ಮಹಾಶಿವರಾತ್ರಿ ಜಾಗರಣೆಯಲ್ಲಿ ನಿರತರಾಗಿರುವ ನಟಿಯರು
- ಶಿವರಾತ್ರಿ ಎಂದರೆ ಕೇವಲ ಉಪವಾಸ ಅಲ್ಲ ಎಂದು ಸಾಭಿತು ಪಡಿಸಿದ ನಟಿಯರು
- ಇಶಾ ಕೇಂದ್ರದಲ್ಲಿ ತಮನ್ನಾ ಭಾಟಿಯಾ, ಶ್ರೀನಿಧಿ ಶೆಟ್ಟಿ, ಮೌನಿ ರಾಯ್ ಮತ್ತು ಸಾರಾ ಅರ್ಜುನ್ ಭಾಗಿ
- ಭಕ್ತಿ ಹಾಡಿಗೆ ಹೆಜ್ಜೆ ಹಾಕಿದ ತಮನ್ನಾ
- ಪಾರ್ಟಿ ಮಾಡಲ್ವಾ? ಪ್ರಶ್ನಗೆ ಶ್ರೀನಿಧಿ ಶೆಟ್ಟಿ ಖಡಕ್ ಆನ್ಸರ್
ಕೊಯಮತ್ತೂರು: ಮಹಾಶಿವರಾತ್ರಿ(Shivratri) ಯ ಜಾಗರಣೆ ಎಂದರೆ ಬರೀ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ, ಅದು ಭಕ್ತಿಯ ಅಮಲಿನಲ್ಲಿ ಮೈಮರೆತು ಕುಣಿಯುವ ಸಂಭ್ರಮ ಎಂಬುದನ್ನು ದಕ್ಷಿಣ ಭಾರತದ ಖ್ಯಾತ ನಟಿಯರು ಸಾಬೀತುಪಡಿಸಿದ್ದಾರೆ.
ತಮಿಳುನಾಡಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಅದ್ಧೂರಿ ಶಿವರಾತ್ರಿ ಸಂಭ್ರಮದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ, ಬಾಲಿವುಡ್ ನಟಿ ಮೌನಿ ರಾಯ್ ಮತ್ತು 'ಧುರಂಧರ್' ಖ್ಯಾತಿಯ ಸಾರಾ ಅರ್ಜುನ್ ಒಟ್ಟಾಗಿ ಭಕ್ತಿಭಾವದ ನೃತ್ಯದೊಂದಿಗೆ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.
ಭಕ್ತಿ ಹಾಡಿಗೆ ಹೆಜ್ಜೆ ಹಾಕಿದ ತಮನ್ನಾ
ಸದ್ಯ ಸಾಮಾಜಿಕ ಮಾಧ್ಯಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ತಮನ್ನಾ ಭಾಟಿಯಾ ಶಿವನ ಭಕ್ತಿ ಗೀತೆಗೆ ತನ್ಮಯರಾಗಿ ಕುಣಿಯುತ್ತಿರುವುದನ್ನು ಕಾಣಬಹುದು. ಜನಸಾಗರದ ನಡುವೆ ನಿಂತು, ಭಕ್ತಿಯಲ್ಲಿ ಮುಳುಗಿ ಗುಂಪನ್ನು ಮುನ್ನಡೆಸುತ್ತಾ ತಮನ್ನಾ ಹೆಜ್ಜೆ ಹಾಕಿದ ರೀತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ನಾನು ಎಚ್ಚರವಾಗಿರಲು ಸಾಧ್ಯವಾದಷ್ಟು ನೃತ್ಯ ಮಾಡುತ್ತೇನೆ ಎಂದು ತಮನ್ನಾ ಈ ಸಂದರ್ಭದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ಪಾರ್ಟಿ ಮಾಡಲ್ವಾ? ಪ್ರಶ್ನಗೆ ಶ್ರೀನಿಧಿ ಶೆಟ್ಟಿ ಖಡಕ್ ಆನ್ಸರ್
ಇನ್ನು ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರಿಗೆ ಸದಾ ಒಂದು ಪ್ರಶ್ನೆ ಎದುರಾಗುತ್ತಿತ್ತಂತೆ. ನೀವು ಯಾಕೆ ಪಾರ್ಟಿ ಮಾಡುವುದಿಲ್ಲ? ಎಂದು ಕೇಳುವವರಿಗೆ ಶ್ರೀನಿಧಿ ಇಂದು ಉತ್ತರ ನೀಡಿದ್ದಾರೆ. ನಾನು ಪಾರ್ಟಿ ಮಾಡಲ್ಲ ಅಂತ ನಿಮಗ್ಯಾರು ಹೇಳಿದ್ದು? ಶಿವರಾತ್ರಿಯಂದು ನೀವು ನನ್ನನ್ನು ನೋಡಬೇಕು. ವರ್ಷವಿಡೀ ನಾನು ಕಾಯುವ ರಾತ್ರಿ ಇದು ಎಂದು ಹೇಳುತ್ತಾ ಸಾರಾ ಅರ್ಜುನ್ ಜೊತೆಗೂಡಿ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.
ಸಾರಾ ಅರ್ಜುನ್ ಮತ್ತು ಮೌನಿ ರಾಯ್ ಸಂಭ್ರಮ
ಇತ್ತೀಚೆಗೆ ಧುರಂಧರ್ ಸಿನಿಮಾ ಮೂಲಕ ಸದ್ದು ಮಾಡಿರುವ ಸಾರಾ ಅರ್ಜುನ್, ಹಸನ್ಮುಖಿಯಾಗಿ ನೃತ್ಯ ಮಾಡುವ ದೃಶ್ಯಗಳು ನೋಡುಗರ ಗಮನ ಸೆಳೆದಿವೆ. ಇಲ್ಲಿನ ಬಂದು ಶಿವನ ದರ್ಶನ ಮಾಡಲು ಅವಕಾಶ ದೊರೆತಿದ್ದು, ನನ್ನ ಪುಣ್ಯ ಎಂದು ಹೇಳಿದ್ದಾರೆ. ನಾನು ಕಳೆದ ವರ್ಷವು ಶಿವರಾತ್ರಿಯಂದು ಇಲ್ಲಿಗೆ ಬಂದಿದ್ದೆ, ಈ ವರ್ಷವು ಇಲ್ಲಿಗೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಮೌನಿ ರಾಯ್ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದುಬಂದ ಶುಭಾಶಯಗಳು
ಕೇವಲ ಇಶಾ ಕೇಂದ್ರದಲ್ಲಿ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗವೇ ಶಿವನ ಧ್ಯಾನದಲ್ಲಿ ಮುಳುಗಿತ್ತು. ಅಜಯ್ ದೇವಗನ್, ಸಾರಾ ಅಲಿ ಖಾನ್, ಸುನಿಲ್ ಶೆಟ್ಟಿ, ಅನನ್ಯಾ ಪಾಂಡೆ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಹಲವು ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಶಿವರಾತ್ರಿಯ ಶುಭಾಶಯಗಳನ್ನು ಕೋರಿದ್ದಾರೆ,(ಏಜನ್ಸೀಸ್).