ಬಾಸ್​ 
ಸ್ಯಾಂಡಲ್‌ವುಡ್

Boss Teaser - ಬಾಸ್​, ಇದು ಶಿವಸ್ವಾಮಿ ಕೊಲೆ ಕೇಸ್​!

Boss Teaser - "ನಮ್ಮಪ್ಪ ಅಮ್ಮನಿಗೆ ವಯಸ್ಸಾಗಿದೆ. ನನ್ನ ಹೆಂಡತಿ ಪ್ರಗ್ನೆಂಟ್​... ನನ್ನ ಬಿಟ್ಬಿಡಿ ಸರ್​....' ಎಂಬ ಹಿನ್ನೆಲೆ ಧ್ವನಿಯಿಂದ ಟೀಸರ್​ ಆರಂಭವಾಗುತ್ತದೆ. ಅಲ್ಲಿಂದ ಪೊಲೀಸ್​ ಕಂಟ್ರೋಲ್​ ರೂಮ್​ನಿಂದ ವಾಕೀಟಾಕಿ ಸಂದೇಶ, "ಪೈಪ್​ಲೈನ್​ ಮೋರಿ ಹತ್ತಿರ ಒಂದು ಅನಾಥ ಶಿವ ಸಿಕ್ಕಿದೆ...' ಎಂದು ಶಿಫ್ಟ್​ ಆಗುತ್ತದೆ. ಇಲ್ಲಿಗೆ ಇದು ಯಾರ ಕುರಿತ ಕಥೆ ಎಂಬುದರ ಬಗ್ಗೆ ಸ್ವಲ್ಪ ಕ್ಲಾರಿಟಿ ಸಿಕ್ಕಿಬಿಡುತ್ತದೆ. ಅಂದಹಾಗೆ, ಇದು "ನಟ್ವರ್​ಲಾಲ್​' ಯಶಸ್ಸಿನ ಬಳಿಕ ನಟ ತನುಷ್​ ಶಿವಣ್ಣ ಮತ್ತು ನಿರ್ದೇಶಕ ಪಿ. ಲವ ಕಾಂಬಿನಷೇನ್​ನಲ್ಲಿ ಮೂಡಿಬಂದಿರುವ "ಬಾಸ್​' ಚಿತ್ರದ ಟೀಸರ್​ ಹೈಲೈಟ್ಸ್​. ಚಿತ್ರಕ್ಕೆ "ಸತ್ಯಮೇವ ಜಯತೆ' ಎಂಬ ಅಡಿಬರಹವಿದೆ. ನಿರ್ದೇಶಕ ಲವ, "ಇದು ರೇಣುಕಸ್ವಾಮಿ ಕಥೆಯಲ್ಲ, ಶಿವಸ್ವಾಮಿ ಕಥೆ. ಇದು ನೈಜ ಟನೆಯಾಧಾರಿತ ಚಿತ್ರವಲ್ಲ. ಸಮಾಜದಲ್ಲಿ ನಡೆಯುವ ಹಲವು ಟನೆಗಳಿಂದ ಪ್ರೇರೇಪಣೆ ಪಡೆದು, ನಾನು ಕಾಲ್ಪನಿಕ ಕಥೆ ಮಾಡಿಕೊಂಡಿದ್ದೇನೆ. ಈ ಚಿತ್ರಕ್ಕೂ ದರ್ಶನ್​ ಸರ್​ಗೂ ಸಂಬಂಧವಿಲ್ಲ' ಎಂದು ಸ್ಪಷ್ಟನೆ ನೀಡುತ್ತಾರೆ. ಹಾಗೇ, "ಇದೊಂದು ಕೆಮ್​ ಥ್ರಿಲ್ಲರ್​ ಸ್ಟೋರಿ. ನಾನೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಈಗಾಗಲೇ ಶೂಟಿಂಗ್​ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಟ್ರೇಲರ್​ ರಿಲೀಸ್​ ಮಾಡಿ, ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ನಾಯಕ ತನುಷ್​ಗೆೆ ಇಬ್ಬರು ನಾಯಕಿಯರಿದ್ದು ಮೋನಿಕಾ ಗೌಡ ಮತ್ತು ಪಾಯಲ್​ ಚಂಗಪ್ಪ ಜೋಡಿಯಾಗಿದ್ದಾರೆ. ಉಳಿದಂತೆ ಚಿತ್ರಕ್ಕೆ ಸುರೇಶ್​ ಸಂಗೀತ, ಶರತ್​ ಎನ್​ಆರ್​ಪುರ ಛಾಯಾಗ್ರಹಣವಿರಲಿದೆ.
ಕೋಟ್​:
ಸಿನಿಮಾಗೆ ಅದರದೇ ಚೌಕಟ್ಟಿರುತ್ತದೆ. ಸೆನ್ಸಾರ್​ ಮಂಡಳಿ ಇದೆ, ಕಾನೂನುಗಳಿವೆ. ಅದನ್ನು ಮೀರಿ ನಾವೇನೂ ಮಾಡಲಾಗುವುದಿಲ್ಲ. ಸಿನಿಮಾ ನೋಡಿದ ಬಳಿಕ ಎಲ್ಲರಿಗೂ ನಮ್ಮ ಚಿತ್ರಕ್ಕೂ ದರ್ಶನ್​ ಸರ್​ಗೂ ಯಾವುದೇ ಸಂಬಂಧ ಇಲ್ಲ ಅಂತ ಗೊತ್ತಾಗುತ್ತದೆ. - ತನುಷ್​ ಶಿವಣ್ಣ, ನಾಯಕ