Gilli Nata  
ಸ್ಯಾಂಡಲ್‌ವುಡ್

ಗಿಲ್ಲಿ ಗೆದ್ದಿದ್ದಕ್ಕೆ ಅರ್ಧ ಮೀಸೆ ಬೋಳಿಸಿಕೊಂಡ ವ್ಯಕ್ತಿ: ಚಾಲೆಂಜ್ ಹಾಕಿದ್ದೇ ಮುಳುವಾಯ್ತು! Gilli Nata

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ( Gilli Nata ) ಫಿನಾಲೆಯಲ್ಲಿ 'ಗಿಲ್ಲಿ ನಟ' ಅವರು ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್ ಆಗಿದ್ದ ಒಂದು ಸವಾಲು ಈಗ ನಿಜವಾಗಿದೆ.
ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ, ಗಿಲ್ಲಿ ನಟ ಅವರು ಬಿಗ್ ಬಾಸ್ ವಿಜೇತರಾಗುವುದಿಲ್ಲ. ಒಂದು ವೇಳೆ ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಗೆದ್ದರೆ, ನಾನು ನನ್ನ ಅರ್ಧ ಗಡ್ಡ ಮತ್ತು ಮೀಸೆಯನ್ನು ಬೋಳಿಸಿಕೊಳ್ಳುತ್ತೇನೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ಮುಕ್ತ ಸವಾಲು ಹಾಕಿದ್ದರು.
ಜನವರಿ 18, 2026 ರಂದು ನಡೆದ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ಅವರ ಹೆಸರನ್ನು ವಿನ್ನರ್ ಎಂದು ಘೋಷಿಸುತ್ತಿದ್ದಂತೆ, ಇತ್ತ ಅಬ್ದುಲ್ ರಜಾಕ್ ಅವರು ತಾವು ನೀಡಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ. ಅವರು ತಮ್ಮ ಅರ್ಧ ಭಾಗದ ಗಡ್ಡ ಮತ್ತು ಮೀಸೆಯನ್ನು ಶೇವ್ ಮಾಡಿಸಿಕೊಂಡು ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅರ್ಧ ಮೀಸೆಯೊಂದಿಗೆ ಕಾಣಿಸಿಕೊಂಡ ಆ ವ್ಯಕ್ತಿಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ. "ಗಿಲ್ಲಿಗಾಗಿ ನಾನು ಮೀಸೆ ಕಳೆದುಕೊಳ್ಳಲು ಸಿದ್ಧ" ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ಗಿಲ್ಲಿ ನಟ ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ತಮ್ಮ ಬೆಂಬಲ ಸೂಚಿಸಿದ್ದರು, ಆದರೆ ಈತ ಗಿಲ್ಲಿ ಬಿಗ್​ಬಾಸ್​ ಗೆಲ್ಲಲು ಚಾನ್ಸ್​​ ಇಲ್ಲ. ಒಂದು ವೇಳೆ ಗಿಲ್ಲಿ ಬಿಗ್ ಬಾಸ್ ಟ್ರೋಫಿ ಗೆದ್ದರೆ, ನಾನು ನನ್ನ ಅರ್ಧ ಗಡ್ಡ ಮತ್ತು ಮೀಸೆಯನ್ನು ಬೋಳಿಸಿಕೊಳ್ಳುತ್ತೇನೆಂದು ಹಾಕಿರುವ ಸವಾಲು ಹೆಚ್ಚು ಗಮನ ಸೆಳೆದಿತ್ತು.
ಸುಮಾರು 40 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಅವರು ಬಿಗ್ ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ವೋಟ್ ಪಡೆದ ಸ್ಪರ್ಧಿಯಾಗಿ ದಾಖಲೆ ಬರೆದಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ನಗದು, ಒಂದು ಐಷಾರಾಮಿ ಕಾರು ಮತ್ತು ಸುದೀಪ್ ಅವರಿಂದ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಅರ್ಧ ಮೀಸೆಯ ಕಾಮಿಡಿ ಮೂಲಕ ಹೇಗೆ ಫೇಮಸ್ ಆಗಿದ್ದರೋ, ಅದೇ ರೀತಿ ಮನೆಯ ಹೊರಗೆ ಅವರ ಅಭಿಮಾನಿಯೊಬ್ಬರು ಅರ್ಧ ಮೀಸೆ ತೆಗೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.