ನಟಿ ನಟಾಲಿಯಾ ಬರ್ನ್ 
ಸ್ಯಾಂಡಲ್‌ವುಡ್

ಯಾರೀ 'ಟಾಕ್ಸಿಕ್'​ ಬೋಲ್ಡ್​ ಬ್ಯೂಟಿ? ಹೊರಬಿತ್ತು ಯಶ್ ಜತೆ ಹಸಿಬಿಸಿ ದೃಶ್ಯದಲ್ಲಿ ಕಿಚ್ಚು ಹಚ್ಚಿದ ನಟಿಯ ಬಯೋಡೇಟಾ!

ಪ್ರಮುಖ ಮುಖ್ಯಾಂಶಗಳು

  • ಯಶ್​ ಜನ್ಮದಿನಕ್ಕೆ ಹೊರಬಿತ್ತು ಟಾಕ್ಸಿಕ್​ ಟೀಸರ್​
  • ಟೀಸರ್​​ನಲ್ಲಿ ಹಾಲಿವುಡ್​ ನಟಿಯ ಬೋಲ್ಡ್ ಲುಕ್​
  • ಚಿತ್ರದಲ್ಲಿನ ಹಸಿಬಿಸಿ ದೃಶ್ಯಕ್ಕೆ ನೆಟ್ಟಿಗರ ಕಿಡಿ
ಬೆಂಗಳೂರು: ಕೆಜಿಎಫ್​ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ನಟ ರಾಕಿಂಗ್​ ಸ್ಟಾರ್​ ಯಶ್​ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯು ನಟ ಯಶ್​​, ಫ್ಯಾನ್ಸ್​ಗಳ ನಡುವೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಒಂದೆಡೆ ಸೋಷಿಯಲ್​ ಮೀಡಿಯಾದಲ್ಲಿ ನಟನಿಗೆ ಜನ್ಮದಿನದ ಶುಭಾಶಯಗಳ ಮಹಾಪೂರ ಹರಿದುಬಂದರೆ, ಚಿತ್ರದ ಟೀಸರ್​ನ ಒಂದು ಹಸಿಬಿಸಿ ದೃಶ್ಯಕ್ಕೆ ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗುತ್ತಿರುವುದು ಮತ್ತೊಂದೆಡೆ.    

ಹಸಿಬಿಸಿ ದೃಶ್ಯದಲ್ಲಿ ಹಾಲಿವುಡ್​ ಬ್ಯೂಟಿ  

ಜ.8ರಂದು ಯಶ್ ಹುಟ್ಟುಹಬ್ಬಕ್ಕೆ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕರು ನಟನ ಅಭಿಮಾನಿಗಳಿಗೆಂದು ಸಿನಿಮಾದ ಟೀಸರ್ ಅನ್ನು ಬಿಡುಗಡೆಗೊಳಿಸಿದರು. ಇದು ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿತು. ಟೀಸರ್​​ ಆರಂಭದಲ್ಲೇ ಯಶ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ತೋರಿಸಲಾಗಿದೆ. ಇದನ್ನು ನೋಡಿದ ಸಿನಿಪ್ರಿಯರು, ಅದರಲ್ಲಿನ ವಯಸ್ಕ-ಆಧಾರಿತ ದೃಶ್ಯಗಳಿಂದಾಗಿ ತೀವ್ರ ಅಸಮಾಧಾನಗೊಂಡಿದ್ದಾರೆ. ಸದ್ಯ ಈ ದೃಶ್ಯ ಕೆಲವರ ಸಿಡಿನುಡಿಗೆ ಕಾರಣವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಯಾರೀ ನಟಾಲಿಯಾ ಬರ್ನ್?

ಟೀಸರ್​ನ ಓಪನಿಂಗ್​ ಸೀನ್​ನಲ್ಲಿ ಕಾರಿನಲ್ಲಿ ಯಶ್​ ಜತೆಗೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ನಟಾಲಿಯಾ ಬರ್ನ್. ಮೂಲತಃ ಹಾಲಿವುಡ್​ ನಟಿಯಾಗಿರುವ ಈಕೆ ಯುಕ್ರೇನಿಯನ್-ಅಮೇರಿಕನ್ ನಟಿ ಹಾಗೂ ನಿರ್ಮಾಪಕಿ. ಹಾಟ್​ ಲುಕ್​ನಲ್ಲಿ ನೆಟ್ಟಿಗರ ಹುಬ್ಬೇರಿಸಿರುವ ಈ ಚೆಲುವೆ ಯಾರೆಂಬ ಪ್ರಶ್ನೆ ಸದ್ಯ ನೋಡುಗರಲ್ಲಿ ಕಾಡಿದೆ. ಕೆಲವರು ಚಿತ್ರದಲ್ಲಿನ ಹಾಟ್​ ದೃಶ್ಯಗಳ ಅವಶ್ಯಕತೆ ಇದೆಯೇ ಎಂದು ಕೇಳುವ ಮೂಲಕ ನಟಿಯ ಹಿನ್ನೆಲೆ? ಈಕೆ ಯಾರು ಎಂಬ ಮಾಹಿತಿಯನ್ನು ಜಾಲತಾಣಗಳಲ್ಲಿ ಹುಡುಕಾಡಿದ್ದಾರೆ. 
ಯುಕ್ರೇನ್​ನ ರಾಜಧಾನಿ ಕೈವ್‌ನಲ್ಲಿ ಜನಿಸಿದ ನಟಾಲಿಯಾ, ಮಾಡೆಲಿಂಗ್, ಅಭಿನಯ ಮತ್ತು ನಿರ್ಮಾಪಕಿಯಾಗಿ ತಮ್ಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಯಶ್​ ನಟಿಸಿರುವ ಬಹುನಿರೀಕ್ಷಿತ ಟಾಕ್ಸಿಕ್‌ನಲ್ಲಿ ಕಾಣಿಸಿಕೊಂಡಿರುವ ಈ ಬ್ಯೂಟಿ, ಸದ್ಯ ಹಾಟ್​ ದೃಶ್ಯದಲ್ಲಿ ನಟಿಸಿರುವುದೇ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದೊಂದು ಸೀನ್​ನಿಂದಲೇ ಜಾಲತಾಣಗಳಲ್ಲಿ ಹೆಚ್ಚಾಗಿ ಸರ್ಚ್​ ಆಗುತ್ತಿರುವುದು ಇನ್ನೊಂದು ಕುತೂಹಲಕಾರಿ ಸಂಗತಿ.  
ಕಾರಿನಲ್ಲಿ ಯಶ್ ಜತೆ ಕಾಣಿಸಿಕೊಂಡ ಬೆಡಗಿ ಹಿನ್ನೆಲೆ ಏನು? 
ನಟಾಲಿಯಾ ಬರ್ನ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೊದಲು ಅಂತಾರಾಷ್ಟ್ರೀಯ ಮಾಡೆಲಿಂಗ್ ಮೂಲಕ ಮನರಂಜನಾ ಉದ್ಯಮಕ್ಕೆ ಎಂಟ್ರಿಕೊಟ್ಟ ಚೆಲುವೆ. ವರ್ಷಗಳ ಬಳಿಕ ಅವರು ಆ್ಯಕ್ಷನ್ ಸಿನಿಮಾ, ಹೈಪ್ರೊಫೈಲ್ ಪ್ರಾಜೆಕ್ಟ್​ಗಳಲ್ಲಿ ಹೆಚ್ಚಾಗಿ ಸಕ್ರಿಯರಾದರು. 
'ಎಕ್ಸ್​ಪ್ಯಾಂಡೇಬಲ್ಸ್​ 3',  'ಮೆಕ್ಯಾನಿಕ್: ರೆಸ್ಯೂರೆಕ್ಷನ್'​, 'ಕ್ರಿಮಿನಲ್'​ ಸೇರಿ ಒಂದಷ್ಟು ಹೆಸರಾಂತ ಸಿನಿಮಾಗಳಲ್ಲಿ ಬರ್ನ್​ ನಟಿಸಿದ್ದಾರೆ. ನಟನೆ ಹೊರತುಪಡಿಸಿದರೆ, ತಮ್ಮದೇ ಬ್ಯಾನರ್​ನಡಿ ಅವರೇ ಕಥೆ ಬರೆದು, ಚಿತ್ರವನ್ನು ನಿರ್ಮಿಸಿದ್ದಾರೆ. ಇಷ್ಟೇ ಅಲ್ಲದೇ, ಮಾರ್ಷಲ್​ ಆರ್ಟ್ಸ್​​ನಲ್ಲಿ ಪರಿಣಿತಿ ಹೊಂದಿರುವ ಈ ಹಾಟ್​ ಬ್ಯೂಟಿ, ಕೆಲವು ಸ್ಟಂಟ್​ಗಳನ್ನು ತಾವೇ ನಿರ್ದೇಶಿಸುತ್ತಾರೆ. ಹೀಗಾಗಿಯೇ, ಅವರಿಗೆ ಆ್ಯಕ್ಷನ್​ ಪ್ಯಾಕ್ಡ್​ ಚಿತ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ,(ಏಜೆನ್ಸೀಸ್).