ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳು 
ಸ್ಯಾಂಡಲ್‌ವುಡ್

ಡಾಲಿ ಧನಂಜಯ್​ರಿಂದ ಹಿಡಿದು ಸಮಂತಾವರೆಗೆ... 2025ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳು! Rewind 2025 Celebrity Marriage

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವರ್ಷದಂತೆ 2025ರ ವರ್ಷವು ಕೂಡ ತುಂಬಾ ವಿಶೇಷವಾಗಿತ್ತು
  • 2025ನೇ ವರ್ಷ ಕೆಲವರಿಗೆ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೊಗುತ್ತಿದೆ
  • ಅನೇಕ ತಾರೆಯರು ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನು ಆರಂಭಿಸಿದರು
ನವದೆಹಲಿ: ಪ್ರತಿ ವರ್ಷದಂತೆ 2025 ಕೂಡ ತುಂಬಾ ವಿಶೇಷವಾಗಿತ್ತು. ಈ ವರ್ಷ ಕೆಲವರಿಗೆ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೊಗುತ್ತಿದೆ. ಆ ನೆನಪುಗಳಲ್ಲಿ ಮದುವೆಗಳು ಕೂಡ ತುಂಬಾ ವಿಶೇಷವಾಗಿದೆ. ಅನೇಕ ತಾರೆಯರು ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನು ಆರಂಭಿಸಿದರು. ಯಾವ ಯಾವ ಕಲಾವಿದರು ಈ ವರ್ಷ ದಾಂಪತ್ಯ ಜೀವನಕ್ಕೆ ( Rewind 2025 Celebrity Marriage ) ಕಾಲಿಟ್ಟರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. 

ಅಖಿಲ್​ ಮತ್ತು ಜೈನಾಬ್​

ಟಾಲಿವುಡ್ ಕಿಂಗ್ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ಈ ವರ್ಷ ವಿವಾಹವಾದರು. ಕಳೆದ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ತನ್ನ ಗೆಳತಿ ಜೈನಾಬ್ ಜೊತೆ ಏಳು ಹೆಜ್ಜೆ ಇಟ್ಟರು. ಜೂನ್ 6 ರಂದು ಅವರ ವಿವಾಹ ಅದ್ಧೂರಿಯಾಗಿ ನಡೆಯಿತು.

ಡಾಲಿ ಧನಂಜಯ weds ಧನ್ಯಾತಾ

ಸ್ಯಾಂಡಲ್​ವುಡ್​ ಸ್ಟಾರ್​ ನಟ ಡಾಲಿ ಧನಂಜಯ್​ ಅವರು ಫೆಬ್ರವರಿ 16ರಂದು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರೊಂದಿಗೆ ವಿವಾಹವಾದರು. ಇದು ಈ ವರ್ಷದ ಆರಂಭದಲ್ಲಿ ನಡೆದ ಅದ್ಧೂರಿ ವಿವಾಹವಾಗಿದೆ.

ಆ್ಯಂಕರ್​ ಅನುಶ್ರೀ ಹಾಗೂ ರೋಷನ್​ ಮದುವೆ

ನಿಮ್ಮ ಮದುವೆ ಯಾವಾಗ ಎಂದು ಅನೇಕ ವರ್ಷಗಳಿಂದ ಸದಾ ಎದುರಾಗುತ್ತಿದ್ದ ಪ್ರಶ್ನೆಗಳಿಗೆ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಈ ವರ್ಷ ಪೂರ್ಣ ವಿರಾಮ ಹಾಕಿದರು. ಆಗಸ್ಟ್ 28ರಂದು ಉದ್ಯಮಿ ರೋಷನ್ ಅವರನ್ನು ಅನುಶ್ರೀ ವಿವಾಹವಾದರು.

ವೈಷ್ಣವಿ ಗೌಡ ವಿವಾಹ

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಕಿರುತೆರೆ ಕಲಾವಿದೆ ವೈಷ್ಣವಿ ಗೌಡ ಅವರು ಬೆಂಗಳೂರಿನಲ್ಲಿ ಭಾರತೀಯ ವಾಯುಸೇನೆ ಅಧಿಕಾರಿ ಅನುಕೂಲ್ ಮಿಶ್ರಾ ಅವರನ್ನು ವಿವಾಹವಾದರು. ಜೂನ್​ 6ರಂದು ವೈಷ್ಣವಿ ಅವರ ವಿವಾಹ ನಡೆಯಿತು. 

ಸಮಂತಾ-ರಾಜ್​ ನಿಡಿಮೋರು

ಸ್ಟಾರ್​ ನಟಿ ಸಮಂತಾ ರುತು ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಡಿಸೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರು ಅನೇಕ ತಿಂಗಳುಗಳಿಂದ ಪ್ರೀತಿ ಮಾಡುತ್ತಿದ್ದರು. ಅಂತಿಮವಾಗಿ ಡಿಸೆಂಬರ್​ 1ರಂದು ವಿವಾಹ ಆಗುವ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನು ಒತ್ತಿದರು. ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಿತು. ಇಲ್ಲಿ ವಿಶೇಷ ಸಂಗತಿ ಏನೆಂದರೆ, ಇದು ಇಬ್ಬರಿಗೂ ಎರಡನೇ ಮದುವೆ.

ಅವಿಕಾ ಗೋರ್- ಮಿಲಿಂದ್ ಚಾಂದ್ವಾನಿ

ಬಾಲನಟಿಯಾಗಿ ಬಂದು ನಟಿಯಾಗಿಯೂ ಬೆಳ್ಳಿಪರದೆಯಲ್ಲಿ ಮಿಂಚಿದ ಅವಿಕಾ ಗೋರ್ ಕೂಡ ಈ ವರ್ಷ ವಿವಾಹವಾದರು. ಸೆಪ್ಟೆಂಬರ್ 30 ರಂದು ತಮ್ಮ ದೀರ್ಘಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಅವರನ್ನು ವರಿಸಿದರು.

ಅರ್ಮಾನ್ ಮಲಿಕ್-ಆಶ್ನಾ ಶ್ರಾಫ್

ಗಾಯಕ ಅರ್ಮಾನ್ ಮಲಿಕ್ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ತಮ್ಮ ಹಾಡುಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿರುವ ಗಾಯಕ. ಅರ್ಮಾನ್​ ಅವರು ತಮ್ಮ ಗೆಳತಿ ಆಶ್ನಾ ಶ್ರಾಫ್ ಅವರನ್ನು ವಿವಾಹವಾದರು. ಅವರ ವಿವಾಹವು ಜನವರಿ 2 ರಂದು ಅದ್ಧೂರಿಯಾಗಿ ನಡೆಯಿತು.

ಅಭಿಶಾನ್ ಜೀವಿಂತ್- ಅಖಿಲಾ

ಟೂರಿಸ್ಟ್ ಫ್ಯಾಮಿಲಿ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದ ನಿರ್ದೇಶಕ ಅಭಿಶನ್ ಜೀವಿಂತ್ ಕೂಡ 2025 ರಲ್ಲಿ ತಮ್ಮ ಬ್ಯಾಚುಲರ್ ಜೀವನಕ್ಕೆ ಅಂತ್ಯ ಹಾಡಿದರು. ಅಕ್ಟೋಬರ್ 31 ರಂದು ಅವರು ತಮ್ಮ ಗೆಳತಿ ಅಖಿಲಾಳನ್ನು ವಿವಾಹವಾದರು.
ಇವರಲ್ಲದೆ, ಆಶ್ಲೇಷಾ ಸಾವಂತ್-ಸಂದೀಪ್ ಬಸವನ, ಅರ್ಚನಾ-ಬಿ.ಆರ್. ಶರತ್, ಕೆಜಿಎಫ್​ ಖ್ಯಾತಿ ಛಾಯಾಗ್ರಾಹಕ ಭುವನ್​ ಗೌಡ-ನಿಖಿತಾ, ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್​ ಕುಮಾರ್​-ಚಿತ್ರಾ, ಸಾರಾ ಖಾನ್-ಕ್ರಿಶ್ ಪಾಠಕ್, ಸೆಲಿನಾ ಗೊಮೆಜ್-ಬೆನ್ನಿ ಬ್ಲಾಂಕೊ, ದರ್ಶನ್ ರಾವಲ್-ದರಾಲ್ ಸುರೇಲಿಯಾ, ಅದಾರ್ ಜೈನ್-ಅಲೇಖಾ ಅಡ್ವಾಣಿ, ಪ್ರತೀಕ್ ಬಾಬರ್-ಪ್ರಿಯಾ ಬ್ಯಾನರ್ಜಿ ಮುಂತಾದವರು ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು.