳು ಮತ್ತು ಯುದ್ಧದ ಭೀತಿಯಿಂದಾಗಿ ನಟ ಯಶ್​ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್​: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಮುಂದೂಡಲಾಗಿದೆ ಎಂದು ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.

ಬಿಡುಗಡೆ ಮುಂದೂಡಲು ಕಾರಣವೇನು?

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಏರುಪೇರು ಕಂಡುಬಂದಿದೆ. ಚಿತ್ರದ ಕೆಲವು ಸನ್ನಿವೇಶಗಳನ್ನು ಆ ಪ್ರದೇಶದಲ್ಲಿ ಚಿತ್ರೀಕರಿಸುವುದು ಅನಿವಾರ್ಯವಾಗಿತ್ತು. ಆದರೆ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡ ನಿರ್ಮಾಪಕರು ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದಾರೆ.

ಹೊಸ ಬಿಡುಗಡೆ ದಿನಾಂಕದ ಘೋಷಣೆ

ಈ ಹಿಂದೆ ಟಾಕಿಕ್ಸ್​ ಚಿತ್ರವನ್ನು ಮಾರ್ಚ್​ 19 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಈ ಬೆಳವಣಿಗೆಯಿಂದಾಗಿ ನಿರ್ದೇಶಕರು ಹೊಸ ದಿನಾಂಕವನ್ನು ಘೋಷಿಸಿದ್ದಾರೆ. ಮೂಲಗಳ ಪ್ರಕಾರ, ಚಿತ್ರವು 3 ತಿಂಗಳು ಕಾಲ ವಿಶ್ರಾಂತಿ ಪಡೆದು ಜೂನ್​ 4 ರಂದು ತೆರೆಯ ಮೇಲೆ ಅಬ್ಬರಿಸಲಿದೆ ಎಂದು ತಿಳಿದುಬಂದಿದೆ.

ಪೋಸ್ಟ್​ನಲ್ಲೇನಿದೆ?

"ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್" ಕೇವಲ ಒಂದು ಸಿನಿಮಾವಲ್ಲ. ಇದು ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಾವು ಕಂಡ ಮಹತ್ವಾಕಾಂಕ್ಷೆಯ ಕನಸು. ಈ ಚಿತ್ರವನ್ನು ನೇರವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ನಮ್ಮ ನೆಲದ ಕಥೆಯನ್ನು ಪ್ರಪಂಚದಾದ್ಯಂತ ವೀಕ್ಷಕರೊಂದಿಗೆ ಬೆಸೆಯುವ ದೃಢ ಸಂಕಲ್ಪ ಹೊಂದಲಾಗಿದೆ.
ವರ್ಷಗಳ ಕಾಲ ಸಮರ್ಪಿತವಾಗಿ ನಾವು ಪಟ್ಟ ಶ್ರಮದ ಫಲವನ್ನು ಇದೇ ಮಾರ್ಚ್​ 19 ರಂದು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಉತ್ಸೂಹಕರಾಗಿದ್ದೆವು. ಆದರೆ, ಮಧ್ಯಪ್ರಾಚ್ಯದಲ್ಲಿ ಉಂಟಾದ ಅನಿಶ್ಚಿತ ಪರಿಸ್ಥಿತಿಯು ನಮಗೆ ಸವಾಲಾಗಿದೆ. ಆದರಿಂದ ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ  ಜೂನ್​ 4 ರಂದು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾ ಡ್ರಗ್​ ಮಾಫಿಯಾ ಹಿನ್ನಲೆಯುಳ್ಳ ಆ್ಯಕ್ಷನ್​ ಕಥೆಯಾಗಿದ್ದು, ಪ್ರಪಂಚದಾದ್ಯಂತ ವಿಶಾಲ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದೆ (ಏಜೆನ್ಸೀಸ್​).