ಮುಂಬೈ: ( rashmika mandanna) ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಪ್ರತಿಕ್ರಿಯೆ ಮತ್ತಷ್ಟು ಪುಷ್ಟಿ ನೀಡಿದೆ.
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಅವರನ್ನು ಪಾಪರಾಜಿಗಳು (ಫೋಟೋಗ್ರಾಫರ್‌ಗಳು) ಸುತ್ತುವರೆದಿದ್ದರು. ಈ ಸಂದರ್ಭದಲ್ಲಿ ಫೋಟೋಗ್ರಾಫರ್ ಒಬ್ಬರು ಕುತೂಹಲದಿಂದ, "ನಮಗೆಲ್ಲಾ ಯಾವಾಗ ಮದುವೆ ಊಟ ಹಾಕಿಸುತ್ತೀರಾ? ಅಂದರೆ ವಿಜಯ್ ಅವರ ಜೊತೆ ಮದುವೆ ಯಾವಾಗ?" ಎಂದು ನೇರವಾಗಿ ಕೇಳಿದ್ದಾರೆ.
ಈ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ರಶ್ಮಿಕಾ ಮಂದಣ್ಣ ಅವರು ಜೋರಾಗಿ ನಗುತ್ತಾ ಮುಖ ಮುಚ್ಚಿಕೊಂಡಿದ್ದಾರೆ. ಯಾವುದೇ ನೇರ ಉತ್ತರ ನೀಡದಿದ್ದರೂ, ಅವರ ಮುಖದಲ್ಲಿದ್ದ ಆ 'ನಾಚಿಕೆ' ಮತ್ತು ಸುಂದರ ಕಿರುನಗೆಯನ್ನು ಕಂಡ ಅಭಿಮಾನಿಗಳು, "ಇದು ಮೌನ ಸಮ್ಮತಿಯೇ?" ಎಂದು ಚರ್ಚಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗುವವರೆಗೂ ರಶ್ಮಿಕಾ ನಾಚುತ್ತಲೇ ಪ್ರತಿಕ್ರಿಯಿಸಿದ್ದು ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, 'ವಿರೋಶ್' (ViRash) ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ರಶ್ಮಿಕಾ, ವಿಜಯ್ ದೇವರಕೊಂಡ ಆಗಾಗ ಒಟ್ಟಿಗೆ ರಜೆ ಕಳೆಯುವುದು, ಒಂದೇ ರೀತಿಯ ಸ್ಥಳಗಳಲ್ಲಿ ಫೋಟೋ ಹಂಚಿಕೊಳ್ಳುವುದು ಈ ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಮದುವೆಯ ವಿಚಾರದ ಬಗ್ಗೆ ಇಬ್ಬರೂ ಈವರೆಗೆ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಬಗ್ಗೆ ವದಂತಿಗಳು ಹರಡುತ್ತಿವೆ. ಫೆಬ್ರವರಿಯಲ್ಲಿ ಇಬ್ಬರು ನಟರು ವಿವಾಹವಾಗಲಿದ್ದಾರೆ ಎಂದು ಜನರು ನಂಬುತ್ತಾರೆ. ಆದಾಗ್ಯೂ, ಈ ಸುದ್ದಿಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಇಬ್ಬರೂ ಹಲವಾರು ಕಾರ್ಯಕ್ರಮಗಳಲ್ಲಿ ಪರಸ್ಪರ ಹೊಗಳುತ್ತಿರುವುದು ಕಂಡುಬಂದಿದೆ. ವಿಜಯ್ ಹೆಸರು ಹೇಳಿದಾಗಲೆಲ್ಲಾ ರಶ್ಮಿಕಾ ನಾಚಿಕೆಪಡುತ್ತಾರೆ. ಇಬ್ಬರ ನಡುವೆ ಪ್ರಣಯ ಸಂಬಂಧದ ವದಂತಿಗಳು ಬಹಳ ಸಮಯದಿಂದ ಹರಡುತ್ತಿವೆ.