‘ಮಾರ್ಕ್’ ಪೋಸ್ಟರ್ 
ಸ್ಯಾಂಡಲ್‌ವುಡ್

ಒಟಿಟಿಗೂ ಲಗ್ಗೆಯಿಟ್ಟ ‘ಮಾರ್ಕ್’: ಇದೇ 23ಕ್ಕೆ ‘ಜಿಯೋ ಹಾಟ್‌ಸ್ಟಾರ್’ ಪ್ರದರ್ಶನವಾಗಲಿದೆ ಸುದೀಪ್ ಚಿತ್ರ

ಪ್ರಮುಖ ಮುಖ್ಯಾಂಶಗಳು

  • ಯಶಸ್ವಿ 25 ದಿನಗಳನ್ನು ಪೂರೈಸಿದ ‘ಮಾರ್ಕ್’
  • ಮೊದಲ ವಾರವೇ 35 ಕೋಟಿ ಗಳಿಕೆ ಮಾಡಿದ ಚಿತ್ರ
  • ಇದೀಗ ಒಟಿಟಿಯಲ್ಲಿ ರಿಲೀಸ್ ಗೆ ಸಿದ್ಧ
ಬೆಂಗಳೂರು: ‘ಮ್ಯಾಕ್ಸ್’ ಬಳಿಕ ನಟ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಚಿತ್ರ ‘ಮಾರ್ಕ್’. ಕಳೆದ ಡಿ.25ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗೆಯೇ ತೆರೆಕಂಡ ಮೊದಲ ವಾರವೇ 35 ಕೋಟಿ ಅಧಿಕ ಗಳಿಕೆ ಮಾಡಿ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು. ಈ ಮೂಲಕ ಕ್ರಿಸ್ಮಸ್, ಹೊಸ ವರ್ಷದ ವೈಬ್‌ನ್ನು ಚಿತ್ರತಂಡ ಸದುಪಯೋಗಪಡಿಸಿಕೊಂಡಿತ್ತು. ಇದೀಗ ‘ಮಾರ್ಕ್’ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಒಟಿಟಿ ಸ್ಟ್ರೀಮಿಂಗ್ ವೇದಿಕೆ ಹಾಗೂ ಪ್ರದರ್ಶನ ದಿನಾಂಕವನ್ನು ಘೋಷಿಸಿದೆ. ಇದೇ 23ರ ಶುಕ್ರವಾರದಂದು ಮಾರ್ಕ್’ ಚಿತ್ರ ‘ಜಿಯೋ ಹಾಟ್‌ಸ್ಟಾರ್’ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಥಿಯೇಟರ್‌ನಲ್ಲಿ ಕಿಚ್ಚನ ಮಾಸ್ ಆ್ಯಕ್ಟಿಂಗ್ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಬಹುದಾಗಿದೆ. ಸುದೀಪ್ ಜತೆ ತಮಿಳಿನ ಯೋಗಿಬಾಬು, ಮಲಯಾಳಂನ ಶೈನ್ ಟಾಮ್ ಚಾಕೋ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಪ್ರತಾಪ್ ನಾರಾಯಣ್ ಕಲಾಬಳಗದಲ್ಲಿದ್ದರು.

‘45’ ಅಂದೇ ರಿಲೀಸ್

ಸುದೀಪ್ ಅಭಿನಯದ ‘ಮಾರ್ಕ್’ ರಿಲೀಸ್ ಆದ ದಿನವೇ ನಟರಾದ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ಅಭಿನಯದ ‘45’ ಚಿತ್ರ ಕೂಡ ಅಂದೇ ರಿಲೀಸ್ ಆಗಿತ್ತು. ಇದರಿಂದಾಗಿ ಬಾಕ್ಸಾಫೀಸ್‌ನಲ್ಲಿ ಕ್ಲ್ಯಾಶ್ ಆಗಿತ್ತು. ಇದೀಗ ಕಾಕತಾಳೀಯ ಎಂಬಂತೆ, ಒಟಿಟಿಯಲ್ಲೂ ಕೂಡ ಒಂದೇ ದಿನ ಅಂದರೆ 23ರಂದು ರಿಲೀಸ್ ಆಗುತ್ತಿವೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ‘ಮಾರ್ಕ್’ ಸ್ಟ್ರೀಮಿಂಗ್ ಕಂಡರೆ, ‘45’ ಜೀ5ನಲ್ಲಿ ಪ್ರದರ್ಶನವಾಗಲಿದೆ.