ಡಾ. ರವಿ ವರ್ಮಾ 
ಸ್ಯಾಂಡಲ್‌ವುಡ್

Dr. Ravi Varma - ಪರಭಾಷೆಗಳಲ್ಲಿ ಆ್ಯಕ್ಷನ್​, ಡೈರೆಕ್ಷನ್​ ಕನ್ನಡದಲ್ಲಿ ಪ್ರೊಡಕ್ಷನ್​

ಹರ್ಷವರ್ಧನ್ ಬ್ಯಾಡನೂರು
Action Choreographer Dr. Ravi Varma -
ನಾಲ್ಕು ದಶಕಗಳ ಸುದೀರ್ಘ ಸಿನಿಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಬಹುಭಾಷೆಗಳಲ್ಲಿ 700ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿರುವ ಹೆಗ್ಗಳಿಕೆ ಡಾ. ರವಿ ವರ್ಮಾಗೆ ಸಲ್ಲುತ್ತದೆ. ವಿಶೇಷ ಅಂದರೆ, ಅವರು ಆಮಿರ್​ ಖಾನ್​, ಸಲ್ಮಾನ್​ ಖಾನ್​, ಸನ್ನಿ ಡಿಯೋಲ್​ ಸೇರಿ ಹಲವು ಬಾಲಿವುಡ್​ ಸ್ಟಾರ್​ಗಳ ನೆಚ್ಚಿನ ಆ್ಯಕ್ಷನ್​ ಡೈರೆಕ್ಟರ್​. ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ "ರಕ್ಕಸಪುರದೋಳ್​' ಮೂಲಕ ನಿರ್ಮಾಣಕ್ಕೆ ಕೈ ಹಾಕಿರುವ ಅವರು, ಬಾಲಿವುಡ್​ನಲ್ಲಿ ಸಾಹಸ ನಿರ್ದೇಶನದ ಜತೆಜತೆಗೆ ನವಾಜುದ್ದಿನ್​ ಸಿದ್ದಿಕಿ ನಾಯಕನಾಗಿರುವ "ಬ್ಲೈಂಡ್​ ಬಾಬು'ಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹೀಗೆ ಸಾಹಸ, ನಿರ್ದೇಶನ, ನಿರ್ಮಾಣಗಳಲ್ಲಿ ಬಿಜಿಯಾಗಿರುವ ರವಿ ವರ್ಮಾ, ಇತ್ತೀಚೆಗಷ್ಟೆ ವಿಜಯವಾಣಿಗೆ ಮಾತಿಗೆ ಸಿಕ್ಕಿದ್ದರು. ""ರಕ್ಕಸಪುರದೋಳ್​'ಗೆ ಹಾಕಿದ್ದ ಬಜೆಟ್​ ವಾಪಸ್ಸು ಬಂತು. ಅದರ ನಡುವೆಯೇ ಮೂರು ಕಥೆಗಳನ್ನು ಓಕೆ ಮಾಡಿದ್ದೇನೆ. ಇದೇ ವರ್ಷದಂತ್ಯಕ್ಕೆ ಒಂದು ಸಿನಿಮಾ ಪ್ರಾರಂಭಿಸಲಿದ್ದೇನೆ. ನಾನು ಯಾವ ಚಿತ್ರರಂಗದಲ್ಲಿ ಕೆಲಸ ಮಾಡಿದರೂ, ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮುಂದುವರಿಸುತ್ತೇನೆ. ಜತೆಗೆ ನಾನು ನಿರ್ದೇಶಿಸುತ್ತಿರುವ ಬಾಲಿವುಡ್​ನ "ಬ್ಲೆ$ಂಡ್​ ಬಾಬು' ಶೂಟಿಂಗ್​, ಪೋಸ್ಟ್​ & ಪ್ರೊಡಕ್ಷನ್​ ಮುಗಿದಿದೆ. ಇದೇ ವರ್ಷದಂತ್ಯಕ್ಕೆ ರಿಲೀಸ್​ ಪ್ಲಾ$್ಯನ್​ ಮಾಡುತ್ತಿದ್ದೇವೆ. ತೆಲುಗಿನಲ್ಲಿ ಬಾಲಯ್ಯ 111ನೇ ಚಿತ್ರ, ಕನ್ನಡದ "ಪರಾಕ್​', "ಬಟ್ವಾರಾ 1947' ಸೇರಿ ಇನ್ನೂ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೇನೆ' ಎನ್ನುತ್ತಾರೆ.
ಡಿಯೋಲ್​ ಡಿೆಂಡರ್​
ರವಿ ವರ್ಮಾಗೆ ಕೆಲ ದಿನಗಳ ಹಿಂದಷ್ಟೇ ಸನ್ನಿ ಡಿಯೋಲ್​ ಐಶಾರಾಮಿ ಲ್ಯಾಂಡ್​ ರೋವರ್​ ಡಿೆಂಡರ್​ ಕಾರ್​ ಉಡುಗೊರೆಯಾಗಿ ನೀಡಿದ್ದರು. ಆ ಬಗ್ಗೆ ರವಿ, "ಸನ್ನಿ ಸರ್​ ಜತೆ "ಜಾಟ್​', "ಬಾರ್ಡರ್​ 2'ನಲ್ಲಿ ಕೆಲಸ ಮಾಡಿದ್ದೆ. ಅವರಿಗೆ ನನ್ನ ಕೆಲಸ ಇಷ್ಟವಾಗಿ, ಮುಂಗಡ ಹಣ ಕೊಟ್ಟು, ಡಿಸ್ಕೌಂಟ್​ ಮಾಡಿಸಿ ಡಿೆಂಡರ್​ ಕಾರು ಕೊಡಿಸಿದರು. ನಾನು ಇಎಂಐ ಕಟ್ಟುತ್ತಿದ್ದೇನೆ. ಜತೆಗೆ ಕೆಲ ದಿನಗಳ ಹಿಂದಷ್ಟೇ ಆಮಿರ್​ ಖಾನ್​ ಪ್ರೊಡಕ್ಷನ್ಸ್​ನ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಬ್ಯಾನರ್​ನ 25ನೇ ವರ್ಷದ ಸಂಭ್ರಮಾರಣೆಗೆ ಆಮಂತ್ರಿಸಿದ್ದರು. ನಾನು ಕೆಲಸವನ್ನು ಗೌರವಿಸಿದೆ. ಇವತ್ತು ಅದೇ ನನ್ನನ್ನು ಈ ಹಂತಕ್ಕೆ ಕರೆದುಕೊಂಡು ಬಂದಿದೆ. ಆ ಖುಷಿಯ ಜತೆಗೆ ನಾನು ನನ್ನ ಕುಟುಂಬಕ್ಕೆ, ಮಕ್ಕಳಿಗೆ ಹೆಚ್ಚು ಸಮಯ ನೀಡಲಾಗಲಿಲ್ಲವಲ್ಲಾ ಎಂಬ ಕೊರಗು ಸದಾ ಇದೆ' ಎಂದು ಹೇಳಿಕೊಳ್ಳುತ್ತಾರೆ.
ದಣದಿಂದ ಸುನಾಮಿ ಎದ್ದಿದೆ!
ಇತ್ತೀಚೆಗೆ ದಣದ ತಂತ್ರಜ್ಞರು ಬಾಲಿವುಡ್​ನಲ್ಲೂ ಮಿಂಚುತ್ತಿರುವ ಬಗ್ಗೆ, "ಇಲ್ಲಿಂದ ಸುನಾಮಿ ಎದ್ದಿದೆ. "ಕೆಜಿಎ್​', "ಬಾಹುಬಲಿ', "ಕಾಂತಾರ' ದೊಡ್ಡ ಮಟ್ಟದಲ್ಲಿ ಹಿಟ್​ ಆದವು. ಇಲ್ಲಿನವರು ಬಾಲಿವುಡ್​ ಕಣ್ಣಿಗೆ ಬಿದ್ದರು. ನಮ್ಮವರು ಇರುವ ಬಜೆಟ್​ನಲ್ಲಿ ಎಷ್ಟು ಚೆನ್ನಾಗಿ ಔಟ್​ಪುಟ್​ ಕೊಡಬಹುದು ಅಂತ ಚೆನ್ನಾಗಿ ಪ್ಲಾ$್ಯನ್​ ಮಾಡುತ್ತಾರೆ. ಹೀಗಾಗಿ ಒಂದೊಂದಾಗಿ ಅವಕಾಶ ನೀಡತೊಡಗಿದರು. ಇಲ್ಲಿನವರಿಗೆ ಕೆಲಸ, ಅಲ್ಲಿನವರಿಗೆ ಗುಣಮಟ್ಟದ ಕಂಟೆಂಟ್​ ದೊರೆಯಿತು. ಸದ್ಯ ಈ ಟ್ರೆಂಡ್​ ಚೆನ್ನಾಗಿ ವರ್ಕ್​ ಆಗುತ್ತಿದೆ. ಆದರೆ, ಯಾವತ್ತು ಬದಲಾಗುತ್ತೆ ಅಂತ ಹೇಳಲಾಗುವುದಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ರವಿ ವರ್ಮಾ.