Amrutha Anjan Review - "ಅಮೃತ ಅಂಜನ್' ಮೂಲಕ 6 ಇಂಚು ಮೊಬೈಲ್ ಸ್ಕ್ರೀನ್ನಿಂದ 60 ಅಡಿ ಬಿಗ್ಸ್ಕ್ರೀನ್ಗೆ ಯೂಟ್ಯೂಬ್ ಸ್ಟಾರ್ಗಳು ದಂಡಯಾತ್ರೆ ಹೊರಟಿದ್ದಾರೆ. ಜ್ಯೋತಿರಾವ್ ಮೋಹಿತ್ ನಿರ್ದೇಶನದ "ಅಮೃತಾಂಜನ್' ವಿಡಿಯೋಗಳು ಯೂಟ್ಯೂಬ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಇದೀಗ ಅದೇ ಕಾನ್ಸೆಪ್ಟ್ನಲ್ಲಿ ವೈರಲ್ ಸ್ಟಾರ್ಗಳಾದ ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ಶ್ರೀಭವ್ಯ, ಕಾರ್ತಿಕ್, ಪಲ್ಲವಿ ಜತೆ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದರೆ ಹಿರಿತೆರೆಗೆ ಹೊರಟಿರುವ ಈ ಕಿರುತೆರೆ ತಂಡಕ್ಕೆ ಖುದ್ದು ನಟ ಯಶ್ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಹಾಗಾದರೆ ಹೇಗಿದೆ ಈ "ಅಮೃತ ಅಂಜನ'?
ಆತ ಜಗನ್ ರೈ ಮೋಹನ್ (ಸುಧಾಕರ್). ಕಾರ್ಕಳದ ಕಡು ಬಡ ಕುಟುಂಬದ ಹುಡುಗ. ಅಪ್ಪ (ನವೀನ್ ಪಡೀಲ್) ಕುಡುಕ, ಮಗ ತರಲೆ. ಶಾಲೆಯಲ್ಲಿ ಟೀಚರ್ನೇ ಎದುರು ಹಾಕಿಕೊಳ್ಳುವ ಜಗನ್ಗೆ ಟಿಸಿ ಕೊಟ್ಟು ಕಳುಹಿಸುತ್ತಾರೆ. ಕೊನೆಗೆ ದೂರ ಸಿಟಿಯಲ್ಲಿ ಹಾಸ್ಟೆಲ್ ಸೇರುತ್ತಾನೆ. ಶಾಲೆ ಮುಗಿಸಿ ಎಂಜಿನಿಯರಿಂಗ್ ಕಾಲೇಜಿಗೆ ಹೋಗುವ ಜಗನ್ಗೆ ವಿವಾಹಿತ ಐಟಿ ಉದ್ಯೋಗಿ ಗೌರವ್ ಮತ್ತು ಉಂಡಾಡಿ ಗುಂಡನಂತೆ ಕಂಠಪೂರ್ತಿ ಕುಡಿದು ಓಡಾಡಿಕೊಂಡಿರುವ ಉಮೇಶ್ (ಕಾರ್ತಿಕ್) ಗೆಳೆಯರು. ಸಂಜೆ ಮೇಲೆ ಸಭೆ ಸೇರಿ ಜೀವನದ ಆಗುಹೋಗುಗಳು, ಕಷ್ಟ&ಸುಖಗಳ ಬಗ್ಗೆ ಮಾತನಾಡುವುದು ಅವರ ರೂಢಿ. ಅದೇ ಸಮಯದಲ್ಲಿ ಆಗಷ್ಟೆ ಬ್ರೇಕಪ್ ಆದ ಉರಿ (ಪಾಯಲ್) ಮೇಲೆ ಜಗನ್ಗೆ ಪ್ರೀತಿ ಉಕ್ಕುತ್ತದೆ. ಆಕೆಯೋ ಐೋನ್, ಹೋಟೆಲ್, ಓಡಾಟ ಅಂತ ಜಗನ್ನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿ, ಬ್ರೇಕಪ್ ಎಂದುಬಿಡುತ್ತಾಳೆ. ಮುಂದೆ? ಜಗನ್ ಸಾಲದ ಜಗತ್ತಿನಿಂದ ಪಾರಾಗುತ್ತಾನಾ? ಪ್ರೀತಿಯ ಜಗತ್ತಿಗೆ ಮರಳುತ್ತಾನಾ? "ಅಮೃತ ಅಂಜನ್' ನೋಡಿ.
ಚಿತ್ರದಲ್ಲಿ ನಗಿಸುವುದರ ಜತೆ ಜತೆಗೆ ಉತ್ತಮ ಸಂದೇಶಗಳನ್ನೂ ದಾಟಿಸಲು ಯತ್ನಿಸಿದ್ದಾರೆ ನಿರ್ದೇಶಕ ಮೋಹಿತ್. ಯೂಟ್ಯೂಬ್ನಲ್ಲಿ ಬಂದಿರುವ ಕೆಲ ಸನ್ನಿವೇಶಗಳನ್ನು ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ. 153 ನಿಮಿಷಗಳ ಈ ಸಿನಿಮಾ ಸುದೀರ್ ಅಂತನ್ನಿಸಿದರೂ ಕಲಾವಿದರ ಪಾರ್ಮೆನ್ಸ್, ಕಾಮಿಡಿ ಕಚಗುಳಿ ಬೋರ್ ಆಗಲು ಬಿಡುವುದಿಲ್ಲ. ಹೀಗಾಗಿಯೇ "ಅಮೃತ ಅಂಜನ್'ಅನ್ನು ಒಮ್ಮೆ ನೋಡಲಡ್ಡಿಯಿಲ್ಲ.