ಪೀಟರ್​ 
ಸ್ಯಾಂಡಲ್‌ವುಡ್

Peter Review - ಮಲೆನಾಡ ಒಡಲಲ್ಲಿ ಹುದುಗಿರುವ ಕ್ರೌರ್ಯದ ಕಥೆ

Peter Review -
ಚಿತ್ರ: ಪೀಟರ್​
ನಿರ್ದೇಶನ: ಸುಕೇಶ್​ ಶೆಟ್ಟಿ
ತಾರಾಗಣ: ರಾಜೇಶ್​ ಧ್ರುವ, ರವೀಾ ಶೆಟ್ಟಿ, ಜಾನ್ವಿ ರಾಯಲ, ರಾಮ್​ ನಾಡಗೌಡ, ಪ್ರತಿಮಾ ನಾಯಕ್​, ದೀನಾ ಪೂಜಾರಿ ಮತ್ತಿತರರು.
ಆತ ಮಡಿಕೇರಿಯ ಪೀಟರ್​ (ರಾಜೇಶ್​). ಕ್ರೈಸ್ತನಾದರೂ ಬೈಬಲ್​ನಷ್ಟೇ ಭಗವದ್ಗೀತೆಯನ್ನೂ ನಂಬುವ ಯುವಕ. ಚಂಡೆ ಅಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮ ಮೇರಿ (ಪ್ರತಿಮಾ) ಮಾನಸಿಕ ಸ್ಥಿತಿ ಕಳೆದುಕೊಂಡಿದ್ದರೆ, ಅಪ್ಪ ಜೋಸೆಫ್​ ಕುಡಿತಕ್ಕೆ ದಾಸ. ಅದರ ನಡುವೆಯೂ ಜೀವದ ಗೆಳೆಯ ಶಂಭು (ರಾಮ್​) ಮತ್ತು ಊರ ಹುಡುಗರ ಜತೆ ಸೇರಿ ತಂಡ ಕಟ್ಟಿಕೊಂಡು ಪ್ರತಿವರ್ಷ ಶ್ರೀಕೃಷ್ಣ ದೇವಸ್ಥಾನದಲ್ಲಿ ಚಂಡೆ ಬಾರಿಸುತ್ತಾನೆ. ಕಾಲೇಜು, ಊರು ಎಲ್ಲಿ ಏನೇ ನಡೆದರೂ ಮುಂದೆ ನಿಲ್ಲುವ ಪೀಟರ್​ ಎಲ್ಲೆಡೆ ಕೇಂದ್ರಬಿಂದು. ಆದರೆ, ಶ್ರೀಮಂತ ಮನೆಯ ಶರತ್​ಚಂದ್ರ (ರತ್​) ಪೀಟರ್​ ವಿರುದ್ಧ ಹಗೆ ಸಾಧಿಸಲು ತಾನೂ ಒಂದು ತಂಡ ಕಟ್ಟಿಕೊಂಡು ಬರುತ್ತಾನೆ. ಚಂಡೆ ಮೇಳದ ಸಮಯದಲ್ಲಿ ಶರತ್​ ತಲೆಗೆ ಪೆಟ್ಟು ಬಿದ್ದು, ಆ ಆರೋಪ ಪೀಟರ್​ ಮೇಲೆ ಬರುತ್ತದೆ. ಮತ್ತೊಂದೆಡೆ ಪೀಟರ್​ ಮತ್ತು ಕಾಲೇಜು ವಿದ್ಯಾರ್ಥಿನಿ ಮೀರಾ (ರವೀಕ್ಷಾ) ನಡುವೆ ಲವ್​ಸ್ಟೋರಿ ಪ್ರಾರಂಭವಾಗಿರುತ್ತದೆ. ಈಗ ಪೀಟರ್​ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ತಲೆಮರೆಸಿಕೊಂಡು ಹೋಗಬೇಕಾದ ದುಸ್ಥಿತಿ. ಹಾಗಾದರೆ ಪೀಟರ್​ ಹೋಗುವುದೆಲ್ಲಿ? ಚಂಡೆ ತಂಡದ ಕಥೆಯೇನು? ತಾಯಿ ಮಾನಸಿಕ ಸ್ಥಿತಿ ಕಳೆದುಕೊಳ್ಳಲು, ಅಪ್ಪ ಕುಡುಕನಾಗಲು ಕಾರಣವೇನು? ಮೀರಾ ಏನಾಗುತ್ತಾಳೆ? ಶರತ್​ನ ಪೀಟರ್​ ಕೊಂದಿರುತ್ತಾನಾ? ಹೀಗೆ ಹಲವು ಪ್ರಶ್ನೆಗಳಿಗೆ ದ್ವೀತಿಯಾರ್ಧದಲ್ಲಿ ಉತ್ತರ ಸಿಗುತ್ತದೆ.
ಸಿನಿಮಾಗಳಲ್ಲಿ ಸಾಮಾನ್ಯವಾಗಿ ನಾಯಕ, ನಾಯಕಿ, ಖಳನಾಯಕ, ಒಂದು ಪೋಷಕ ಅಥವಾ ಹಾಸ್ಯಪಾತ್ರಕ್ಕೆ ಪ್ರಾಮುಖ್ಯ ನೀಡಲಾಗುತ್ತದೆ. ಹಾಗೇ ಮೊದರ್ಲಧದಲ್ಲಿ ಪಾತ್ರಗಳನ್ನು ಪರಿಚಯಿಸಿ ಮೂರ್ನಾಲ್ಕು ಪ್ರಶ್ನೆಗಳನ್ನು ಸೃಷ್ಟಿಸಿ, ದ್ವೀತಿಯಾರ್ಧದಲ್ಲಿ ಉತ್ತರ ನೀಡುವುದು ಸಹ ಕಾಮನ್​. ಆದರೆ, ಈ ವಿಷಯಗಳಲ್ಲಿ ಸುಕೇಶ್​ ಶೆಟ್ಟಿ ಹಲವು ಹೆಜ್ಜೆ ಮುಂದೆ ಹೋಗಿದ್ದಾರೆ. ಏಕೆಂದರೆ ಈ ಚಿತ್ರಕ್ಕೆ "ಪೀಟರ್​' ಅಂತ ಮಾತ್ರವಲ್ಲ "ಜೆಸ್ಸಿ', "ಡೇವಿಡ್​', "ಜೋಸ್​ೆ', "ಮೇರಿ', "ಶಂಭು', "ಮೀರಾ', "ರಾಧಾ'... ಹೀಗೆ ಯಾವ ಪಾತ್ರದ ಹೆಸರನ್ನು ಬೇಕಾದರೂ ಇಡುವಷ್ಟರ ಮಟ್ಟಿಗೆ ಎಲ್ಲ ಪಾತ್ರಗಳೂ ಕಥೆಯನ್ನು ಹೊತ್ತು ಸಾಗುತ್ತವೆ. ಮೊದರ್ಲಧ "ಪೀಟರ್​' ಕಡಿಮೆ ಎಂದರೂ ಹತ್ತು ಪ್ರಶ್ನೆಗಳನ್ನು ಹುಟ್ಟಿಹಾಕುತ್ತಾನೆ. ಮಗನಾಗಿ, ಪ್ರೇಮಿಯಾಗಿ, ತಮ್ಮನಾಗಿ, ಗೆಳೆಯನಾಗಿ ಎಲ್ಲ ಸಂಬಂಧಗಳಲ್ಲೂ ಸಿಲುಕಿ ನಲುಗುವ ಪೀಟರ್​ ಆಗಿ ರಾಜೇಶ್​ ಧ್ರುವ ಗಮನ ಸೆಳೆಯುತ್ತಾರೆ. ಪ್ರತಿಮಾ, ದೀನಾ, ರಾಮ್​, ರವೀಾ, ಜಾನ್ವಿ ಪಾತ್ರಗಳು ಸಹ ಅವರಿಗೆ ಸಮನಾಗಿ ನಿಲ್ಲುತ್ತವೆ. ರಿತ್ವಿಕ್​ ಮುರಳೀಧರ್​ ಸಂಗೀತದಲ್ಲಿ "ಸುಂದರಿ ಸುಂದರಿ' ಸಾಂಗ್​ ಸಾಗುವ ಸಾಲಿನಷ್ಟೇ ಸುಂದರವಾಗಿದೆ. ಗುರುಪ್ರಸಾದ್​ ಸೆರೆಹಿಡಿದಿರುವ ಮಲೆನಾಡ ಹಸಿರ ಸೊಬಗು, ಅದನ್ನು ಕೌತುಕ ಕಥೆಯಲ್ಲಿ ನಿರೂಪಿಸಿರುವ ಸುಕೇಶ್​ ಶೆಟ್ಟಿ ಬುದ್ಧಿವಂತಿಕೆ, ಅದೆರಡಕ್ಕೂ ತಕ್ಕ ಹಿನ್ನೆಲೆ ಸಂಗೀತ "ಪೀಟರ್​'ಅನ್ನು ಮತ್ತೊಂದು ಹಂತಕ್ಕೇರಿಸಿವೆ.