ಸೀಟ್​ ಎಡ್ಜ್​ 
ಸ್ಯಾಂಡಲ್‌ವುಡ್

Seat Edge ಹಾಡಿನಲ್ಲಿ ಕುಣಿದು ಕುಪ್ಪಳಿಸಿದ ಸಿದ್ದು, ರಘು ರಾಮನಕೊಪ್ಪ

"ವಿಕ್ರಾಂತ್​ ರೋಣ', "ಅಜ್ಞಾತವಾಸಿ' ಖ್ಯಾತಿಯ ನಟ ಸಿದ್ದು ಮೂಲಿಮನಿ ಮತ್ತು ರವೀಕ್ಷಾ ಶೆಟ್ಟಿ ನಟಿಸಿರುವ ಡಾರ್ಕ್​ ಕಾಮಿಡಿ ಕಮ್​ ಹಾರರ್​ ಥ್ರಿಲ್ಲರ್​ ಜಾನರ್​ ಸಿನಿಮಾ "ಸೀಟ್​ ಎಡ್ಜ್​'. "ಕೆಮಿಸ್ಟ್ರಿ ಆಫ್​ ಕರಿಯಪ್ಪ', "ಕ್ರಿಟಿಕಲ್​ ಕೀರ್ತನೆಗಳು' ಸೇರಿ ಕೆಲ ಚಿತ್ರಗಳಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿರುವ ಚೇತನ್​ ಶೆಟ್ಟಿ ಚೊಚ್ಚಲ ಬಾರಿಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳುತ್ತಿರುವ ಚಿತ್ರವಿದು. ಈಗಾಗಲೇ ಶೂಟಿಂಗ್​ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರ ಆರಂಭಿಸಿರುವ ಚಿತ್ರತಂಡ "ಲೈಫು ಯಾಕೋ ಖಾಲಿ ಖಾಲಿ' ಎಂಬ ಹಾಡು ರಿಲೀಸ್​ ಮಾಡಿದೆ. ನಾಗಾರ್ಜುನ್​ ಶರ್ಮಾ ಸಾಹಿತ್ಯ ರಚಿಸಿದ್ದು, ಆಕಾಶ್​ ಪರ್ವ ಸಂಗೀತ ನೀಡಿದ್ದಾರೆ. ಸಿದ್ದಾರ್ಥ ಬೆಳ್ಮಣ್ಣು ಧ್ವನಿಯಾಗಿದ್ದು, ರಘು ಆರ್​.ಜೆ. ನೃತ್ಯ ನಿರ್ದೇಶನದಲ್ಲಿ ನಟ ಸಿದ್ದು ಮೂಲಿಮನಿ ಹಾಗೂ ರಘು ರಾಮನಕೊಪ್ಪ ಕುಣಿದು ಕುಪ್ಪಳಿಸಿದ್ದಾರೆ. ನಿರ್ದೇಶಕ ಚೇತನ್​, "ವ್ಲಾಗರ್​ ಕುರಿತು ಎಲ್ಲವೂ ಕಥೆಯಾಗಿ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ, ಅದನ್ನು ಹಾಡಿನ ಮೂಲಕ ಇಲ್ಲಿ ನಿರೂಪಿಸಿದ್ದೇವೆ. ಸದ್ಯದಲ್ಲೇ ಟ್ರೇಲರ್​ ರಿಲೀಸ್​ ಮಾಡಿ, ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್​ ಮಾಡಲಿದ್ದೇವೆ' ಎಂದು ಮಾಹಿತಿ ಹಂಚಿಕೊಂಡರು.
ಇನ್ನು ನಾಯಕನಟ ಸಿದ್ದು ಮೂಲಿಮನಿ, "ಈ ಹಾಡು ಮೊದಲೇ ಕಂಪೋಸ್​ ಮಾಡಿದ್ದರಿಂದ ಅದರ ಫೀಲ್​ ಹಾಗೂ ಕ್ರೇಜ್​ ನನಗೆ ದಕ್ಕಿತ್ತು. ಹಾಗಾಗಿ, ಈ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದೇನೆ. ಇಲ್ಲಿನ ಎಷ್ಟೋ ಸಾಲುಗಳು ನನ್ನ ಮನಸಿನ ಮಾತಾಗಿವೆ. ಬೈಕ್​ನ ಕೆಲವು ದೃಶ್ಯಗಳು ರಿಸ್ಕಿಯಾಗಿದ್ದವು. ಈ ಹಾಡಿನಲ್ಲಿ ಕಾಸ್ಟ್ಯೂಮ್​ ಬದಲಾಯಿಸಿದಷ್ಟು, ಬೇರೆ ಯಾವ ಸಿನಿಮಾದ ಹಾಡಿನಲ್ಲೂ ನಾನು ಡ್ರೆಸ್ ಬದಲಾಯಿಸಿಲ್ಲ' ಎಂದು ಶೂಟಿಂಗ್​ ಅನುಭವಗಳನ್ನು ಹಂಚಿಕೊಂಡರು.