Rashmika Mandanna (ಚಿತ್ರ Instagram)
- ನನ್ನ ಪ್ರೀತಿಯ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವನು ಹುಟ್ಟಿದ ದಿನದಿಂದಲೂ ನನ್ನ ಜೊತೆಯಲ್ಲೇ ಇದ್ದಾನೆ
- ಆನಂದ್ ಅಂತಹ ಸಹೋದರನನ್ನು ಪಡೆದಿರುವುದು ನನ್ನ ಪುಣ್ಯ ಮತ್ತು ನಾನು ನಿಜಕ್ಕೂ ಅದೃಷ್ಟ
- ನೀನು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದೀಯಾ, ನಾವು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ
Rashmika Mandanna: ಇತ್ತೀಚಿಗೆ ವಿವಾಹವಾದ ಟಾಲಿವುಡ್ನ ಸೂಪರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾದಾಗಿನಿಂದನೂ ಒಂದಲ್ಲ ಒಂದು ವಿಷಯಗಳಿಗಾಗಿ ಸುದ್ದಿಯಲ್ಲಿದ್ದಾರೆ. ಆದಾಗ್ಯೂ, ಆನಂದ್ ದೇವರಕೊಂಡ ಅವರ ಹುಟ್ಟುಹಬ್ಬದಂದು ಈ ಜೋಡಿ ಹಂಚಿಕೊಂಡಿರುವ ಪೋಸ್ಟ್ ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ.
ಪೋಸ್ಟ್ನಲ್ಲೇನಿದೆ?
ವಿಜಯ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆನಂದ್ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡು "ನನ್ನ ಪ್ರೀತಿಯ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವನು ಹುಟ್ಟಿದ ದಿನದಿಂದಲೂ ನನ್ನ ಜೊತೆಯಲ್ಲೇ ಇದ್ದಾನೆ. ಆನಂದ್ ಅಂತಹ ಸಹೋದರನನ್ನು ಪಡೆದಿರುವುದು ನನ್ನ ಪುಣ್ಯ ಮತ್ತು ನಾನು ನಿಜಕ್ಕೂ ಅದೃಷ್ಟವಂತ ಎಂದು ಭಾವಿಸುತ್ತೇನೆ. ನೀನು ನಮ್ಮೆಲ್ಲರ ನೆಚ್ಚಿನ ಹುಡುಗ; ನೀನು ಸಾಧಿಸುವ ಪ್ರತಿಯೊಂದನ್ನೂ ನಾವು ಹೆಮ್ಮೆ ಮತ್ತು ಸಂತೋಷದಿಂದ ನೋಡುತ್ತೇವೆ. ತಮ್ಮಾ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಭಾವನಾತ್ಮಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಕಿತ್ತಳೆ ಬಣ್ಣದ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ರಶ್ಮಿಕಾ ಆನಂದ್.. ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!! ನೀನು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದೀಯಾ, ನಾವು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಿನ್ನ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ನಮಗೆ ತಿಳಿದಿದೆ. ಅಂದಹಾಗೆ, ಈ ಫೋಟೋ ತೆಗೆಯುವಾಗ ನಾವು ಮೀನುಗಳನ್ನು ಕರೆಯುತ್ತಿದ್ದೆವು ಎಂದು ವಿಜ್ಜು ಹೇಳಿದ ನೆನಪು. ಆನಂದ್.. ಮೀನುಗಳನ್ನು ಕರೆಯುವ ಈ ನಮ್ಮ ಹುಚ್ಚಾಟ ಸದಾ ಹೀಗೆಯೇ ಇರಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇತ್ತೀಚಿಗೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರ ಕುಟುಂಬದೊಂದಿಗೆ ಸಂಭ್ರಮಿಸುತ್ತಿರುವ ಅಪರೂಪದ ವಿಡಿಯೋವೊಂದನ್ನು ಆನಂದ್ ದೇವರಕೊಂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸಧ್ಯ ಎಲ್ಲೆಡೆ ವೈರಲ್ ಆಗಿತ್ತು.
ವಿಡಿಯೋದಲ್ಲೇನಿದೆ?
ಮನೆಯ ಆವರಣದಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ಆನಂದ್, ವಿಜಯ್, ರಶ್ಮಿಕಾ ಮತ್ತು ಹೆಜ್ಜೆ ಹಾಕುವುದನ್ನು ತೋರಿಸಲಾಗಿದೆ. ಇದು ಹಚ್ಚ ಹಸಿರಿನ ಹುಲ್ಲುಹಾಸಿನ ಮೇಲೆ ಸ್ನೇಹಿತರ ಗುಂಪಿನೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯವು ಒಂದು ಸುಂದರವಾದ ಕೌಟುಂಬಿಕ ಸಭೆಯ ಚಿತ್ರಣವನ್ನು ನೀಡಿದೆ.
ಈ ವಿಡಿಯೋದಲ್ಲಿ ವಿಜಯ್ ಬಿಳಿ ಪ್ಯಾಂಟ್ ಜೊತೆಗೆ ಬಣ್ಣ-ಬಣ್ಣದ ಶರ್ಟ್ ಧರಿಸಿದ್ದರೆ, ರಶ್ಮಿಕಾ ಶಾರ್ಟ್ಸ್ ಮತ್ತು ಕ್ಯಾಶುವಲ್ ಶರ್ಟ್ ಧರಿಸಿದ್ದಾರೆ. ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ ಎಪಿಕ್ ನ 'ಸಂಚಾರಮೆ' ಹಾಡಿಗೆ ಮುಕ್ತವಾಗಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವಂತೆ ಕಾಣುತ್ತದೆ.
ನೋಡಲು ಇದು ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು, ಆದರೆ ಆ ಕ್ಷಣದಲ್ಲಿ ನಾವು 'ಸಂಚಾರಮೆ' ಹಾಡನ್ನು ಕೇಳುತ್ತಾ ಅತೀವ ಸಂತೋಷಪಟ್ಟೆವು. ನಾವು ಪ್ರೀತಿಸುವವರ ಜೊತೆಗೂಡಿ ಪ್ರವಾಸ ಮಾಡುವುದು ಮತ್ತು ನೃತ್ಯ ಮಾಡುವುದಕ್ಕಿಂತ ಹೆಚ್ಚಿನ ಆನಂದ ಬೇರೆ ಯಾವುದಿದೆ? ಎಂದು ಆನಂದ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದರು (ಏಜೆನ್ಸೀಸ್).