ಪೊಲ್ಲಾಚಿ ಮಹಾಲಿಂಗಂ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ, ಹಾರರ್, ಥ್ರಿಲ್ಲರ್ ಸಿನಿಮಾ 'ಮಿಕ್ಸಿಂಗ್ ಪ್ರೀತಿ' . ಸೂಪರ್ ಮಾಡೆಲ್ ಸಂಹಿತಾ ವಿನ್ಯಾ ಮತ್ತು ಮಲಯಾಳಂ ನಟ ಸಿಂಟೋ ಜೇಕಬ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲಿದೆ. ಸಂಹಿತಾ, ಸಿಂಟೋ ಜತೆ ಪ್ರಿಯಾ ಪವನ್, ದಿವ್ಯ ಜಸ್ಮಿತಾ ಪ್ರಮುಖ ತಾರಾಗಣದಲ್ಲಿದ್ದಾರೆ.
ಒಂದು ರೆಸಾರ್ಟ್ನಲ್ಲಿ ನಡೆಯುವ ಹಾರರ್ ಕಥೆಯಿದು. ಮೂವರು ಫ್ರೆಂಡ್ಸ್ ರೆಸಾರ್ಟ್ಗೆ ಹೋದಾಗ ಅವರು ಎದುರಿಸುವ ದೆವ್ವದ ಕಾಟ, ಅಲ್ಲಿಂದ ಅವರೆಲ್ಲ ಹೇಗೆ ಹೊರಬಂದರು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಅದರ ನಡುವೆ ಒಂದು ಲವ್ ಸ್ಟೋರಿ ಕೂಡ ಸಾಗುತ್ತದೆ. ಕೇರಳ, ಚೆನ್ನೈ ಹಾಗೂ ಬೆಂಗಳೂರಲ್ಲಿ ಚಿತ್ರೀಕರಣ ನಡೆಸಲಾಗಿದೆ. ರೆಸಾರ್ಟ್ನಲ್ಲಿ ರಾತ್ರಿ ವೇಳೆ ಶೂಟ್ ಮಾಡುವಾಗ ನಿಜವಾದ ಹಾರರ್ ಫೀಲ್ ಆಯ್ತು ಎಂದು ನಾಯಕಿ ಸಂಹಿತಾ ಚಿತ್ರೀಕರಣದ ಅನುಭವ ಹಂಚಿಕೊಂಡರು.
ಚಿತ್ರಕ್ಕೆ ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಜೋಡಿ ಸಂಗೀತ ನಿರ್ದೇಶನ, ಸಾಧಿಕ್ ಕಬೀರ್ ಛಾಯಾಗ್ರಹಣವಿದೆ. ಕನ್ನಡದ ಮಿಕ್ಸಿಂಗ್ ಪ್ರೀತಿ ತಮಿಳಲ್ಲಿ ಮಿಕ್ಸಿಂಗ್ ಕಾದಲ್ ಎಂಬ ಹೆಸರಲ್ಲಿ ಬಿಡುಗಡೆಯಾಗಲಿದೆ.