Vijay Rashmika Wedding (ಚಿತ್ರ Instagram) 
ಸ್ಯಾಂಡಲ್‌ವುಡ್

ಸಂಗೀತ ಸಂಭ್ರಮದ ದೃಶ್ಯಗಳು ಔಟ್: ರಶ್ಮಿಕಾ-ವಿಜಯ್ ಮದುವೆ ಮನೆಯ ಸೋರಿಕೆಯಾದ ವಿಡಿಯೋದಲ್ಲಿ ಏನಿದೆ? Vijay Rashmika Wedding

ಪ್ರಮುಖ ಮುಖ್ಯಾಂಶಗಳು

  • ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಪೂರ್ವ ಸಮಾರಂಭವು ಫೆಬ್ರವರಿ 24 ರಂದು ಪ್ರಾರಂಭವಾಯಿತು
  • ಮೂರು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮಗಳು ಜರುಗಲಿದ್ದು, 26 ರಂದು ವಿವಾಹವಾಗಲಿದ್ದಾರೆ
  • ಈ ಜೋಡಿಯ ಎವರ್​ ಗ್ರೀನ್​ ಹಾಡಾದ 'ಯೇಂಟಿ ಯೇಂಟಿ' ಅನ್ನು ಸಂಗೀತ ಸಮಾರಂಭದಲ್ಲಿ ಮರುಸೃಷ್ಟಿಸಲಿದ್ದಾರೆ
  • ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು
Vijay Rashmika Wedding: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಪೂರ್ವ ಸಮಾರಂಭವು ಫೆಬ್ರವರಿ 24 ರಂದು ಪ್ರಾರಂಭವಾಯಿತು. ಮೂರು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮಗಳು ಜರುಗಲಿದ್ದು, ಫೆಬ್ರವರಿ 26 ರಂದು ಈ ಜೋಡಿ ವಿವಾಹವಾಗಲಿದ್ದಾರೆ.
ಮದುವೆಗೆ ಅಥಿತಿಗಳ ಪಟ್ಟಿಯಲ್ಲಿ ಕೆಲವೇ ಕೆಲವು ಜನರನ್ನು ಆಹ್ವಾನಿಸಲಾಗಿದ್ದು, ಅದರಲ್ಲಿ ನಿರ್ದೇಶಕ ತರುಣ್ ಭಾಸ್ಕರ್, ನಟ ಈಶಾ ರೆಬ್ಬಾ, ನಿರ್ದೇಶಕ ರಾಹುಲ್, ರವೀಂದ್ರನ್, ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ತೀರ ಆಪ್ತರನ್ನು ಕರೆಯಲಾಗಿದೆ ಎಂಬ ಊಹಾಪೋಹಗಳಿವೆ.
ವರದಿಗಳ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವಿವಾಹವನ್ನು ಆತ್ಮೀಯವಾಗಿ ನಡೆಸಬೇಕೆಂದು ಬಯಸಿದ್ದರೂ, ಮಾಧ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ಇದ್ದ ಕಾರಣ ಅವರಿಗೆ ದಂಪತಿ ಊಟ ಮತ್ತು ಭೋಜನವನ್ನು ಆಯೋಜಿಸಿದ್ದಾರೆ.

ವೈರಲ್​ ಆದ ವಿರೋಶ್ ಸಂಗೀತದ ದೃಶ್ಯಗಳು

ಈ ಜೋಡಿಯ ಎವರ್​ ಗ್ರೀನ್​ ಹಾಡಾದ 'ಯೇಂಟಿ ಯೇಂಟಿ' ಅನ್ನು ಸಂಗೀತ ಸಮಾರಂಭದಲ್ಲಿ ಮರುಸೃಷ್ಟಿಸಲಿದ್ದಾರೆ. ವೈರಲ್​ ಆದ 12 ಸೆಕೆಂಡ್​ಗಳ ಅಸ್ಪಷ್ಟ ವಿಡಿಯೋದಲ್ಲಿ, ಸಮಾರಂಭ ನಡೆಯುವ ಸ್ಥಳವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿದೆ. ವಿಶೇಷವೆಂದರೆ, ಇಡೀ ಸ್ಥಳವನ್ನು ದಂಪತಿಯ ಹಲವಾರು ಅಪರೂಪದ ಛಾಯಾಚಿತ್ರಗಳಿಂದ ರಚಿಸಿದ್ದಾರೆ.
ಇದು ಅವರಿಬ್ಬರ ಭೇಟಿಯಿಂದ ಪ್ರಾರಂಭವಾಗಿ ತೆರೆಯ ಮೇಲೆ 'ಗೀತಾ ಗೋವಿಂದಂ' ಆಗಿ ಮಿಂಚಿದ ಕ್ಷಣಗಳು ಮತ್ತು ಇತ್ತೀಚಿನ ಖಾಸಗಿ ಪ್ರವಾಸಗಳ ಫೋಟೋಗಳನ್ನು ಫ್ರೇಮ್‌ಗಳಲ್ಲಿ ಜೋಡಿಸಲಾಗಿದೆ. ಪ್ರತಿಯೊಂದು ಫೋಟೋಗಳೂ ಕೂಡ ಅವರಿಬ್ಬರ ಪ್ರೀತಿಯನ್ನು ವಿವರಿಸುತ್ತಿದೆ ಎಂದು ಅಲ್ಲಿರುವ ಅತಿಥಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಹೃದಯ ಗೆದ್ದ ಟಿಪ್ಪಣಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಫೆಬ್ರವರಿ 22 ರಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಮದುವೆಯಾಗುವುದಾಗಿ ಘೋಷಣೆ ಮಾಡಿದರು. "ನೀವು ನಮ್ಮನ್ನು 'ವಿರೋಶ್' ಎಂದು ಕರೆದಿದ್ದೀರಿ... ನಾವು ಅದನ್ನು 'ವಿರೋಶ್ ಅವರ ಮದುವೆ' ಎಂದು ಹೆಸರಿಸಲು ಬಯಸುತ್ತೇವೆ.
ನಿಮ್ಮ ಪ್ರೀತಿಗೆ ಎಂದಿಗೂ ಚಿರಋಣಿ ಎಂದು ಬರೆದು ಪೋಸ್ಟ್ ಮಾಡಿದ್ದರು.
ಬುಧವಾರ (ಫೆ25) ರಂದು ದಂಪತಿ ತಮ್ಮ ಅರಶಿಣ ಮತ್ತು ಮೆಹಂದಿ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ (ಏಜೆನ್ಸೀಸ್​).