ಬೆಂಗಳೂರು: ( sreeleela) ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೆ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿಯಾಗಿ ಬೆಳೆದ 'ಕಿಸ್' ಬೆಡಗಿ ಶ್ರೀಲೀಲಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಆದರೆ ಈ ಬಾರಿ ಯಾವುದೇ ಹೊಸ ಸಿನಿಮಾದ ಕಾರಣಕ್ಕಲ್ಲ, ಬದಲಾಗಿ ತಮ್ಮ ಬಾಲ್ಯದ ಮುದ್ದಾದ ಫೋಟೋವೊಂದರ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಲೀಲಾ ಅವರ ಬಾಲ್ಯದ ಫೋಟೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಫೋಟೋದಲ್ಲಿ ಶ್ರೀಲೀಲಾ ಅವರ ಮುಗ್ಧ ನೋಟ ಮತ್ತು ಕ್ಯೂಟ್ ಸ್ಮೈಲ್ ಕಂಡುಬಂದಿದ್ದು, "ಬಾಲ್ಯದಲ್ಲೂ ಶ್ರೀಲೀಲಾ ಇಷ್ಟೇ ಸುಂದರವಾಗಿದ್ದರು" ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಫೋಟೋ ಸಾವಿರಾರು ಲೈಕ್ಸ್ ಮತ್ತು ಶೇರ್‌ಗಳನ್ನು ಪಡೆದುಕೊಳ್ಳುತ್ತಿದೆ.
ಶ್ರೀಲೀಲಾ ಸದ್ಯ ತೆಲುಗು ಮತ್ತು ಕನ್ನಡದ ಹಲವು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಅವರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಇಂತಹ ಅಪರೂಪದ ಫೋಟೋಗಳು ಹೊರಬರುತ್ತಿರುವುದು ಅವರ ಫ್ಯಾನ್ ಬೇಸ್ ಅನ್ನು ಮತ್ತಷ್ಟು ಖುಷಿಪಡಿಸಿದೆ.
ಕಳೆದ ಕೆಲವು ದಿನಗಳಿಂದ ಈ ನಟಿ ಸರಿಯಾದ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಪರಾಶಕ್ತಿ ಚಿತ್ರದಲ್ಲಿ ನಟಿಸಿದ್ದರೂ, ಆ ಚಿತ್ರ ನಿರೀಕ್ಷೆಯಷ್ಟು ಪ್ರಭಾವ ಬೀರಲಿಲ್ಲ. ಆದರೆ, ಈ ಸುಂದರಿಗೆ ತೆಲುಗು ಮತ್ತು ತಮಿಳಿನಲ್ಲಿ ಸಾಲು ಸಾಲಾಗಿ ಆಫರ್ ಗಳು ಬರುತ್ತಿವೆ.