ತಾರಾಗಣ: ರಿತ್ವಿಕ್ ಮಠದ್, ಚೈತ್ರಾ ಜೆ. ಆಚಾರ್, ಸೋನು ಗೌಡ, ಜ್ಯೋತಿಷ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ಸ್ವರಾಜ್ ಶೆಟ್ಟಿ ಮತ್ತಿತರರು
ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ... ಎಂಬ ಗೋಪಾಲಕೃಷ್ಣ ಅಡಿಗರ ಸಾಲು ಮತ್ತು ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು, ಹರುಷಕ್ಕಿದೇ ದಾರಿ... ಎಂಬ ಡಿವಿಜಿಯವರ ಕಗ್ಗ ಒಂದಕ್ಕೊಂದು ವಿರುದ್ಧಗಳಾಗಿದ್ದರೂ, ಎರಡೂ ಸರಿಯೇ! ಇದೇ ಸಾಲಿನಲ್ಲಿ ಸಾಗುವ ಸಿನಿಮಾ "ಮಾರ್ನಮಿ'!
ಸಿಡುಬಿಗೆ ತುತ್ತಾಗುವ ಚೇತು (ರಿತ್ವಿಕ್), ಹುಷಾರಾದರೆ ಮಗನಿಗೆ ಪ್ರತಿ ಮಾರ್ನಮಿ ಹಬ್ಬದಲ್ಲೂ ಹುಲಿವೇಷ ಹಾಕಿಸುತ್ತೇನೆ ಎಂದು ಹರಕೆ ಹೊರುವ ತಾಯಿ. ಅತ್ತ ಮಗ ಹುಷಾರಾದರೂ, ತಾಯಿ ಟಿಬಿಗೆ ಬಲಿಯಾಗಿಬಿಡುತ್ತಾಳೆ. ಅಲ್ಲಿಗೆ ಚೇತು ಕೂಡ ಮುನಿಸಿಕೊಂಡು ಹುಲಿವೇಷ ಹಾಕುವುದಿಲ್ಲ ಎಂದುಬಿಡುತ್ತಾನೆ. ತಬ್ಬಲಿಯಾಗುವ ಚೇತುಗೆ ಮಾವ ಆಸರೆಯಾಗುತ್ತಾನೆ. ಬಾಲ್ಯದಲ್ಲೇ ಅಪ್ಪ&ಅಮ್ಮನನ್ನು ಕಳೆದುಕೊಳ್ಳುವ ಚೇತುಗೆ ತನ್ನದೊಂದು ಪುಟ್ಟ ಕುಟುಂಬ ಇರಬೇಕು, ಹೆಂಡತಿ, ಮಕ್ಕಳು ಎಲ್ಲ ಖುಷಿಯಾಗಿರಬೇಕು ಎಂಬ ಕನಸು. ಅಂತಹ ಚೇತು ಮೇಲೆ ದೀಾಗೆ (ಚೈತ್ರಾ) ಮನಸ್ಸಾಗುತ್ತದೆ. ಆತನನ್ನು ಒಲಿಸಿಕೊಳ್ಳಲೇಬೇಕೆಂದು ಹಠಕ್ಕೆ ಬೀಳುತ್ತಾಳೆ. ತನ್ನ ಕನಸ್ಸಿಗೆ ದೀಾ ದೀೆ ನೀಡುತ್ತಾಳೆ ಎಂಬ ಆಸೆಯೊಂದಿಗೆ ಚೇತು ಕೂಡ ಒಪು$್ಪತ್ತಾನೆ. ಇನ್ನೇನು ನಮ್ಮ ಸಂಸಾರ ಆನಂದ ಸಾಗರ ಎನ್ನುತ್ತಿರುವಾಗಲೇ, ಈ ಪುಟ್ಟ ಕುಟುಂಬದಲ್ಲೊಂದು ಸುನಾಮಿ ಎದ್ದು, ಎಲ್ಲವೂ ಅಲ್ಲೋಲ&ಕಲ್ಲೋಲ. ಹಾಗಾದರೆ ಮುಂದೆ? "ಮಾರ್ನಮಿ' ನೋಡಿ.
ನಿರ್ದೇಶಕ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನದಲ್ಲೇ ಮೇಕಿಂಗ್ ಹಾಗೂ ಕಂಟೆಂಟ್ ವಿಷಯದಲ್ಲಿ ಸವಾಲಿನ ಸಿನಿಮಾ ಮಾಡಿದ್ದಾರೆ. ಕರಾವಳಿ ಕಥೆ, ಅಲ್ಲಿನ ಆಚರಣೆ, ಹುಲಿವೇಷ, ಮಾರ್ನಮಿ ಹಬ್ಬ, ಅಲ್ಲಿನ ರಾಜಕೀಯ, ಗಲಾಟೆಯ ಜತೆಜತೆಗೆ ಪ್ರೀತಿ, ಆಸೆ, ಕನಸು, ಸಂಬಂಧಗಳ ಮೌಲ್ಯ, ವಿಲಕ್ಷಣ ಟ್ವಿಸ್ಟ್ಗಳು... ಚಿತ್ರವನ್ನು ನೋಡಿಸಿಕೊಳ್ಳುತ್ತವೆ. ಮೊದರ್ಲಧ ಸೆಳೆದುಕೊಂಡರೂ, ದ್ವೀತಿಯಾರ್ಧ ಕಳೆದುಕೊಳ್ಳುವ ಅನುಭವ ನೀಡುತ್ತದೆ. ಕರಾವಳಿಯ ಆಪ್ತ ಸಂಭಾಷಣೆ, ಅದಕ್ಕೆ ತಕ್ಕ ಚರಣರಾಜ್ ಹಿನ್ನೆಲೆ ಸಂಗೀತ "ಮಾರ್ನಮಿ'ಗೆ ಪೂರಕವಾಗಿವೆ. ಚೇತು ಪಾತ್ರದಲ್ಲಿ ನಾಯಕ ರಿತ್ವಿಕ್ ಮಠದ್ "ಮಾರ್ನಮಿ'ಯ ಪ್ರಮುಖ ಆಕರ್ಷಣೆ. ಎರಡು ಶೇಡ್ಗಳಲ್ಲಿ ಅವರು ಮಿಂಚಿದ್ದಾರೆ. ಚೈತ್ರಾ ಜೆ. ಆಚಾರ್ ಕೂಡ ವಿಭಿನ್ನ ಶೇಡ್ಗಳಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಪ್ರಕಾಶ್ ತುಮ್ಮಿನಾಡ್, ಸ್ವರಾಜ್ ಶೆಟ್ಟಿ, ಜ್ಯೋತಿಷ್ ಶೆಟ್ಟಿ ಸೇರಿ ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಇರುವುದರಲ್ಲೇ ಖುಷಿ ಪಡಬೇಕಾ? ಅಥವಾ ಇರದುದ್ದನ್ನು ಪಡೆಯಲು ಹೋಗಬೇಕಾ? ಯಾವುದು ಸರಿ? ಯಾವುದು ತಪು$್ಪ? ಎಂಬ ಯೋಚನೆಗೆ ತಳ್ಳುವ "ಮಾರ್ನಮಿ'ಯನ್ನು ಒಮ್ಮೆ ನೋಡಲಡ್ಡಿಯಿಲ್ಲ.