ಟಾಕ್ಸಿಕ್​​​ ಸಿನಿಮಾ ಬಗ್ಗೆ ರುಕ್ಕು ಹೇಳಿದ ಮಾತು ಕೇಳಿ ರಾಕಿಂಗ್​ ಸ್ಟಾರ್​ ಯಶ್​ ಫ್ಯಾನ್ಸ್​ಗೆ ಖುಷಿಯೋ ಖುಷಿ! Toxic ​ 
ಸ್ಯಾಂಡಲ್‌ವುಡ್

ಟಾಕ್ಸಿಕ್​​​ ಸಿನಿಮಾ ಬಗ್ಗೆ ರುಕ್ಕು ಹೇಳಿದ ಮಾತು ಕೇಳಿ ರಾಕಿಂಗ್​ ಸ್ಟಾರ್​ ಯಶ್​ ಫ್ಯಾನ್ಸ್​ಗೆ ಖುಷಿಯೋ ಖುಷಿ! Toxic ​

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್​ ಸ್ಟಾರ್​ ಯಶ್ ತಮ್ಮ ಮುಂದಿನ ಚಿತ್ರ ಟಾಕ್ಸಿಕ್​ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ
  • ಟಾಕ್ಸಿಕ್​ ಸಿನಿಮಾ ಜೂನ್​ 4ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ
  • ಈಗಾಗಲೇ ಬಿಡುಗಡೆಯಾಗಿರುವ ಟಾಕ್ಸಿಕ್​ ಚಿತ್ರದ ಟೀಸರ್ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿದೆ
  • ಇದೀಗ ನಟಿ ರುಕ್ಮಿಣಿ ವಸಂತ್​ ನೀಡಿರುವ ಹೇಳಿಕೆ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ
Toxic : ಕೆಜಿಎಫ್​ ಸರಣಿ ಮೂಲಕ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕ್ರೇಜ್​ ಸೃಷ್ಟಿಸಿರುವ ರಾಕಿಂಗ್​ ಸ್ಟಾರ್​ ಯಶ್, ತಮ್ಮ ಮುಂದಿನ ಚಿತ್ರ ಟಾಕ್ಸಿಕ್​ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟಾಕ್ಸಿಕ್​ ಸಿನಿಮಾ ಮಾರ್ಚ್​ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಟಾಕ್ಸಿಕ್​ ಸಿನಿಮಾ ಬಿಡುಗಡೆಯನ್ನು ಜೂನ್​ 4ಕ್ಕೆ ಮುಂದೂಡಲಾಗಿದೆ.
ಈಗಾಗಲೇ ಟಾಕ್ಸಿಕ್​ ಸಿನಿಮಾದ ಟೀಸರ್​ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೀಗ, ನಟಿ ರುಕ್ಮಿಣಿ ವಸಂತ್​ ನೀಡಿರುವ ಹೇಳಿಕೆ ಈ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ರುಕ್ಮಿಣಿ ಹೇಳಿದ್ದೇನು?

ನಟಿ ರುಕ್ಮಿಣಿ ಅವರು ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ಟಾಕ್ಸಿಕ್​ ಚಿತ್ರದ ಬಗ್ಗೆ ಮಾತನಾಡುತ್ತಾ, ಈ ಸಿನಿಮಾ ಅತ್ಯಂತ ಅದ್ಧೂರಿ ಪ್ರಮಾಣದಲ್ಲಿ ಮೂಡಿಬರುತ್ತಿದೆ ಎಂದು ತಿಳಿಸಿದ್ದಾರೆ. ತಾವು ಈವರೆಗೆ ನೋಡಿರದಂತಹ ಬೃಹತ್ ಮಟ್ಟದ ಮೇಕಿಂಗ್ ಈ ಚಿತ್ರದಲ್ಲಿದೆ ಎಂದು ಅವರು ಬಣ್ಣಿಸಿದ್ದು, ಸಿನಿಮಾದಲ್ಲಿ ಸೃಷ್ಟಿಸಲಾಗಿರುವ ಲೋಕವು ಅತ್ಯಂತ ಹೊಸದಾಗಿ ಮತ್ತು ವಿಸ್ತಾರವಾಗಿರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ಸ್ಟಾರ್ ನಟ ಯಶ್ ಅವರು ಈ ಚಿತ್ರಕ್ಕಾಗಿ ಸೃಷ್ಟಿಸುತ್ತಿರುವ ಲೋಕವು ಅತ್ಯಂತ ವಿಸ್ತಾರವಾಗಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಒಂದು ಹೊಸ ಹಾದಿಯನ್ನು ಸೃಷ್ಟಿಸಲಿದೆ ಎಂದು ರುಕ್ಮಿಣಿ ತಿಳಿಸಿದ್ದಾರೆ. ಈ ಅದ್ಭುತ ಸಿನಿಮಾದ ಭಾಗವಾಗಿರುವುದು ತಮಗೆ ಹೆಚ್ಚಿನ ಉತ್ಸಾಹ ನೀಡಿದ್ದು, ಪ್ರೇಕ್ಷಕರು ಈ ವಿಭಿನ್ನ ಲೋಕಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ತಾವು ಕುತೂಹಲದಿಂದ ಕಾಯುತ್ತಿರುವುದಾಗಿ ರುಕ್ಮಿಣಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಟಾಕ್ಸಿಕ್​ ಸಿನಿಮಾ ಜೂನ್ 4 ರಂದು ತೆರೆಕಾಣಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಹಾಗೂ ಯಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಿದ್ದು, ಈ ಚಿತ್ರವು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಗೀತು ಮೋಹನದಾಸ್ ತಮ್ಮ ಚಿತ್ರಗಳಲ್ಲಿ ಮಹಿಳಾ ಪಾತ್ರಗಳನ್ನು ಅತ್ಯಂತ ಶಕ್ತಿಯುತ ರೀತಿಯಲ್ಲಿ ತೋರಿಸುತ್ತಾರೆ. ಆದ್ದರಿಂದ, ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರವು ತುಂಬಾ ವಿಭಿನ್ನವಾಗಿರಲಿದೆ ಎಂದು ವರದಿಯಾಗಿದೆ. ಯಶ್ ಅವರಂತಹ ಮಾಸ್ ಹೀರೋ ಪಕ್ಕದಲ್ಲಿ ರುಕ್ಮಿಣಿಯಂತಹ ಕ್ಲಾಸಿಕ್ ಸುಂದರಿ ಹೇಗೆ ಕಾಣುತ್ತಾರೆಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).