* "ಸು ಫ್ರಮ್ ಸೋ' - ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು 2025ರ ಜು. 25. ಒಟಿಟಿಯಲ್ಲಿ ರಿಲೀಸ್ ಆಗಿದ್ದು 2025ರ ಸೆ. 9ರಂದು. ಥಿಯೇಟರ್ಗಳಲ್ಲಿ ರಿಲೀಸ್ ಆದ ಕೇವಲ ಆರು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ.
* "ಕಾಂತಾರ ಅಧ್ಯಾಯ 1' - ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು 2025ರ ಅ. 1ರಂದು. ಅದಾಗಿ ಕೇವಲ ನಾಲ್ಕು ವಾರಗಳಲ್ಲಿ ಅರ್ಥಾತ್ ಅ. 31ರಂದು ಒಟಿಟಿಯಲ್ಲಿ ರಿಲೀಸ್.
* "ಮಾರ್ಕ್' - 2025ರ ಡಿ. 25ರಂದು ಥಿಯೇಟರ್ಗಳಲ್ಲಿ ರಿಲೀಸ್ ಆದ ಚಿತ್ರ, ಕೇವಲ ನಾಲ್ಕು ವಾರಗಳಲ್ಲಿ ಅರ್ಥಾತ್ 2026ರ ಜ. 23ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
* "45' - ಬಹುತಾರಾಗಣ ಸಿನಿಮಾ "45' ಕೂಡ 2025ರ ಡಿ. 25ರಂದು ರಿಲೀಸ್ ಆಗಿ "ಮಾರ್ಕ್' ಜತೆ ಬಾಕ್ಸಾಫಿಸಿನಲ್ಲಿ ನೇರ ಹಣಾಹಣಿ ನಡೆಸಿತ್ತು. ನಂತರ 2026ರ ಜ. 23ರಂದು "ಮಾರ್ಕ್' ಒಟಿಟಿಯಲ್ಲಿ ಬಿಡುಗಡೆಯಾದ ದಿನವೇ "45' ಕೂಡ ಒಟಿಟಿಗೆ ಎಂಟ್ರಿ ಕೊಟ್ಟು, ಅಲ್ಲೂ ನೇರ ಸ್ಪರ್ಧೆ ನಡೆಸಿತ್ತು.
ಎಲ್ಲ ಭಾಷೆಗಳಲ್ಲೂ ಇದೇ ಸಮಸ್ಯೆ
ಹೀಗೆ ಕನ್ನಡದ ಕೆಲ ಹಿಟ್ ಚಿತ್ರಗಳು, ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ ಬಿಡುಗಡೆಯಾದ ಕಾರಣ, ಥಿಯೇಟರ್ಗಳಿಗೆ ಜನ ಬಾರದೇ ಪ್ರದರ್ಶಕರಿಗೆ ನಷ್ಟ ಉಂಟಾಗಿತ್ತು. ಇದು ಕನ್ನಡ ಮಾತ್ರವಲ್ಲ ತೆಲುಗು ("ಮನಶಂಕರ ವರಪ್ರಸಾದ ಗಾರು, "ಅನಗನಗಾ ಒಕ ರಾಜು' ಚಿತ್ರಗಳನ್ನು ಥಿಯೇಟರ್ಗಳಲ್ಲಿ ರಿಲೀಸ್ ಆದ ಕೇವಲ ನಾಲ್ಕು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ), ತಮಿಳು ("ಕಂಗುವ', "ಅಮರನ್', "ಮಹಾರಾಜ', "ಕ್ಯಾಪ್ಟನ್ ಮಿಲ್ಲರ್' ಸೇರಿ ಹಲವು ಚಿತ್ರಗಳು ಕೇವಲ ನಾಲ್ಕರಿಂದ ಐದು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ), ಮಲಯಾಳಂ ("ಆವೇಶಂ', "ಕೊಂಡಲ್', "ಗುರುವಾಯೂರಂಬಲ ನದಯಿಲ್' ಸೇರಿ ಹಲವು ಚಿತ್ರಗಳು ಅತಿ ಕಡಿಮೆ ಅವಧಿಯಲ್ಲಿ ಒಟಿಟಿಯಲ್ಲಿ ರಿಲೀಸ್), ಮರಾಠಿ ಚಿತ್ರರಂಗಗಳಲ್ಲೂ ಸಾಮಾನ್ಯ ಸಮಸ್ಯೆಯಾಗಿತ್ತು.
ಎಂಟು ವಾರ ನಿಗದಿ
ಹೀಗಾಗಿಯೇ ಇತ್ತೀಚೆಗಷ್ಟೆ ಈ ಬಗ್ಗೆ ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಆಂಧ್ರಪ್ರದೇಶದ ಪ್ರದರ್ಶಕರ ಸಂಗಳ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ದಣ ಭಾರತ ಥಿಯೇಟರ್ ಮಾಲೀಕರ ಸಂದ ಸದಸ್ಯರು, ಬಾಲಿವುಡ್ನಲ್ಲಿ ಇರುವಂತೆ ಎಂಟು ವಾರಗಳ ಮಿತಿಯನ್ನು ದಣದ ರಾಜ್ಯಗಳಲ್ಲೂ ಜಾರಿಗೆ ತರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರದರ್ಶಕರ ವಲಯದ ಉಪಾಧ್ಯಕ್ಷ ಕಿಶೋರ್ ಕುಮಾರ್, "ಥಿಯೇಟಟ್ರಿಕಲ್ ರಿಲೀಸ್ ಮತ್ತು ಒಟಿಟಿ ರಿಲೀಸ್ ನಡುವೆ ಕಾಲಮಿತಿ ಇಲ್ಲದ ಕಾರಣ ಕಡಿಮೆ ಅವಧಿಯಲ್ಲೇ ಒಟಿಟಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಥಿಯೇಟರ್ ಮಾಲೀಕರಿಗೆ ನಷ್ಟ ಉಂಟಾಗುತ್ತಿತ್ತು. ಹೀಗಾಗಿಯೇ ಸಭೆ ನಡೆಸಿ 8 ವಾರಗಳ ಕಾಲಮಿತಿ ಕಡ್ಡಾಯಗೊಳಿಸಲು ನಿರ್ಧರಿಸಿದ್ದೇವೆ. ಏಪ್ರಿಲ್ 1ರಿಂದ ಒಪ್ಪಂದ ಆಗಲಿರುವ ಸಿನಿಮಾಗಳಿಗೆ ಇದು ಅನ್ವಯವಾಗಲಿದ್ದು, ಈಗಾಗಲೇ ಒಟಿಟಿಗಳೊಂದಿಗೆ ಒಪ್ಪಂದ ಆಗಿರುವ ಚಿತ್ರಗಳಿಗೆ ಇದು ಅನ್ವಯಿಸುವುದಿಲ್ಲ. ಈ ಬಗ್ಗೆ ನಿರ್ಮಾಪಕರು ಮತ್ತು ಒಟಿಟಿ ಮುಖ್ಯಸ್ಥರ ಗಮನಕ್ಕೆ ತಂದು, ಏಪ್ರಿಲ್ನಿಂದ ಕಡ್ಡಾಯವಾಗಿ ಜಾರಿ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.
ಕರೊನಾ ನಂತರ ಬದಲಾಗಿರುವ ಚಿತ್ರಣ
ಕರೊನಾ ಸಮಯದಲ್ಲಿ ಥಿಯೇಟರ್ಗಳು ಬಂದ್ ಆಗಿದ್ದ ಕಾರಣ ಒಟಿಟಿ ಮತ್ತು ಸಾಮಾಜಿಕ ಜಾಲತಾಣಗಳತ್ತ ಜನ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿಯೇ ಕರೊನಾ ಸಮಯದಲ್ಲಿ ತಿಂಗಳುಗಟ್ಟಲೆ ಬಾಗಿಲು ಮುಚ್ಚಿದ್ದ ಹಲವು ಥಿಯೇಟರ್ಗಳು ಮತ್ತೆ ಬಾಗಿಲು ತೆರೆದಿಲ್ಲ. ಅದರ ನಡುವೆ ಕೆಲ ಉತ್ತಮ ಸಿನಿಮಾಗಳು ಜನರನ್ನು ಕೈಬೀಸಿ ಥಿಯೇಟರ್ಗಳಿಗೆ ಕರೆತರುತ್ತಿವೆ. ಆದರೆ, ಅಷ್ಟರಲ್ಲಿ ಚಿತ್ರಗಳನ್ನು ಒಟಿಟಿ ಅಥವಾ ಟಿವಿಯಲ್ಲಿ ಪ್ರಸಾರ ಮಾಡುವ ಮೂಲಕ, ಪ್ರೇಕ್ಷಕರನ್ನು ಮತ್ತೆ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ಗಳಿಂದ ದೂರ ಇಡಲಾಗುತ್ತಿದೆ ಎಂಬ ಆರೋಪ ಕೆಲ ವರ್ಷಗಳಿಂದ ಕೇಳಿಬರುತ್ತಿತ್ತು. ಹೀಗಾಗಿಯೇ ಬಾಲಿವುಡ್ ಮಂದಿ ಒಟಿಟಿ ಮುನ್ನೆಲೆಗೆ ಬಂದ ಪ್ರಾರಂಭದಲ್ಲಿಯೇ ಥಿಯೇಟರ್ಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ಎಂಟು ವಾರಗಳ ಮಿತಿ ಕಡ್ಡಾಯಗೊಳಿಸಿದ್ದರು. ಇದೀಗ ಜನ ಮತ್ತೆ ಥಿಯೇಟರ್ಗಳತ್ತ ಬರಲು ಪ್ರಾರಂಭಿಸಿರುವ ಹೊತ್ತಲ್ಲೇ ಒಟಿಟಿಗಳು ಮತ್ತೆ ಅಡ್ಡಗಾಲು ಹಾಕುತ್ತಿರುವ ಕಾರಣ, ದಣದ ಚಿತ್ರರಂಗಗಳೂ ಎಚ್ಚೆತ್ತುಕೊಂಡಿವೆ. ಎಂಟು ವಾರಗಳ ಕಾಲಮಿತಿಯನ್ನು ಇಲ್ಲೂ ಕಡ್ಡಾಯಗೊಳಿಸಲು ಮುಂದಾಗಿವೆ.