ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೆಹೆಂದಿ ಮತ್ತು ಪ್ರಧಾನಂ ಸಮಾರಂಭ (ಚಿತ್ರ Instagram) 
ಸ್ಯಾಂಡಲ್‌ವುಡ್

ಕನಸಿನ ಮದುವೆಗೆ ಸಾಕ್ಷಿಯಾದ ಮೆಹೆಂದಿ ಸಂಜೆ: ವಿಜಯ್-ರಶ್ಮಿಕಾ ಜೋಡಿಯ ಡ್ರೀಮಿ ಫೋಟೋಸ್ ಔಟ್.. Vijay Deverakonda

ಪ್ರಮುಖ ಮುಖ್ಯಾಂಶಗಳು

  • ಸದಾ ಸುದ್ದಿಯಲ್ಲಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ವಿವಾಹ ಮಹೋತ್ಸವದ ಸಂಭ್ರಮ
  • ಇತ್ತೀಚೆಗಷ್ಟೇ ಮದುವೆ ಮತ್ತು ಸಂಗೀತ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದ ಈ ಜೋಡಿ
  • ಮೆಹೆಂದಿ ಮತ್ತು ಪ್ರಧಾನಂ ಸಮಾರಂಭದ ಸುಂದರ ಕ್ಷಣಗಳನ್ನು ಅಭಿಮಾನಿಗಳಿಗಾಗಿ ತೆರೆದಿಟ್ಟಿದ್ದಾರೆ
Vijay Deverakonda: ಸದಾ ಸುದ್ದಿಯಲ್ಲಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ವಿವಾಹ ಮಹೋತ್ಸವದ ಸಂಭ್ರಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದೆ. ಇತ್ತೀಚೆಗಷ್ಟೇ ಮದುವೆ ಮತ್ತು ಸಂಗೀತ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದ ಈ ಜೋಡಿ, ಈಗ ತಮ್ಮ ವಿವಾಹಪೂರ್ವ ಆಚರಣೆಗಳಾದ ಮೆಹೆಂದಿ ಮತ್ತು ಪ್ರಧಾನಂ ಸಮಾರಂಭದ ಸುಂದರ ಕ್ಷಣಗಳನ್ನು ಅಭಿಮಾನಿಗಳಿಗಾಗಿ ತೆರೆದಿಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮೆಹಂದಿ ಸಂಭ್ರಮದ ಫೋಟೋವೊಂದನ್ನು ಹಂಚಿಕೊಂಡು 25.02.26 ಅದು ಪ್ರಧಾನಂ ಮತ್ತು ಮೆಹೆಂದಿ ಸಂಜೆ. ಈ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿತ್ತು ಆದರೆ, ತುಂಬಾ ಬೇಗನೆ ಹೋಯಿತು. ನೀವು ನಮ್ಮ ಕೈಗಳಲ್ಲಿ ಅದ್ಭುತವಾದ ಚಿತ್ರವನ್ನು ಮೂಡಿಸಿದ್ದೀರಿ. @toraniofficial ಇದನ್ನು ನಮಗೆ ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಅದೇ ಸಂಜೆಯ ಕೆಲವು ಸಂತೋಷದಾಯಕ ಚಿತ್ರಗಳನ್ನು ವಿಜಯ್ ಪೋಸ್ಟ್ ಮಾಡಿದ್ದು, ಪ್ರಧಾನಂ ಮತ್ತು ಮೆಹೆಂದಿ ಸಮಾರಂಭದ ಸಂಜೆ. ಆ ಸಂಜೆಯು ಅತ್ಯಂತ ಮೋಜಿನಿಂದ ಕೂಡಿತ್ತು ಮತ್ತು ಸಂಪೂರ್ಣವಾಗಿ ಆ ಸಂಭ್ರಮದಲ್ಲಿ ತಲ್ಲೀನರಾಗಿದ್ದೆವು. ಆ ಸಂಭ್ರಮವು ಇನ್ನೂ 100 ಗಂಟೆಗಳ ಕಾಲ ಮುಂದುವರಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಬರೆಯುವ ಮೂಲಕ ಆ ಕ್ಷಣಗಳು ಅವರಿಗೆ ಎಷ್ಟು ಪ್ರಿಯವಾಗಿದ್ದವು ಎಂಬುದನ್ನು ತಿಳಿಸಿದ್ದಾರೆ.

ಮೆಹಂದಿ ಕಾರ್ಯಕ್ರಮಕ್ಕೆ ರಶ್ಮಿಕಾ ಮತ್ತು ವಿಜಯ್ ಏನು ಧರಿಸಿದ್ದರು?

ಈ ಸಂದರ್ಭಕ್ಕಾಗಿ, ರಶ್ಮಿಕಾ ಮಂದಣ್ಣ ಮಣ್ಣಿನ ಛಾಯೆಗಳನ್ನು ಪರಂಪರೆಯಿಂದ ಪ್ರೇರಿತವಾದ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರು. ಇದು ಸೂಕ್ಷ್ಮವಾದ ಕಸೂತಿಯನ್ನು ಒಳಗೊಂಡಿತ್ತು. ಸೊಗಸಾಗಿ ಅಲಂಕರಿಸಲ್ಪಟ್ಟ ಈ ಉಡುಗೆ ಮೆಹೆಂದಿ ಕಾರ್ಯಕ್ರಮಕ್ಕೆ ಉತ್ತಮ ಬೆರಗನ್ನು ನೀಡತ್ತಿತ್ತು. ಮತ್ತೊಂದೆಡೆ, ವಿಜಯ್ ರಾಜಮನೆತನದ ಲುಕ್​ ನೀಡುವ ಬಟ್ಟೆಯನ್ನು ಆರಿಸಿಕೊಂಡಿದ್ದಾರೆ. ಅವರು ಕುರ್ತಾ ಮತ್ತು ಸಾಂಪ್ರದಾಯಿಕ ಧೋತಿಯನ್ನು ಧರಿಸಿದ್ದರು.
ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಅವರ ವಿವಾಹ ಆಚರಣೆಯನ್ನು ದಿ ವೆಡ್ಡಿಂಗ್ ಆಫ್ ವಿರೋಶ್ ಎಂದು ಕರೆಯಲಾಗುತ್ತಿತ್ತು. ಈ ಮದುವೆಯಲ್ಲಿ ಆಪ್ತರು, ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು (ಏಜೆನ್ಸೀಸ್).