ಕಿಚ್ಚ ಸುದೀಪ್​ ಹಾಗೂ ಪುತ್ರಿ ಸಾನ್ವಿ ಸುದೀಪ್​  
ಸ್ಯಾಂಡಲ್‌ವುಡ್

ಸುದೀಪ್​ ಪುತ್ರಿಗೂ ತಪ್ಪಲಿಲ್ಲ ಬ್ಯಾಡ್​ ಕಮೆಂಟ್​ಗಳ ಕಾಟ! ಖಡಕ್​ ತಿರುಗೇಟು ಕೊಟ್ಟು ಅಪ್ಪನ ಮಾತಿನಂತೆ ನಡೆದ ಸಾನ್ವಿ | Sanvi Sudeep

ಪ್ರಮುಖ ಮುಖ್ಯಾಂಶಗಳು

  • ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ವಿರುದ್ಧ ಕೆಟ್ಟದಾಗಿ ಕಮೆಂಟ್​
  • ಕಿಡಿಗೇಡಿಗಳ ಅಸಭ್ಯ ವರ್ತನೆಗೆ ಸಾನ್ವಿ ಸುದೀಪ್​ ಖಡಕ್​ ತಿರುಗೇಟು
  • ಅಪ್ಪನ ಮಾತನ್ನು ಈ ಮೂಲಕ ಸಾಬೀತುಪಡಿಸಿದ ಸಾನ್ವಿ
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ತನ್ನ ಬಗ್ಗೆ ಕೆಟ್ಟದಾಗಿ, ಅಸಭ್ಯವಾಗಿ ಹಾಕಿದ ಕಮೆಂಟ್​ಗಳಿಗೆ ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್​ ಇದೀಗ ಖಡಕ್​ ತಿರುಗೇಟು ನೀಡಿದ್ದಾರೆ.
ಡಿ.25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದ 'ಮಾರ್ಕ್', ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆಯ ಜತೆಗೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಈಗಾಗಲೇ ಚಿತ್ರಕ್ಕೆ ಪೈರಸಿ ಕಾಟ ಹಾಗೂ ನೆಗೆಟಿವ್​ ರಿವ್ಯೂವ್ ಸಮಸ್ಯೆಗಳು​ ಕಾಡುತ್ತಿವೆ. ಇದರ ಮಧ್ಯೆಯೇ, ಸುದೀಪ್ ಮಗಳಿಗೆ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಮೆಂಟ್​ ಹಾಕಿದ್ದಾರೆ. ಇದಕ್ಕೆ ಸಾನ್ವಿ ಕೂಡ ಮುಖಕ್ಕೆ ಹೊಡೆದಂತೆ ಉತ್ತರಿಸಿರುವುದು ಗಮನಾರ್ಹ.

ಮುಟ್ಟಿ ನೋಡಿಕೊಳ್ಳುವಂತೆ ಉತ್ತರ

ತಂದೆಯ ಸಿನಿಮಾದಲ್ಲಿ 'ಮಸ್ತ್​ ಮಲೈಕಾ' ಹಾಡನ್ನು ಹಾಡಿರುವ ಸಾನ್ವಿ, ಇದೊಂದು ಸಾಂಗ್ ಮೂಲಕ ಚಿತ್ರಪ್ರೇಮಿಗಳಿಗೆ ಇನ್ನೂ ಹತ್ತಿರವಾಗಿದ್ದಾರೆ. ಈಗಾಗಲೇ ಹಾಡು ಭಾರೀ ವೈರಲ್ ಆಗಿದ್ದು, ಸಾನ್ವಿ ಅವರ ಕಂಠಸಿರಿಗೆ ಮನಸೋಲುವಂತೆ ಮಾಡಿದೆ. ಸಾಕಷ್ಟು ಮೆಚ್ಚುಗೆ ಮತ್ತು ಪಾಸಿಟಿವ್ ಪ್ರತಿಕ್ರಿಯೆಗಳ ಮಧ್ಯೆ ಕೆಲವು 'ಕೀಬೋರ್ಡ್​ ವಾರಿಯರ್ಸ್'​ ಸಾಮಾಜಿಕ ಜಾಲತಾಣದಲ್ಲಿ ತನ್ನ ದೇಹದ ಬಗ್ಗೆ ಕೆಟ್ಟದಾಗಿ ಹಾಕಿರುವ ಪೋಸ್ಟ್​ ಕುರಿತು ಸ್ವತಃ ಸಾನ್ವಿ ಅವರೇ ಪ್ರತಿಕ್ರಿಯಿಸಿದ್ದಾರೆ.

ನನ್ನ ಮಗಳು ನನಗಿಂತ ಹತ್ತು ಪಟ್ಟು ಸ್ಟ್ರಾಂಗ್

"ನನ್ನ ದೇಹ ಒಂದು ಚರ್ಚೆಯ ವಿಷಯವೇ ಅಲ್ಲ. ಅವಶ್ಯಕತೆ ಇದ್ದಲ್ಲಿ ಅಥವಾ ನನಗೆ ಬೇಕಿದ್ದಲ್ಲಿ ನಾನೇ ನಿಮ್ಮ ಅಭಿಪ್ರಾಯ ಕೇಳುತ್ತೇನೆ" ಎಂದು ಖಡಕ್​ ಆಗಿ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಕಿಚ್ಚನ ಮಗಳ ಖಡಕ್​ ನುಡಿಗೆ ನಟನ ಅಭಿಮಾನಿಗಳು ಹಾಗೂ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದು, ವೇದಿಕೆಯಲ್ಲಿ ಸುದೀಪ್​ ಅವರು ಹೇಳಿದಂತೆ, 'ನನ್ನ ಮಗಳು ನನಗಿಂತ ಹತ್ತು ಪಟ್ಟು ಸ್ಟ್ರಾಂಗ್' ಎಂಬ ಮಾತನ್ನು ಕಡೆಗೂ ಸಾನ್ವಿ ಈ ಮೂಲಕ ಸಾಬೀತುಪಡಿಸಿದ್ದಾರೆ.